ಹಿಂದೂ ಸಾಮ್ರಾಜ್ಯೋತ್ಸವ ಸಮಾರಂಭದಲ್ಲಿ ಬಸನಗೌಡ ಪಾಟೀಲ್ ಯತ್ನಾಳ ಭಾಷಣದ ವೇಳೆ ವ್ಯಕ್ತಿಯೊಬ್ಬ ಮಾರಕಾಸ್ತ್ರ ಹಿಡಿದು ವೇದಿಕೆ ಮೇಲೆ ಬಂದಾಗ ರಾಯಚೂರು ಜಿಲ್ಲೆಯ ಲಿಂಗಸೂಗೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಭಾನುವಾರ ಶ್ರೀರಾಮನವಮಿ ನಿಮಿತ್ತ ಹಿಂದೂ ಸಾಮ್ರಾಜ್ಯೋತ್ಸವ ಹಮ್ಮಿಕೊಳ್ಳಲಾಗಿತ್ತು, ಕಾರ್ಯಕ್ರಮಕ್ಕೆ ವಿಜಯಪುರ ಶಾಸಕ ಬಸವನಗೌಡ ಯತ್ನಾಳ, ಪ್ರಮೋದ್ ಮುತಲೀಕ್ ಸೇರಿದಂತೆ ಹಿಂದೂ ಮುಖಂಡರು ವೇದಿಕೆ ಮೇಲೆ ಇದ್ದರು.
ಸಮಾರಂಭದಲ್ಲಿ ಬಸನಗೌಡ ಪಾಟೀಲ್ ಯತ್ನಾಳ ಭಾಷಣ ಮಾಡುತ್ತಿರುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಮಚ್ಚು ಹಿಡಿದು ವೇದಿಕೆ ಮೇಲೆ ಬಂದಿದ್ದು, ಸಾವಿರಾರು ಜನ ಕಾರ್ಯಕರ್ತರು, ಪೊಲೀಸ್ ಸಿಬ್ಬಂದಿಗಳ ಇದ್ದರು ಮಾರಕಸ್ತ್ರದೊಂದಿಗೆ ಬಂದಿದ್ದು ಏಕೆ ಎಂಬುದು ಚರ್ಚೆಗೆ ಗ್ರಾಸವಾಗಿದೆ.
ಪೊಲೀಸರ ಸಮಯಪ್ರಜ್ಞೆಯಿಂದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ವ್ಯಕ್ತಿ ನಾನು ಶೇಕ್ ಹುಸೇನ್ ಎಂಬ ವ್ಯಕ್ತಿಗೆ ಹಣ ಕೊಟ್ಟಿದ್ದೆ, ಹಣ ಕೇಳಿದ್ದಕ್ಕೆ ಬೆದರಿಕೆ ಹಾಕಿದ್ದ, ಆ ಭಯಕ್ಕೆ ನಾನು ಮಚ್ಚು ಇಟ್ಟುಕೊಂಡಿದ್ದೆ, ಲಿಂಗಸೂಗೂರು ನಿವಾಸಿಯಾಗಿದ್ದು , ಈ ಮಧ್ಯೆ ಶ್ರೀನಿವಾಸ ಉಪ್ಪಾರಗೆ ಮೂರು ಮಕ್ಕಳಿದ್ದು, ಮಗ 94% ಫಲಿತಾಂಶದಲ್ಲಿ ಪಿಯುಸಿ ಪಾಸಾಗಿದ್ದಾನೆ. ಪೊಲೀಸರು ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ.