ವಿಳಂಬಗೊಳ್ಳುತ್ತಿರುವ ಈಜಿಪುರ ಫ್ಲೈಓವರ್ ಕಾಮಗಾರಿಯಿಂದ ನಾಗರಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ, ನೀವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜೊತೆ ಮಾತನಾಡಿ ಈಜಿಪುರ ಮೇಲ್ಸೇತುವೆ ಕೆಲಸವನ್ನು ಬೇಗ ಈಸಿ ಆಗಿ ಮುಗಿಸಲು ಸಹಾಯ ಮಾಡಬಹುದೇ, ಅದಕ್ಕೆ “ಮಗಾ ಟ್ರಂಪ್ ಮೇಲ್ಸೇತುವೆ” ಎಂದು ಹೆಸರಿಡುವುದಾಗಿ ಮಾಡಿರುವ ಹಾಸ್ಯಾಸ್ಪದ ಟ್ವೀಟ್ ಬಹಳಷ್ಟು ವೈರಲ್ ಆಗಿದೆ.
Hello @realDonaldTrump
Could you please mediate with BBMP to ESCALATE Ejipura flyover works in Bengaluru. We'll name it as MAGA Trump flyover
& with BMRCL for Yellow line Metro Trains too in Bangalore
— Karnataka Weather (@BengaluruRains_) May 10, 2025
ಈ ಟ್ವೀಟ್ ಇಷ್ಟೊಂದು ಸದ್ದು ಮಾಡುತ್ತಿರುವುದು ಯಾಕಂದರೆ ಡೊನಾಲ್ಡ್ ಟ್ರಂಪ್ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಗೆ ಈ ಟ್ವೀಟ್ ಅನ್ನು ಟ್ಯಾಗ್ ಮಾಡಲಾಗಿದೆ. ನಿಮ್ಮ ಸಹಾಯದಿಂದ ಈಜಿಪುರ ಫ್ಲೈಓವರ್ ಕೆಲಸ ಬೇಗ ಮುಗಿದರೆ ಅದಕ್ಕೆ “ಮಗಾ ಟ್ರಂಪ್ ಮೇಲ್ಸೇತುವೆ” ಎಂದು ಹೆಸರಿಡುವುದಾಗಿ ಟ್ವೀಟ್ ಮಾಡಲಾಗಿದೆ.
ಈ ಟ್ವೀಟ್ ಗಮನಿಸಿದವರು, ಇದೇನು ಕರ್ಮ ಮಾರಾಯಾ ಎಂದು ಕೇಳುತ್ತಿದ್ದಾರೆ. ಈ ವೈರಲ್ ಟ್ವೀಟ್ ಬೆಂಗಳೂರಿನ ಮುಖಂಡರ ಗಮನವನ್ನೂ ಕೂಡ ಸೆಳೆದಿದೆ.