ರಾಜಾಜಿನಗರದ ಗಾಯತ್ರಿ ನಗರದಲ್ಲಿ ಪ್ರೀತಿಸುತ್ತಿದ್ದ ಯುವಕ ಮದುವೆಯನ್ನು ಮುಂದೂಡುತ್ತ ಬರುತ್ತಿದ್ದಾನೆಂದು ಜಗಳವಾಡಿದ ಯುವತಿ ಮನನೊಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಖಾಸಗಿ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದ ಲತಾ(25) ನೇಣುಬಿಗಿದುಕೊಂಡ ಯುವತಿ. ಆಕೆ ಮಂಡ್ಯ ಜಿಲ್ಲೆಯ ರಂಜಿತ್ ಎಂಬ ಯುವಕನನ್ನು ಐದು ವರ್ಷಗಳಿಂದ ಪ್ರೀತಿಸುತ್ತಿದ್ದಳು.
ರಂಜಿತ್ ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ. ಇಬ್ಬರ ಕುಟುಂಬಗಳೂ ಮದುವೆಗೆ ಒಪ್ಪಿಗೆ ನೀಡಿದರೂ ರಂಜಿತ್ ಮದುವೆಯ ವಿಚಾರವನ್ನು ಮುಂದೂಡುತ್ತಿದ್ದನು. ಈ ಕಾರಣಕ್ಕೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಸೋಮವಾರ ರಾತ್ರಿಯೂ ಇದೇ ವಿಷಯಕ್ಕೆ ಸಂಬಂಧಿಸಿ ಲತಾ ಮತ್ತು ರಂಜಿತ್ ನಡುವೆ ಜಗಳವಾಗಿತ್ತು. ಇದರಿಂದ ನೊಂದ ಲತಾ ಬೆಳಿಗ್ಗೆ ತನ್ನ ಮನೆಯ ಫ್ಯಾನಿಗೆ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ.
ಸುಬ್ರಮಣ್ಯನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. ಪ್ರೇಮ ವೈಫಲ್ಯದಿಂದ ಲತಾ ಈ ನಿರ್ಧಾರಕ್ಕೆ ಬಂದಿದ್ದಾಳೆ ಎಂಬುದಾಗಿ ಪ್ರಾಥಮಿಕ ಮಾಹಿತಿ ಲಭಿಸಿದ್ದು, ಘಟನೆಯ ಸತ್ಯಾಸತ್ಯತೆ ತನಿಖೆಯ ನಂತರ ಬಯಲಾಗಲಿದೆ.
woman suicide