ರಾಯಚೂರು ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಎಮರ್ಜೆನ್ಸಿ ಡೋರ್ ಮೂಲಕ ಸೀರೆಯುಟ್ಟ ಪುರುಷನೊಬ್ಬ ಪ್ರವೇಶಿಸಿದ್ದು, ಇಲ್ಲಿನ ಮಾರ್ಕೆಟ್ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ. ಶರಣಪ್ಪ ಬಂಧಿತ ಆರೋಪಿ.
ಸೀರೆಯುಟ್ಟು ಬಂದ ಪುರುಷನನ್ನು ಸ್ಥಳೀಯರು ತಡೆದು ಪ್ರಶ್ನಿಸಿದ್ದಾರೆ. ಯಾವ ವಾರ್ಡ್‌ಗೆ ಹೋಗಬೇಕು, ಭೇಟಿಯಾಗಲು ಬಂದಿರುವ ರೋಗಿ ಹೆಸರೇನು ಎಂದು ಪ್ರಶ್ನಿಸಿದ್ದಾರೆ. ಆಗ ಆರೋಪಿ ಏನೇನೋ ಹೇಳಿ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದ್ದು, ಅಲ್ಲಿದ್ದವರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸರ ವಿಚಾರಣೆ ವೇಳೆ ಆರೋಪಿ ಶರಣಪ್ಪ ತಾನು ಮಂಗಳಮುಖಿ ಎಂದು ಹೇಳಿಕೊಂಡಿದ್ದಾನೆ. ತಾನು ರಿಮ್ಸ್ ಆಸ್ಪತ್ರೆಯಲ್ಲಿ ಮಲಗಲು ಹೋಗಿದ್ದಾಗಿ ತಿಳಿಸಿದ್ದಾನೆ. ಆತನ ಮೇಲೆ ಅನುಮಾನಗೊಂಡು ಮಾರ್ಕೆಟ್ ಯಾರ್ಡ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.