ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಸುಮಾರು ಮೂರ್ನಾಲ್ಕು ತಿಂಗಳಿಂದ ನಿಲ್ಲಿಸಲಾಗಿದ್ದ ಶಾಲಾ ಬಸ್‌ಗೆ ಬೆಂಕಿ ಹೊತ್ತಿಕೊಂಡು ವ್ಯಕ್ತಿ ಮೃತಪಟ್ಟಿದ್ದು, ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಬಸ್ ಮಾರುವುದಕ್ಕಾಗಿ ಮಾಲೀಕ ತನ್ನ ಮನೆ ಸಮೀಪ ನಿಲ್ಲಿಸಿದ್ದರು. ಆದರೆ ಆ ಜಾಗ ಪಡ್ಡೆ ಹುಡುಗರ ಅಡ್ಡೆಯಾಗಿತ್ತು. ಎಷ್ಟು ಬಾರಿ ಬಸ್ ಡೋರ್ ಲಾಕ್ ಮಾಡಿದರೂ ಹುಡುಗರು ಒಳಗೆ ಹೋಗಿ ಕುಳಿತುಕೊಳ್ಳುತ್ತಿದ್ದರು.
ಅವರ ನಡುವೆ ಗಲಾಟೆ ಆಗಿ ಕೊಲೆ ನಡೆದಿರುವ ಶಂಕೆಯಿದೆ.
ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಬಸ್ ಪೂರ್ತಿ ಸುಟ್ಟು ಕರಕಲಾಗಿದೆ. ರಾಮಮೂರ್ತಿ ನಗರ ಪೊಲೀಸರು ಅನುಮಾನಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.