ಸಕಲೇಶಪುರ: ತಾಲ್ಲೂಕಿನ ವಳಲಹಳ್ಳಿ ಗ್ರಾಮಪಂಚಾಯಿತಿಯ ಮೊಗನಹಳ್ಳಿ ಸಮೀಪ ಕಬ್ಬಿಣದ ಪೈಪ್ ತುಂಬಿದ ಈಸರ್ ಲಾರಿ (ಕ್ಯಾಂಟರ್) ತಿರುವು ರಸ್ತೆಯಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಲಾರಿ ಮಗುಚಿ ಬಿದ್ದು, ಪಶ್ಚಿಮ ಬಂಗಾಳ ಮೂಲದ ಸುಮಾರು 25 ವರ್ಷದ ಇಬ್ಬರು ಕೂಲಿ ಕಾರ್ಮಿಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ.
ರಾತ್ರಿ 10 ಗಂಟೆ ಸಮಯದಲ್ಲಿ ಮೊಗನಹಳ್ಳಿ ತಿರುವು ರಸ್ತೆಯಲ್ಲಿ ಅಪಘಾತ ಸಂಭವಿಸಿದಾಗ, ಸರಿಯಾದ ನೆಟ್ವರ್ಕ್ ಸಮಸ್ಯೆ ಕಾರಣ ಲಾರಿ ಹಾಗೂ ಕಬ್ಬಿಣದ ಪೈಪ್ ಮಧ್ಯೆ ಸಿಲುಕಿಕೊಂಡಿದ್ದವರನ್ನು ಸ್ಥಳೀಯರು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.


