ಚಿಕ್ಕಬಳ್ಳಾಪುರದಲ್ಲಿ ಮನೆಯವರನ್ನು ತೊರೆದು ಪ್ರೀತಿಸಿ ಮದುವೆಯಾದ ಯುವತಿ ಪೊಲೀಸ್ ಠಾಣೆಯಲ್ಲಿ ತಾಳಿ ಕಿತ್ತೆಸೆದು ಪೋಷಕರ ಜೊತೆ ಹೋಗಿರುವ ಘಟನೆ ನಡೆದಿದೆ.
ಪ್ರೀತಿಸಿ ಮನೆ ಬಿಟ್ಟು ಹೋಗಿ ಮದುವೆಯಾಗಿದ್ದ ಜೋಡಿಯ ಕಾರು ಅಡ್ಡಗಟಿದ್ದ ಪೋಷಕರು ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ಈ ವೇಳೆ ಹುಡುಗನ ಮದುವೆಯೆಂಬ ವಂಚನೆಯ ನಾನಾ ಮುಖಗಳು ಪೊಲೀಸರೆದು ಬಯಲಾಗಿದೆ. ಇದನ್ನು ತಿಳಿದು ಭಯಗೊಂಡ ಯುವತಿ ತಾಳಿಯನ್ನೇ ಕಿತ್ತೆಸೆದು ಪೊಷಕರೊಂದಿಗೆ ಮನೆಗೆ ನಡೆದಿದ್ದಾಳೆ.
ಚಿಕ್ಕಬಳ್ಳಾಪುರ ನಗರದ ಗಂಗನಮಿದ್ದೆ ಬಡಾವಣೆಯ ನಿವಾಸಿ ಸಂದೀಪ್ ಎಂಬಾತ ಚಿಕ್ಕಬಳ್ಳಾಪುರ ನಗರದ ಕಂದವಾರ ಬಡಾವಣೆಯ ಯುವತಿ ಜೊತೆ ಎರಡ್ಮೂರು ದಿನಗಳ ಹಿಂದೆ ಪರಾರಿಯಾಗಿ ಚಿಂತಾಮಣಿಯ ದೇವಸ್ಥಾನವೊಂದರಲ್ಲಿ ತಾಳಿ ಕಟ್ಟಿದ್ದ. ಬಳಿಕ ಜೋಡಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾಗ ಶಿಡ್ಲಘಟ್ಟ ನಗರದಲ್ಲಿ ಯುತಿಯ ಪೋಷಕರು ಕಾರನ್ನು ಅಡ್ಡಗಟ್ಟಿ ಮಗಳು ಮತ್ತು ಆಕೆಯ ಪ್ರಿಯಕರನನ್ನು ಮಹಿಳಾ ಠಾಣೆಗೆ ಕರೆದುಕೊಂಡು ಬಂದಿದ್ದರು. ತಾವು ಮದುವೆ ಮಾಡಿಕೊಂಡಿದ್ದು ತಮ್ಮ ಪಾಡಿಗೆ ತಮ್ಮನ್ನು ಬಿಡುವಂತೆ ಜೋಡಿ ಪೊಲೀಸರನ್ನು ಕೇಳಿಕೊಂಡಿದೆ. ಬಳಿಕ ಸಂದೀಪ್ನ ಒಂದೊಂದೇ ಪ್ರೇಮ ಪ್ರಕರಣಗಳು ಠಾಣೆಯಲ್ಲಿ ತೆರದುಕೊಂಡಿವೆ.
20024ರಲ್ಲಿ ಆತ ಚಿಕ್ಕಬಳ್ಳಾಪುರ ತಾಲೂಕಿನ ನಾಯನಹಳ್ಳಿ ಗ್ರಾಮದ ಬಾಲಕಿಯನ್ನು ಮದುವೆ ಮಾಡಿಕೊಂಡಿದ್ದ. ಪ್ರಶಾಂತ್ ನಗರದಲ್ಲಿ ಮತ್ತೊಬ್ಬ ಮಹಿಳೆಗೆ ವಂಚನೆ ಮಾಡಿದ್ದು, ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿರುವ ವಿಷಯವೂ ಹೊರಗೆ ಬಂದಿದೆ.
ಸಂದೀಪ್ನಿಂದ ಹಿಂದೆ ಮೋಸ ಹೋಗಿರುವ ಬಾಲಕಿ ಠಾಣೆಗೆ ಬಂದು ನಿಜರೂಪ ತೆರೆದಿಟ್ಟಿದ್ದಾಳೆ. ಹೀಗಾಗಿ ಯುವತಿ ಆತ ಕಟ್ಟಿದ್ದ ತಾಳಿಯನ್ನು ಕಿತ್ತು ಬಿಸಾಕಿ ತಂದೆ-ತಾಯಿ ಜೊತೆ ಮನೆಗೆ ಹೋಗಿದ್ದಾಳೆ.


