Monday, September 01, 2025
Menu

ಎಲ್‌ಪಿಜಿ ವಾಣಿಜ್ಯ ಸಿಲಿಂಡರ್‌ ಬೆಲೆ 51.50 ರೂ. ಇಳಿಕೆ

ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ಎಲ್‌ಪಿಜಿ ವಾಣಿಜ್ಯ ಸಿಲಿಂಡರ್‌ ಬೆಲೆಯನ್ನು ಸೆಪ್ಟೆಂಬರ್ 1 ರಿಂದ ಜಾರಿಗೆ ಬರುವಂತೆ 51.50 ರೂ. ಇಳಿಕೆ ಮಾಡಿರುವುದಾಗಿ ಹೇಳಿವೆ.  14.2 ಕೆಜಿ ಗೃಹ ಬಳಕೆಯ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈಗ ದೆಹಲಿಯಲ್ಲಿ 19 ಕೆಜಿ LPG ವಾಣಿಜ್ಯ ಸಿಲಿಂಡರ್ ಬೆಲೆ ಈಗ 1,580 ರೂ. ಆಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರಕ್ಕೆ ಅನುಗುಣವಾಗಿ ಎಲ್‌ಪಿಜಿ ದರ ಪ್ರತಿ ತಿಂಗಳು ಪರಿಷ್ಕರಣೆಯಾಗುತ್ತಿರುತ್ತದೆ. ಈ ಹಿಂದೆ ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ನ ಬೆಲೆಯಲ್ಲಿ 33.50 ರೂ.ಗಳಷ್ಟು ಇಳಿಕೆ ಮಾಡಿವೆ.

ಜುಲೈ 1 ರಂದು 58.50 ರೂ.ಗಳಷ್ಟು ಬೆಲೆಯನ್ನು ಕಡಿಮೆ ಮಾಡಿದ್ದರೆ, .ಜೂನ್‌ನಲ್ಲಿ ತೈಲ ಕಂಪನಿಗಳು ವಾಣಿಜ್ಯ ಸಿಲಿಂಡರ್‌ಗಳಿಗೆ 24 ರೂ.ಗಳಷ್ಟು ಕಡಿತ ಪ್ರಕಟಿಸಿ ದರವನ್ನು 1,723.50 ರೂ.ಗೆ ನಿಗದಿಪಡಿಸಿತತ್ತು. ಏಪ್ರಿಲ್‌ನಲ್ಲಿ ಬೆಲೆ 1,762 ರೂ.ಗಳಷ್ಟಿತ್ತು, ಫೆಬ್ರವರಿಯಲ್ಲಿ 7 ರೂಪಾಯಿ ಕಡಿತಗೊಂಡಿತ್ತು, ಮಾರ್ಚ್‌ನಲ್ಲಿ 6 ರೂ. ಹೆಚ್ಚಳ ಮಾಡಿತ್ತು.

Related Posts

Leave a Reply

Your email address will not be published. Required fields are marked *