Menu

ಹೂಡಿಕೆಯಲ್ಲಿ ಲಾಭದ ಆಮಿಷ: ಮಹಿಳಾ ಟೆಕ್ಕಿಗೆ 93 ಲಕ್ಷ ರೂ. ವಂಚನೆ

Cyber fraud

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂಬ ಆಮಿಷವೊಡ್ಡಿ ಮಹಿಳಾ ಟೆಕ್ಕಿಗೆ 93 ಲಕ್ಷ ರೂ. ವಂಚನೆ ಮಾಡಿರುವ ಪ್ರಕರಣ ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆಯ ಸಿದ್ದವೀರಪ್ಪ ಬಡಾವಣೆಯ 38 ವರ್ಷದ ಟೆಕ್ಕಿ. ವಿಐಪಿ ರುದ್ರಾ ಷೇರ್ಸ್ ಎಂದು ವಾಟ್ಸಾಪ್ ಗ್ರೂಪ್‌ನಲ್ಲಿ ಬಂದಿದ್ದ ಸಂದೇಶ ನಂಬಿ ಹಣ ಹೂಡಿಕೆ ಮಾಡಿದ್ದರು.

ಹೆಚ್ಚಿನ ಲಾಭ ಪಡೆಯುವ ಆಸೆಯಿಂದ ಒಟ್ಟು 93 ಲಕ್ಷ ರೂ. ಹೂಡಿಕೆ ಮಾಡಿದ್ದರು. ಹೂಡಿಕೆ ಮಾಡಿದ ಹಣ ಕೂಡ ವಾಪಸ್ ಬಾರದಿದ್ದಾಗ ಮಹಿಳೆಗೆ ವಂಚನೆಗೆ ಒಳಗಾಗಿದ್ದು ಅರಿವಾಗಿದೆ. ಈ ಸಂಬಂಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೈಬರ್‌ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

 

ಆನ್‌ಲೈನ್‌ ವಂಚನೆ ಪ್ರಕರಣಗಳು ಆಗಾಗ ವರದಿಯಾಗುತ್ತಲ ೇಇಇವೆ, ಹೆಚ್ಚಾಗಿ ಸುಶಿಕ್ಷತರು ಅನಿಸಿಕೊಂಡವರೇ ಈ ವಂಚನೆಗೆ ಬಲಿಯಾಗುತ್ತಿರುವುದು  ವಿಚಿತ್ರವೆನಸುತ್ತದೆ. ಈ ಬಗ್ಗೆ ಸೈಬರ್‌ ಪೊಲೀಸರು ಸಾರ್ವಜನಿಕರಿಗೆ  ಜಾಗೃತಿ ಮೂಡಿಸುತ್ತಿದ್ದರೂ ವಂಚನೆ ಪ್ರಕರಣಗಳು ಹೆಚ್ಚುತ್ತಲೇ ಇವೆ ಎಂಬುದು ಕಳವಳಕಾರಿ ಸಂಗತಿ.

Related Posts

Leave a Reply

Your email address will not be published. Required fields are marked *