Menu

ಅಹಿಂಸಾ ಪರಮೋಧರ್ಮಃ ಸಂದೇಶ ಸಾರಿದ ಮಹಾವೀರ

ಮಹಾವೀರನು ಬೋಧಿಸಿದ ತ್ರಿರತ್ನಗಳೆಂದರೆ ಸದ್ಭಕ್ತಿ, ಸತ್‌ಕ್ರಿಯೆ, ಸತ್‌ಜ್ಞಾನ. ಮಹಾವೀರನು ಪರಿಪೂರ್ಣ ಮಾನವನಲ್ಲಿ ಕಂಡುಬರುವ ಶಕ್ತಿಯನ್ನು ಅತ್ಯುನ್ನತ ವಾಗಿ ಮತ್ತು ಪೂರ್ಣ ಪ್ರಮಾಣದಲ್ಲಿ ಆವಿಷ್ಕರಿಸುವುದೇ ದೇವರೆಂದು ಪರಿಗಣಿಸಿದನು.

ಅಹಿಂಸೆಯಿಂದ ಬಾಳಬೇಕು. ತನ್ನದಲ್ಲದ್ದನ್ನು ಕದಿಯಬಾರದು. ಸತ್ಯವನ್ನೇ ನುಡಿಯಬೇಕು. ಮಾದಕ ವ್ಯಸನಗಳಿಗೆ ಒಳಗಾಗಬಾರದು. ಪರಿಶುದ್ಧವಾದ ಬದುಕನ್ನು ಸಾಧಿಸಬೇಕು. ಕಠಿಣವಾದ ತಪಸ್ಸನ್ನು ಕೈಗೊಳ್ಳಬೇಕು , ಇವು ಮಹಾವೀರನು ಬೋಧಿಸಿದ ಜೈನಮುನಿಗಳು ಸ್ವೀಕರಿಸಬೇಕಾದ ಪಂಚ ಪ್ರತಿಜ್ಞೆಗಳು.

ಭಾರತ ದೇಶದಲ್ಲಿ ಹುಟ್ಟಿ ಬೆಳೆದ ಹಲವು ಧರ್ಮಗಳು ಮಾನವನ ಕಲ್ಯಾಣಕ್ಕೆ ದಾರಿ ತೋರಿಸಿವೆ. ಅವುಗಳಲ್ಲಿ ಜೈನಧರ್ಮವೂ ಒಂದು. ಪ್ರಾಚೀನವಾದ ಜೈನ ಧರ್ಮದಲ್ಲಿ ೬೩ ಜನ ಮಹಾಪುರುಷರು ಬಂದು ಹೋಗಿದ್ದಾರೆ. ಅವರೆಂದರೆ ೨೪ ಜನ ತೀರ್ಥಂಕರರು, ೧೨ ಜನ ಚಕ್ರವರ್ತಿಗಳು, ೯ ಜನ ನಾರಾಯಣರು, ೯ ಜನ ಬಲದೇವರು, ೯ ಜನ ಪ್ರತಿ ನಾರಾಯಣರು.

ವರ್ಧಮಾನ ಮಹಾವೀರನು ಜೈನಧರ್ಮವೆಂಬ ಹೊಸ ಧರ್ಮದ ಉದಯಕ್ಕೆ ಕಾರಣನಾದವನು. ಈ ಧರ್ಮವು ಮಹಾವೀರನ ಪರಿಶ್ರಮದಿಂದಾಗಿ ಜನಪ್ರಿಯತೆ ಯನ್ನು ಪಡೆಯಿತು. ಆದರೆ ಜೈನರು ಇಪ್ಪತ್ನಾಲ್ಕು ತೀರ್ಥಂಕರರ ಪರಿಶ್ರಮದಿಂದ ಮತ್ತು ಬೋಧನೆಗಳಿಂದಾಗಿ ಈ ಹೊಸ ಧರ್ಮವು ಬೆಳೆಯಿತೆಂದು ನಂಬಿದ್ದಾರೆ. ಆಧ್ಯಾತ್ಮಿಕ ಗುರುಗಳಾದ ಜೈನಮುನಿಗಳನ್ನು ತೀರ್ಥಂಕರರೆಂದು ಕರೆಯಲಾಗಿತ್ತು. ಇಪ್ಪತ್ಮೂರನೆಯ ತೀರ್ಥಂಕರನು ಕ್ಷತ್ರಿಯ ವಂಶಕ್ಕೆ ಸೇರಿದ ಐತಿಹಾಸಿಕ ಪುರುಷನಾಗಿದ್ದನು. ವರ್ಧಮಾನ ಮಹಾವೀರನಿಗಿಂತ ಸುಮಾರು ೨೫೦ ವರ್ಷಗಳ ಹಿಂದೆ ಬದುಕಿದ್ದ ಪಾರ್ಶ್ವನಾಥನು ಬನಾರಸಿನ ಅಶ್ವಸೇನನ ಸುಪುತ್ರನಾ ಗಿದ್ದನು. ಅವನು ರಾಜಾಧಿಕಾರ ಮತ್ತು ವೈಭವವನ್ನು ತ್ಯಜಿಸಿ, ಆಧ್ಯಾತ್ಮಿಕ ಜೀವನದಲ್ಲಿ ತೀವ್ರವಾದ ಆಸಕ್ತಿ ಬೆಳೆಸಿಕೊಂಡನು.

ಮಾನವರು ಅನುಸರಿಸಬೇಕಾದ ಕೆಲವು ತತ್ವಗಳನ್ನು ಪಾರ್ಶ್ವನಾಥನು ಬೋಧಿಸಿದನು. ಹುಸಿಯ ನುಡಿಯಬಾರದು, ತನ್ನದಲ್ಲದ್ದನ್ನು ಕದಿಯಬಾರದು, ಜೀವಂತ ವಾದ ಯಾವುದೇ ವಸ್ತುಗಳನ್ನು ಹಿಂಸಿಸಬಾರದೆಂದು ಬೋಧಿಸಿದನು. ಮಹಾವೀರನು ಇಪ್ಪತ್ನಾಲ್ಕನೆಯ ತೀರ್ಥಂಕರನಾಗಿದ್ದನು. ಮಹಾವೀರನ ಆಕರ್ಷಕ ವ್ಯಕ್ತಿತ್ವ ಮತ್ತು ಸರಳವಾದ ತತ್ವಗಳಿಂದಾಗಿ ಜೈನಧರ್ಮವು ಬಹು ಬೇಗನೆ ಜನಪ್ರಿಯತೆಯನ್ನು ಪಡೆಯಿತು.

ವೈಶಾಲಿಯ ಸಮೀಪದ ಕುಂಡಗ್ರಾಮದಲ್ಲಿ ಮಹಾವೀರನು ಕ್ಷತ್ರಿಯ ಕುಲದಲ್ಲಿ ಕ್ರಿ.ಪೂ.೫೯೯ ರಲ್ಲಿ ಜನಿಸಿದನು. ತಂದೆ ಸಿದ್ಧಾರ್ಥ, ತಾಯಿ ತ್ರಿಶಾಲ. ಸಿದ್ಧಾರ್ಥನು ಕ್ಷತ್ರಿಯರ ಕುಲವಾದ ಜ್ಞಾತ್ರಿಕರ ನಾಯಕನಾಗಿದ್ದನು. ತ್ರಿಶಾಲ ಸುಪ್ರಸಿದ್ಧ ಲಿಚ್ಛಾವಿ ರಾಜಕುಮಾರನಾದ ಚೇತಕನ ಸೋದರಿಯಾಗಿದ್ದಳು. ಆದ್ದರಿಂದ ಮಹಾ ವೀರನು ಪ್ರಬಲರಾದ ರಾಜವಂಶಗಳ ಸಂಬಂಧವನ್ನು ಹೊಂದಿದ್ದನು. ಮಹಾವೀರನು ‘ಯಶೋಧ’ ಎಂಬ ಸದ್ಗುಣಶೀಲೆಯನ್ನು ವಿವಾಹವಾದನು. ಪ್ರಿಯದರ್ಶಿನಿ ಎಂಬ ಮಗಳು ಜನಿಸಿದಳು. ಮಹಾವೀರನ ಮನಸ್ಸು ಆಧ್ಯಾತ್ಮಿಕತೆಯ ಕಡೆ ಸೆಳೆಯಿತು. ಮಹಾವೀರನು ತನ್ನ ಮೂವತ್ತನೆಯ ವಯಸ್ಸಿನಲ್ಲಿ ಪ್ರಾಪಂಚಿಕ ಸುಖ ಭೋಗಗಳನ್ನು ತ್ಯಜಿಸಿದನು ಮತ್ತು ಸತ್ಯವನ್ನು ಅರಸುತ್ತಿರುವ ಸನ್ಯಾಸಿಯ ಬದುಕನ್ನು ಪ್ರಾರಂಭಿಸಿದನು.

ವರ್ಧಮಾನ ಮಹಾವೀರನು ಕಠಿಣ ತಪಸ್ಸನ್ನು ಸುಮಾರು ಹದಿಮೂರು ವರ್ಷಗಳ ಕಾಲ ಮಾಡಿದನು. ವಸ್ತ್ರರಹಿತವಾಗಿ ಲೌಕಿಕ ಆಸೆಗಳನ್ನು ತ್ಯಜಿಸಿ, ಅಲೆದಾಡಿ ದನು. ಮಹಾವೀರನು ತನ್ನ ನಲವತ್ತೆರಡನೆಯ ವಯಸ್ಸಿನಲ್ಲಿ ಆಳವಾದ ತಪಸ್ಸಿನಿಂದ ಜ್ಞಾನೋದಯವನ್ನು ಪಡೆದನು. ಅಂದಿನಿಂದ ವರ್ಧಮಾನನನ್ನು ‘ಮಹಾವೀರ’ ಎಂದು ಕರೆಯಲಾಯಿತು.

ವರ್ಧಮಾನನು ತನ್ನ ಪಂಚೇಂದ್ರಿಯಗಳ ಮೇಲೆ ಸಂಪೂರ್ಣವಾಗಿ ಹತೋಟಿಯನ್ನು ಸಾಧಿಸಿದ್ದನು. ಸಾಧಾರಣ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಹಲವಾರು ತತ್ವಗಳನ್ನು ಮಹಾವೀರನು ಬೋಧಿಸಿದನು. ಅದರ ಮೂಲಕ ಮುಕ್ತಿಯನ್ನು ಪಡೆಯಬಹುದು ಎಂದು ತಿಳಿಸಿದನು. ಜೈನಧರ್ಮದ ತತ್ವಗಳನ್ನು ಭಾರತದಾದ್ಯಂತ ಪ್ರಸಾರ ಮಾಡಲು ಮಹಾವೀರನು ಹೊಸ ಧಾರ್ಮಿಕ ಸಂಘವೊಂದರನ್ನು ಸ್ಥಾಪಿಸಲು ನಿರ್ಧರಿಸಿದನು. ಮಹಾವೀರನು ಆ ಕಾಲದ ಪ್ರಬಲ ವಾದ ರಾಜರ ಪ್ರೋತ್ಸಾಹವನ್ನು ಪಡೆದನು. ಆದ್ದರಿಂದ ಹಲವಾರು ಜನರ ಬೆಂಬಲವನ್ನು ಯಶಸ್ವಿಯಾಗಿ ಪಡೆದನು. ಮಹಾವೀರನು ಜೈನ ಸಂಘವನ್ನು ಸ್ಥಾಪಿಸಿದನು. ಬೇರೆ ಬೇರೆ ಮೂಲಗಳಿಂದ ಬಂದ ಜನರು ಜೈನಧರ್ಮದಲ್ಲಿ ಆಶ್ರಯವನ್ನು ಪಡೆದರು. ಜ್ಞಾನೋದಯವಾದ ಮಹಾವೀರನು ‘ಜಿನ’ ಎಂಬ ಬಿರುದನ್ನು ಪಡೆದುಕೊಂಡನು. ಆತನು ಪ್ರಾರಂಭಿಸಿದ ಧರ್ಮವನ್ನು ಜೈನಧರ್ಮವೆಂದು ಕರೆಯಲಾಯಿತು. ವರ್ಧಮಾನ ಮಹಾವೀರನು ಎಪ್ಪತ್ತೆರಡನೆಯ ವಯಸ್ಸಿನಲ್ಲಿ ಪಾಟಲೀಪುತ್ರದ ಪಾವಾ ಎಂಬಲ್ಲಿ ಕ್ರಿ.ಪೂ.೫೨೭ ರಲ್ಲಿ ಅಸುನೀಗಿದನು ಎಂಬುದಾಗಿ ತಿಳಿದು ಬರುತ್ತದೆ.

ವರ್ಧಮಾನ ಮಹಾವೀರನ ಬೋಧನೆಗಳು: ಮಹಾವೀರನು ಆತ್ಮ ಜೀವನ ಮತ್ತು ಕರ್ಮ ಸಿದ್ಧಾಂತವನ್ನು ನಂಬಿದ್ದನು. ಆತ್ಮ ಶಾಶ್ವತವಾದುದು ಮತ್ತು ಎಲ್ಲಾ ಭೌತಿಕ ವಸ್ತುಗಳು ನಶ್ವರವಾದುವು. ಲೌಕಿಕ ಸುಖಭೋಗಗಳಿಂದ ಆತ್ಮವು ಬಂಧನದಲ್ಲಿ ಸಿಲುಕಿದೆ. ಮನುಷ್ಯನು ತನ್ನ ಬದುಕಿನಲ್ಲಿ ಮಾಡಿದ ಕಾರ್ಯಗಳಿಗನು ಗುಣವಾಗಿ ಪುನರ್ಜನ್ಮವನ್ನು ಪಡೆಯುತ್ತಾನೆ. ಪರಿಶುದ್ಧವಾದ ಆತ್ಮವು ಜ್ಞಾನವನ್ನು ಗಳಿಸಿ ಪಂಚೇಂದ್ರಿಯಗಳ ಮೇಲೆ ಹತೋಟಿ ಸಾಧಿಸಿ, ಬಂಧನದಿಂದ ಮುಕ್ತವಾಗಿ ಆನಂದವನ್ನು ಅನುಭವಿಸುತ್ತದೆ. ನಡತೆ ಶುದ್ಧವಾಗಿರಬೇಕು. ಆಸೆಯ ಬಂಧನದಿಂದ ಹೊರಗಿರಬೇಕು.

ಮಹಾವೀರನು ಬೋಧಿಸಿದ ತ್ರಿರತ್ನಗಳೆಂದರೆ ಸದ್ಭಕ್ತಿ, ಸತ್‌ಕ್ರಿಯೆ, ಸತ್‌ಜ್ಞಾನ. ಮಹಾವೀರನು ಪರಿಪೂರ್ಣ ಮಾನವನಲ್ಲಿ ಕಂಡುಬರುವ ಶಕ್ತಿಯು ಅತ್ಯುನ್ನತ ವಾಗಿ ಮತ್ತು ಪೂರ್ಣ ಪ್ರಮಾಣದಲ್ಲಿ ಆವಿಷ್ಕರಿಸುವುದೇ ದೇವರೆಂದು ಪರಿಗಣಿಸಿದನು. ಮಹಾವೀರನು ಜೈನಮುನಿಗಳು ಸ್ವೀಕರಿಸಬೇಕಾದ ಪಂಚ ಪ್ರತಿಜ್ಞೆಗಳನ್ನು ಬೋಧಿಸಿದನು. ಅಹಿಂಸೆಯಿಂದ ಬಾಳಬೇಕು. ತನ್ನದಲ್ಲದ್ದನ್ನು ಕದಿಯಬಾರದು. ಸತ್ಯವನ್ನೇ ನುಡಿಯಬೇಕು. ಮಾದಕ ವ್ಯಸನಗಳಿಗೆ ಒಳಗಾಗಬಾರದು. ಪರಿಶುದ್ಧ ವಾದ ಬದುಕನ್ನು ಸಾಧಿಸಬೇಕು. ಕಠಿಣವಾದ ತಪಸ್ಸನ್ನು ಕೈಗೊಳ್ಳಬೇಕು.

ವರ್ಧಮಾನ ಮಹಾವೀರನ ಮುಖ್ಯವಾದ ತತ್ವವು “ಅಹಿಂಸಾ ಪರಮೋಧರ್ಮಃ”. ಈ ಮುಖ್ಯವಾದ ತತ್ವದಿಂದಲೇ ಜೈನಧರ್ಮವು ಹೊಸದಾದ, ವಿಶೇಷವಾದ ಧರ್ಮವಾಗಿ ಬೆಳೆಯಿತು. ಜೈನಧರ್ಮದಲ್ಲಿ ‘ಶ್ವೇತಾಂಬರರು’ ಮತ್ತು ‘ದಿಗಂಬರರು’ ಎಂಬ ಎರಡು ಪಂಗಡಗಳಿವೆ. ಮಹಾವೀರನು ವಾಸ್ತವ ಜೀವನದಲ್ಲಿ ಅಳವ ಡಿಸಿಕೊಳ್ಳಬಹುದಾದ ಸರಳ ನೀತಿಗಳಿರುವ ಧರ್ಮವೊಂದನ್ನು ಸ್ಥಾಪಿಸಿದನು. ಆತನ ಸರಳವಾದ ಮತ್ತು ಉಚ್ಚವಾದ ಧ್ಯೇಯಗಳು ಹಲವಾರು ಜನರನ್ನು ಆಕರ್ಷಿ ಸಿದವು.

-ಟಿ. ನರೇಂದ್ರಬಾಬು, ಲೇಖಕರು
ತುಮಕೂರು-ಮೊಬೈಲ್ ಸಂಖ್ಯೆ : 9538184801

Related Posts

Leave a Reply

Your email address will not be published. Required fields are marked *