ಸ್ನೇಹಿತ ಜಾಫರ್ ಮಾತು ಕೇಳಿ ಚನ್ನಪಟ್ಟಣದ ಮೂಲದವನಾಗಿದ್ದು, ಮದ್ದೂರಿನಲ್ಲಿ ವಾಸವಿರುವ ಇರ್ಫಾನ್ ಎಂಬಾತ ಮದ್ದೂರಿನಲ್ಲಿ ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟಕ್ಲೆ ಪ್ಲಾನ್ ಮಾಡಿದ್ದ ಎನ್ನಲಾಗಿದೆ. ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ ನಡೆದಿದ್ದು, ಪರಿಸ್ಥಿತಿ ಬಿಗಡಾಯಿಸಿದೆ. ಗಣೇಶ ಮೆರವಣಿಗೆ ಸಹಿಸದೆ ಮುಸ್ಲಿಮರ ಯುವಕರ ಪೂರ್ವ ನಿಯೋಜಿತವಾಗಿ ಗುಂಪು ಕಲ್ಲು ತೂರಿತ್ತು.
ಇರ್ಫಾನ್ ಜೊತೆಗೂಡಿ ಮುಸ್ಲಿಂ ಯುವಕರ ಗುಂಪು ಮೆರವಣಿಗೆ ಮಸೀದಿ ದಾಟಿ 50 ಮೀಟರ್ ಮುಂದೆ ಹೋದ ಮೇಲೆ ಕಲ್ಲು ತೂರಾಟ ನಡೆಸಿದೆ. ಕಲ್ಲು ಎಸೆಯುವ ಮುನ್ನ ಸಲ್ಮಾನ್ ಎಂಬಾತ ಬೀದಿ ದೀಪ ಆಫ್ ಮಾಡಿದ್ದ. ಕಲ್ಲುಗಳು ಗಣೇಶ ಕೂರಿಸಿದ್ದ ಟ್ರಾಕ್ಟರ್‌ಗೆ ಬಡಿಯುತ್ತಿದ್ದಂತೆ ಹಿಂದೂ ಯುವಕರು ಪ್ರತಿಯಾಗಿ ಕಲ್ಲು ತೂರಾಟ ನಡೆಸಿದ್ದಾರೆ. ಇರ್ಫಾನ್ ಮತ್ತು ಗುಂಪು ಅಲ್ಲಿಂದ ಪರಾರಿಯಾಗಿದೆ.
ಇರ್ಫಾನ್ ಸೇರಿದಂತೆ 22 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಸಾಕ್ಷ್ಯಗಳು ಸಿಕ್ಕಿದರೆ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳನ್ನು ತಮ್ಮ ಕಸ್ಟಡಿಗೆ ಪಡೆದು ಪೊಲೀಸರು ವಿಚಾರಣೆ ನಡೆಸಲಿದ್ದಾರೆ.
ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಸಮಿತಿ ದೂರು
ಘಟನೆ ಬಳಿಕ ಆರೋಪಿಗಳನ್ನು ಪೊಲೀಸರು ಬಂಧಿಸಿ ಸೆಕ್ಷನ್ 144 ಜಾರಿ ಇದ್ದರೂ ಬಿಜೆಪಿ ನಾಯಕರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಕೋಮು ಪ್ರಚೋದನೆ ಮಾಡುತ್ತ ಸರ್ಕಾರದ ಮೇಲೆ ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಹೈಗ್ರೌಂಡ್ ಪೊಲೀಸ್ ಠಾಣೆಗೆ ಉಪಾಧ್ಯಕ್ಷ ಕುಶಾಲ್ ಹರುವೇಗೌಡ ದೂರು ನೀಡಿದ್ದಾರೆ.
ಎನ್ಐಎಗೆ ವಹಿಸಲು ಅಮಿಶ್ ಶಾಗೆ ತೇಜಸ್ ಗೌಡ ಪತ್ರ
ಘಟನೆಯ ತನಿಖೆಯನ್ನು ಎನ್‌ಐಎಗೆ ವಹಿಸಲು ಕೋರಿ ಗೃಹ ಸಚಿವ ಅಮಿಶ್ ಶಾಗೆ ಹಿಂದೂ ಮುಖಂಡ ತೇಜಸ್ ಗೌಡ ಪತ್ರ ಬರೆದಿದ್ದಾರೆ. ಪ್ರತಿ ಬಾರಿಯೂ ಗಣೇಶ ಮೆರವಣಿಗೆಯಲ್ಲಿ ಇಂಥ ಘಟನೆಗಳು ನಡೆಯುತ್ತಿವೆ, 2024 ನಾಗಮಂಗಲ ಗಣೇಶ ಮೆರವಣಿಗೆಯಲ್ಲೂ ಹೀಗೆ ಆಗಿತ್ತು ಎಂದು ವಿವರಿಸಿದ್ದಾರೆ.
ಇಸ್ಲಾಮಿಕ್ ಮೂಲಭೂತವಾದಿ ಗುಂಪುಗಳ ಸಂಖ್ಯೆ ಜಾಸ್ತಿ ಆಗ್ತಿದೆ, ಪೊಲೀಸರು ಪಲಾಯನ ಮಾಡುವ ಪರಿಸ್ಥಿತಿ ಉಂಟಾಗಿದೆ. ಹಳೆಯ ಮೈಸೂರು ಭಾಗವನ್ನು ಇಸ್ಲಾಮಿಕ್ ಮೂಲಭೂತವಾದಿಗಳು ಟಾರ್ಗೆಟ್ ಮಾಡಿದ್ದಾರೆ. ಆ ಭಾಗದ ಹಿಂದೂಗಳು ಭಯದಿಂದ ಬದುಕುತ್ತಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.