2013 ರಲ್ಲಿ ಬೆಂಗಳೂರಿನ ಮಲ್ಲೇಶ್ವರಂ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರ ಅಬೂಬಕರ್ ಎಂಬಾತನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ತಮಿಳುನಾಡು ಉಗ್ರ ನಿಗ್ರಹ ಪಡೆಯು ಮೂವತ್ತು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಅಬೂಬಕರ್ ಮತ್ತು ಸಹಚರ ಮಹಮ್ಮದ್ ಅಲಿಯನ್ನು ಬಂಧಿಸಿದೆ.
ಪ್ರಕರಣದಲ್ಲಿ ಈತನ ಕೈವಾಡದ ಬಗ್ಗೆ ಸಾಕ್ಷ್ಯ ಸಿಕ್ಕಿತ್ತು. ಬಾಂಬ್ ತಯಾರಿಯಲ್ಲಿ ಪರಿಣತಿ ಹೊಂದಿದ್ದ ಅಬೂಬಕರ್ 1995 ರಿಂದಲೇ ಹಲವು ಪ್ರಕರಣಗಳಲ್ಲಿ ಭಾಗಿಯಾಗಿತಲೆ ಮರೆಸಿದ್ದ.
ದೇಶದ ಹಲವು ಕಡೆಗಳಲ್ಲಿ ಬಾಂಬ್ ಬ್ಲಾಸ್ಟ್ ಮತ್ತು ಪ್ರಮುಖ ಹಿಂದೂಪರ ಸಂಘಟನೆ ಮುಖಂಡ ಕೊಲೆಯಲ್ಲಿ ಈತನ ಪಾತ್ರ ಇರುವ ಬಗ್ಗೆ ತನಿಖೆಯಲ್ಲಿ ದೃಢಪಟ್ಟಿತ್ತು.