ಕುಂಭಮೇಳದಲ್ಲಿ ಬುಧವಾರ ಮಾಘ ಪೂರ್ಣಿಮಾ ದಿನದ ಪುಣ್ಯ ಸ್ನಾನ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದೆ.
ಮಾಘ ಪೂರ್ಣಿಮಾ ದಿನದ ಪುಣ್ಯ ಸ್ನಾನಕ್ಕಾಗಿ ಬುಧವಾರ ಲಕ್ಷಾಂತರ ಜನರು ಆಗಮಿಸಿದ್ದು, ಯಾವುದೇ ಸಮಸ್ಯೆ ಇಲ್ಲದೇ ನಿರ್ವಿಘ್ನವಾಗಿ ಪೂರೈಸಿದೆ.
ಮಾಘ ಸ್ನಾನ ಯಶಸ್ವಿಯಾಗಿ ನಡೆಯುವುದರೊಂದಿಗೆ ಕುಂಭ ಮೇಳ ಒಂದು ತಿಂಗಳು ಪೂರೈಸಿದೆ. ಬುಧವಾರ ಒಂದೇ ದಿನ 50 ಲಕ್ಷಕ್ಕೂ ಹೆಚ್ಚು ಜನರು ಪುಣ್ಯಸ್ನಾನ ಮಾಡಿದ್ದು, ಒಟ್ಟಾರೆ ಪುಣ್ಯಸ್ನಾನ ಮಾಡಿದವರ ಸಂಖ್ಯೆ 50.2 ಕೋಟಿ ದಾಟಿದೆ ಎಂದು ಹೇಳಲಾಗಿದೆ.
ಗಂಗಾ, ಯಮುನಾ, ಸರಸ್ವತಿಯ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಲು 15 ದಿನಗಳ ಉತ್ಸವದಲ್ಲಿ 40 ಕೋಟಿ ಜನರ ನಿರೀಕ್ಷೆ ಇತ್ತು. ಆದರೆ ಇದೀಗ 15 ದಿನ ಬಾಕಿ ಇರುವಾಗಲೇ 50 ಕೋಟಿ ದಾಟಿ ಹೊಸ ದಾಖಲೆ ಬರೆದಿದೆ.
ಮಾಘ ಹುಣ್ಣಿಮೆ ದಿನ ವಿಶ್ವದ ಶ್ರೀಮಂತ ಕುಟುಂಬಗಳಾದ ಅಂಬಾನಿ ಹಾಗೂ ಅದಾನಿ ಕುಟುಂಬಗಳ ಸದಸ್ಯರು ಪುಣ್ಯಸ್ನಾನ ಮಾಡಿದರು.