ಬೆಳಗಾವಿಯ ತಾರಿಹಾಳ ಬಳಿ ರಭಸವಾಗಿ ಹರಿಯುತ್ತಿದ್ದ ಹಳ್ಳ ದಾಟಲು ಹೋಗಿ ಬೈಕ್ ಸಮೇತ ವ್ಯಕ್ತಿ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಪಂಚಾಯತ್ ಸಿಬ್ಬಂದಿ ಸುರೇಶ್ ನಿಜಗುಣಿ ಗುಂಡನ್ನವರ್ (50) ಕೊಚ್ಚಿ ಹೋಗಿರುವ ವ್ಯಕ್ತಿ.
ಪಂಚಾಯತ್‌ನಲ್ಲಿ ಕೆಲಸ ಮುಗಿಸಿ ಮನೆಗೆ ಹೋಗುವಾಗ ಈ ದುರಂತ ನಡೆದಿದೆ. ಸುರೇಶ್‌ಗಾಗಿ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಳಗಾವಿಯಲ್ಲಿ ಮುಂಗಾರು ಮಳೆಯ ಆರ್ಭಟ ಹೆಚ್ಚಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಹುಬ್ಬಳ್ಳಿ, ಬೀದರ್, ವಿಜಯಪುರಗಳಲ್ಲೂ ಭಾರಿ ಮಳೆಗೆ ಸಂಚಾರ ಅಸ್ತವ್ಯಸ್ತಗೊಂಡಿದೆ. ನಾಲತವಾಡಿ, ಬಸವನ ಬಾಗೇವಾಡಿ, ಮುದ್ದೆ ಬಿಹಾಳ, ಜಮಖಂಡಿ, ಮುದ್ದೇಬಿಹಾಳಗಳ್ಲಲೂ ವ್ಯಾಪಕ ಮಳೆ ಸುರಿದಿದೆ.