Menu

ಎಲ್‌ಪಿಜಿ ವ್ಯತ್ಯಯ: ರಾಜ್ಯದ ಸಂಸದರು ಜನರಿಗೆ ನ್ಯಾಯ ಒದಗಿಸಲಿ ಎಂದ ಡಿಕೆ ಶಿವಕುಮಾರ್

“ಬೇರೆ ವಿಚಾರಗಳಲ್ಲಿ ಮಾತನಾಡುವ ಸಂಸದರು ಅಡುಗೆ ಅನಿಲ ಕೊರತೆ ವಿಚಾರವಾಗಿ ಸಂಸತ್ತಿನಲ್ಲಿ ಮಾತನಾಡಬೇಕು. ರಾಜ್ಯಕ್ಕೆ ನ್ಯಾಯ ಒದಗಿಸಿಕೊಡಬೇಕು” ಎಂದು ಡಿಸಿಎಂ ಡಿಕೆ ಶಿವಕುಮಾರ್  ಹೇಳಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು. “ಅಡುಗೆ ಅನಿಲ್ ಸಿಲಿಂಡರ್ ಕೊರತೆಯಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಈ ವಿಚಾರವಾಗಿ ಬಿಜೆಪಿಯ ಯಾವುದೇ ಸಂಸದರು ಬಾಯಿ ಬಿಡುತ್ತಿಲ್ಲ. ಹಳ್ಳಿ ಜನರು, ರೈತರು ಹಾಗೂ ಹೊಟೇಲ್ ಗಳಿಗೆ ಸೌದೆ ಒಲೆ ,  ಕಟ್ಟಿಗೆ ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ” ಎಂದರು.

“ಈ ಇಂಧನ ಬೆಲೆ ಏರಿಕೆಯಿಂದ ಜನ ಪರದಾಡುತ್ತಿದ್ದಾರೆ. ಇದರಲ್ಲಿ ರಾಜ್ಯ ಸರ್ಕಾರ ಏನೂ ಮಾಡಲು ಆಗುವುದಿಲ್ಲ. ಕೇಂದ್ರ ಸರ್ಕಾರ ಇದಕ್ಕೆ ಹೊಣೆ. ಕೇಂದ್ರ ಸರ್ಕಾರ ವಿದೇಶಾಂಗ ನೀತಿ ಬಗ್ಗೆ ಸ್ಪಷ್ಟವಾಗಿ ಮಾತನಾಡುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಈ ವಿಚಾರದಲ್ಲಿ ಕೇಂದ್ರದ ಧೋರಣೆ ಖಂಡನೀಯ. ನಾಗರಕರಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ನೋಡಿಕೊಳ್ಳಬೇಕು. ಮುಂದೆ ಪರಿಸ್ಥಿತಿ ಹೇಗಿರುತ್ತದೆಯೋ ಹೇಗೋ ಈಗಾಗಲೇ ಗ್ಯಾಸ್ ಚಾಲಿತ ಆಟೋ ಬಂದ್ ಆಗಿದ್ದು, ಸಮಸ್ಯೆ ಹೆಚ್ಚುತ್ತಿದೆ” ಎಂದು ತಿಳಿಸಿದರು.

ಎಲ್‌ಪಿಜಿ ಬಿಕ್ಕಟ್ಟಿನಿಂದ ಈಗಲೇ ದೇಶದ ಮಹಾನಗರಗಳಲ್ಲಿ ಹೋಟೆಲ್‌ ಉದ್ಯಮವು ತತ್ತರಿಸಿದೆ.  ಮಲೆ ಮಹದೇಶ್ವರ ಕ್ಷೇತ್ರ,  ಬೆಂಗಳೂರು ಬನಶಂಕರಿ ಹಾಗೂ  ದಿನದ ಮೂರು ಹೊತ್ತು ಊಟ , ಉಪಾಹಾರ ನೀಡುವ  ಸುಬ್ರಹ್ಮಣ್ಯ, ಕಟೀಲು ಸೇರಿದಂತೆ  ದೇವಸ್ಥಾನಗಳಲ್ಲೂ ಊಟದ  ವ್ಯವಸ್ಥೆಗೆ ಎಲ್‌ಪಿಜಿ ಕೊರತೆಯಿಂದ   ತೊಂದರೆಯಾಗಿದೆ.   ನಗರಗಳಲ್ಲಿ   ಪಿಜಿಗಳು, ಹಾಸ್ಟೆಲ್‌ಗಳಲ್ಲೂ  ಊಟ ತಿಂಡಿ ಮೆನು ಬದಲಾಗಿವೆ, ಇನ್ನೆರಡು ದಿನಗಳಲ್ಲಿ ಬಂದ್‌ ಆಗುವ ಸನ್ನಿವೇಶವಿದೆ.

Related Posts

Leave a Reply

Your email address will not be published. Required fields are marked *