Menu

25 ವರ್ಷದ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಪ್ರತ್ಯಕ್ಷ: ಮೈದುನನ ಮದುವೆಯಾಗಿ ಮಕ್ಕಳ ತಾಯಿಯಾಗಿರುವ ಪತ್ನಿ

ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ 25 ವರ್ಷದ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಮನೆಯವರ ಎದುರು ಪ್ರತ್ಯಕ್ಷರಾಗಿ ಒಂದೆಡೆ ಸಂತೋಷ , ಮತ್ತೊಂದೆಡೆ ಕಳವಳಕ್ಕೆ ಕಾರಣರಾಗಿರುವ ಘಟನೆ ನಡೆದಿದೆ.

25 ವರುಷದ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಸತ್ತು ಹೋಗಿರುವುದಾಗಿ ಮನೆಯವರೆಲ್ಲ ನಿರ್ಧರಿಸಿ ಆತನ ಹೆಂಡತಿಯನ್ನು ಮೈದುನನಿಗೆ ಅಂದರೆ ನಾಪತ್ತೆಯಾಗಿದ್ದ ವ್ಯಕ್ತಿಗೆ ಮದುವೆ ಮಾಡಿದ್ದಾರೆ. ಆಕೆ ಮೈದುನನ ಪತ್ನಿಯಾಗಿ ಮಕ್ಕಳ ತಾಯಿಯಾಗಿದ್ದಾಳೆ.

ಪಂಜಾಬ್‌ನ ಕಪುರ್ತಲಾ ಜಿಲ್ಲೆಯ ಶಿವದಯಾಳ್ ವಾಲಾ ಗ್ರಾಮದ ಹನ್ಸಾ ಸಿಂಗ್ 25 ವರ್ಷದ ಹಿಂದೆ ನಿಗೂಢವಾಗಿ ಕಾಣೆಯಾಗಿದ್ದರು. ಮದುವೆಯಾದ ಎರಡು ವರ್ಷಗಳಲ್ಲೇ ಹನ್ಸಾ ಕಾಣೆಯಾಗಿದ್ದರಿಂದ ಕುಟುಂಬದವರು ಮೂರು ವರ್ಷದ ಬಳಿಕ ಸತ್ತುಹೋಗಿರಬಹುದು ಎಂದು ಭಾವಿಸಿ ಅಂತ್ಯಕ್ರಿಯೆ ಮಾಡಿದ್ದರು.

ಹನ್ಸಾ ಅವರ ಪತ್ನಿ ವಿಮಲಾ ದೇವಿಯ ಭವಿಷ್ಯದ ದೃಷ್ಟಿಯಿಂದ ಆಕೆಯನ್ನು ಹನ್ಸಾ ಅವರ ಕಿರಿಯ ಸಹೋದರ ಸುಖ ಸಿಂಗ್‌ ಜೊತೆ ಮದುವೆ ಮಾಡಿದ್ದರು. 22 ವರ್ಷಗಳಿಂದ ವಿಮಲಾ ಸುಖ ಸಿಂಗ್ ಜೊತೆ ಸಂಸಾರ ನಡೆಸುತ್ತಿದ್ದು, ಮೂವರು ಮಕ್ಕಳಿದ್ದಾರೆ ಮತ್ತು ಮಗಳ ಮದುವೆಯೂ ಆಗಿದೆ.

ಮೂರು ದಿನಗಳ ಹಿಂದೆ ಬಿಜ್ನೋರ್ ಜಿಲ್ಲೆಯ ನಹ್ತೌರ್ ಮಾರುಕಟ್ಟೆಯಲ್ಲಿ ಹರಿದ ಬಟ್ಟೆ ಧರಿಸಿದ್ದ, ಉದ್ದನೆಯ ಗಡ್ಡ ಬಿಟ್ಟಿದ್ದ ವ್ಯಕ್ತಿಯೊಬ್ಬರು ಅಸಹಾಯಕ ಸ್ಥಿತಿಯಲ್ಲಿ ಅಲೆದಾಡುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಟೇಷನ್ ಹೌಸ್ ಆಫೀಸರ್ ರವೀಂದ್ರ ಪ್ರತಾಪ್ ಸಿಂಗ್ ವ್ಯಕ್ತಿಯನ್ನು ವಿಚಾರಿಸಿದಾಗ ಹೆಸರು ಹನ್ಸಾ ಸಿಂಗ್ ಮತ್ತು ಊರು ಪಂಜಾಬ್‌ನ ಕಪುರ್ತಲಾ ಎಂದು ಹೇಳಿದ್ದಾನೆ.

ಪಂಜಾಬ್ ಪೊಲೀಸರನ್ನು ಸಂಪರ್ಕಿಸಿದ ಬಿಜ್ನೋರ್ ಪೊಲೀಸರು, ಹನ್ಸಾ ಕುಟುಂಬಕ್ಕೆ ಮಾಹಿತಿ ನೀಡಿದರು. ಹನ್ಸಾ ಅವರ ಸಹೋದರ ಮತ್ತು ಗ್ರಾಮದ ಮುಖ್ಯಸ್ಥರು ಸ್ಥಳಕ್ಕೆ ಬಂದರು. ಮೊದಲ ನೋಟಕ್ಕೆ ಸಹೋದರನಿಗೂ ಹನ್ಸಾನನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಹನ್ಸಾ ತನ್ನ ಬಾಲ್ಯದ ಗೆಳೆಯರು ಮತ್ತು ಕುಟುಂಬದ ಹಳೆಯ ನೆನಪುಗಳನ್ನು ಹೇಳಿದಾಗ ಗೊತ್ತಾಗಿದೆ.

Related Posts

Leave a Reply

Your email address will not be published. Required fields are marked *