ನೆಲಮಂಗಲದ ಅಪಾರ್ಟ್ಮೆಂಟ್‌ವೊಂದರ 24ನೇ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಅಲಸೂರು ಮೂಲದ ಲೋಕೇಶ್ ಪವನ್ ಕೃಷ್ಣ (26) ಆತ್ಮಹತ್ಯೆ ಮಾಡಿಕೊಂಡವರು.
ಲೋಕೇಶ್‌ನ ಅಕ್ಕ ಹಾಗೂ ಭಾವ ಇದೇ ಅಪಾರ್ಟ್ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಭಾವ ಕೆಲಸದ ಮೇಲೆ ಹೊರಗೆ ಹೋಗಿದ್ದರು. ಅಕ್ಕ ಗರ್ಭಿಣಿಯಾಗಿದ್ದರಿಂದ ತವರು ಮನೆಗೆ ಬಂದಿದ್ದರು. ಲೋಕೇಶ್ ಅಕ್ಕನ ಮನೆಯ ಕೀ ತೆಗೆದುಕೊಂಡು ಅಪಾರ್ಟ್ಮೆಂಟ್‌ಗೆ ಬಂದಿದ್ದ. ಎರಡು ದಿನ ಮನೆಯಲ್ಲಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅನಾರೋಗ್ಯದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ.
ಗೌರಿಬಿದನೂರಲ್ಲಿ ಗಣೇಶ ವಿಸರ್ಜನೆ ವೀಕ್ಷಿಸಲು ಹೊರಟ ಇಬ್ಬರು ಅಪಘಾತಕ್ಕೆ ಬಲಿ
ಗೌರಿಬಿದನೂರಿನ ಬೈಪಾಸ್ ಗಣೇಶ ವಿಸರ್ಜನೆ ವೀಕ್ಷಿಸಲು ಹೊರಟ ಇಬ್ಬರು ಕಾರು ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ವಡ್ಡರಬಂಡೆ ಗ್ರಾಮದ ಸಮೀಪ ನಡೆದಿದೆ. ವಡ್ಡರಬಂಡೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಬದಿ ನೀಲಗಿರಿ ಮರದೊಳಗೆ ತೂರಿಕೊಂಡಿದೆ.
ಕಾರಿನಲ್ಲಿದ್ದ ಮಂಚೇನಹಳ್ಳಿ ವಾಸಿ ಗೆದರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಎಫ್‌ಡಿಎ ಶಶಿ (42) ಹಾಗೂ ಮಂಚೇನಹಳ್ಳಿ ತಾಲೂಕಿನ ದಂಡಿಗಾನಹಳ್ಳಿಯ ಮೆಕ್ಯಾನಿಕ್ ಮುನಿರಾಜು (28) ಮೃತಪಟ್ಟಿದ್ದಾರೆ.
ಕಾರಿನಲ್ಲಿದ್ದ ಮಂಚೇನಹಳ್ಳಿಯ ಮುಕ್ಕಡಿಪೇಟೆಯ ರಮೇಶ್ (40) ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಚೇನಹಳ್ಳಿಯಿಂದ ಗೌರಿಬಿದನೂರಿನತ್ತ ಸಾಗುವಾಗ ವಡ್ಡರ ಬಂಡೆ ಬಳಿ ಕಾರು ನೀಲಗಿರಿ ಮರಕ್ಕೆ ಡಿಕ್ಕಿಯಾಗಿದೆ.