ನಟ ವಿಜಯ್ ಕೊನೆಯ ಬಾರಿಗೆ ನಟಿಸಿರುವ ಜನನಾಯಗನ್ ಚಿತ್ರದ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ್ದು, ಯು/ಎ ಪ್ರಮಾಣಪತ್ರ ನೀಡಿದೆ.
ಜನ ನಾಯಗನ್ ಚಿತ್ರ ಶುಕ್ರವಾರ ಬಿಡುಗಡೆ ಆಗಬೇಕಿತ್ತು. ಇದೇ ದಿನವೇ ಮದ್ರಾಸ್ ಹೈಕೋರ್ಟ್ ತೀರ್ಪು ಕಾಯ್ದಿರಿಸಿದ್ದರಿಂದ ತಂಡ ಬಿಡುಗಡೆ ದಿನಾಂಕವನ್ನು ಬಿಡುಗಡೆ ಮಾಡಿತ್ತು.
ಚಿತ್ರದ ಮುಂಗಡ ಟಿಕೆಟ್ ಬುಕ್ಕಿಂಗ್ 2 ಲಕ್ಷ ದಾಟಿದ್ದು ಒಂದು ವೇಳೆ ವ್ಯತಿರಿಕ್ತ ತೀರ್ಪು ಬಂದರೆ ದೊಡ್ಡಮಟ್ಟದ ನಷ್ಟಕ್ಕೆ ಗುರಿಯಾಗುವ ಭೀತಿಯಿಂದ ಚಿತ್ರ ಬಿಡುಗಡೆ ದಿನಾಂಕ ಮುಂದೂಡಲಾಗಿತ್ತು.
ನ್ಯಾಯಮೂರ್ತಿ ಪಿಟಿ ಆಶಾ ಪ್ರಸಾದ್ ಎರಡೂ ಕಡೆಯವರ ವಾದ ಆಲಿಸಿದ ನಂತರ ಶುಕ್ರವಾರ 16 ವರ್ಷ ಮೇಲ್ಪಟ್ಟ ಎಲ್ಲಾ ವಯೋಮಾನದವರು ಚಿತ್ರ ವೀಕ್ಷಿಸಬಹುದು ಎಂದು ತೀರ್ಪು ನೀಡಿದ್ದು, ಯುಎ ಪ್ರಮಾಣಪತ್ರ ನೀಡಲು ಸೂಚಿಸಿತು.
ಚಿತ್ರ ಬಿಡುಗಡೆ ದಿನಾಂಕ ಘೋಷಣೆ ಆಗಿದ್ದರೂ ಸಿಬಿಎಫ್ ಸಿ ಪ್ರಮಾಣ ಪತ್ರ ನೀಡದೇ ವಿಳಂಬ ಮಾಡಿದ್ದರಿಂದ ಚಿತ್ರ ತಂಡ ಕೋರ್ಟ್ ಮೆಟ್ಟಿಲೇರಿತ್ತು. ಕೊನೆಯ ಗಳಿಗೆಯಲ್ಲಿ ತೀರ್ಪು ನಿಗದಿಯಾಗಿದ್ದರಿಂದ ಚಿತ್ರ ತಂಡ ಬಿಡುಗಡೆ ದಿನಾಂಕ ಮುಂದೂಡಿತು.
ಇದೀಗ ರಾಜಕಾರಣ ಪ್ರವೇಶಿಸಿರುವ ವಿಜಯ್ ನಟಿಸಿರುವ ಕೊನೆಯ ಚಿತ್ರ ಜನನಾಯಗನ್ `ಪೊಂಗಲ್’ ದಿನವಾದ ಜನವರಿ 14ರೊಳಗೆ ಬಿಡುಗಡೆ ಮಾಡಬೇಕಿದ್ದು, ಚಿತ್ರ ತಂಡ ಯಾವುದೇ ಹೊಸ ದಿನಾಂಕ ಘೋಷಣೆ ಮಾಡಿಲ್ಲ.


