ಮೀರತ್ನ ಸೂರಜ್ಕುಂಡದಲ್ಲಿರುವ ದೇವನಗರದ ಶೋ ರೂಂಶೋರೂಂನ ಲಿಫ್ಟ್‌ನಲ್ಲಿ ತಲೆ ಸಿಲುಕಿ ಉದ್ಯಮಿಯೊಬ್ಬರು ಮೃತಪಟ್ಟಿದ್ದಾರೆ. ಇಂಡಿಯನ್ ಸ್ಪೋರ್ಟ್ಸ್ ಹೌಸ್ ಮಾಲೀಕ ಹರ್ವಿಂದರ್ ಸಿಂಗ್ ಮೃತಪಟ್ಟವರು.
ಎರಡನೇ ಮಹಡಿಗೆ ಹೋಗಲು ಕಾರ್ಗೋ ಲಿಫ್ಟ್ ಬಳಸುತ್ತಿದ್ದಾಗ ವಿದ್ಯುತ್ ಕಡಿತಗೊಂಡಿತ್ತು. ತಲೆಯನ್ನು ಹೊರಗೆ ತಲೆ ಹಾಕಿ ನೋಡುತ್ತಿದ್ದಾಗ ಏಕಾಏಕಿ ವಿದ್ಯುತ್ ಆನ್ ಆಗಿ ಲಿಫ್ಟ್ ಚಲಿಸಲು ಆರಂಭಿಸಿತ್ತು. ಅವರ ತಲೆ ಲಿಫ್ಟ್ ಮಧ್ಯೆ ಸಿಕ್ಕಿಬಿದ್ದು ದುರಂತ ಸಂಭವಿಸಿದೆ.
ಸಿಸಿಟಿವಿಯಲ್ಲಿ ಸಿಬ್ಬಂದಿ ಅವರನ್ನು ಗಮನಿಸುವಾಗ 30 ನಿಮಿಷ ಆಗಿತ್ತು, ಲಿಫ್ಟ್ ಅನ್ನು ಬಲವಂತವಾಗಿ ತೆರೆದು ದೇಹವನ್ನು ಹೊರತೆಗೆದು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು.
ಮೊನ್ನೆಯಷ್ಟೇ ಲಿಫ್ಟ್‌ನಲ್ಲಿ ಸಿಲುಕಿ ಶಾಲಾ ಮಕ್ಕಳ ಎದುರೇ 26 ವರ್ಷದ ಶಿಕ್ಷಕಿ ಮೃತಪಟ್ಟಿದ್ದರು. ಮುಂಬೈನ ಮಲಾಡ್ ವೆಸ್ಟ್‌ನ ಎಸ್‌ವಿ ರಸ್ತೆಯಲ್ಲಿರುವ ಚಿಂಚಲಿ ಸಿಗ್ನಲ್ ಬಳಿಯ ಸೇಂಟ್ ಮೇರಿ ಇಂಗ್ಲಿಷ್ ಶಾಲೆಯಲ್ಲಿ ಈ ಘಟನೆ ನಡೆದಿದೆ. ಮೃತ ಶಿಕ್ಷಕಿಯನ್ನು ಜಿನಾಲ್ ಫರ್ನಾಂಡಿಸ್ ಎಂದು ಗುರುತಿಸಲಾಗಿದೆ. ಅವರು ಲಿಫ್ಟ್‌ನೊಳಗೆ ಕಾಲಿಡಬೇಕಾದರೆ ಲಿಫ್ಟ್ ಇದ್ದಕ್ಕಿದ್ದಂತೆ ಮೇಲಕ್ಕೆ ಚಲಿಸಲು ಪ್ರಾರಂಭಿಸಿತು. ಆದರೆ ಅವರ ಒಂದು ಕಾಲು ಲಿಫ್ಟ್‌ನೊಳಗೆ ಮತ್ತು ಅವರ ದೇಹವು ಹೊರಗೆ ಸಿಲುಕಿಕೊಂಡಿತ್ತು.