ಭ್ರಷ್ಟಾಚಾರ ಆರೋಪ ಕೇಳಿ ಬಂದಿರುವ ಅಧಿಕಾರಿಗಳ ವಿರುದ್ಧ ರಾಜ್ಯದ ಹತ್ತು ಕಡೆಗಳಲ್ಲಿ ಮಂಗಳವಾರ ಬೆಳಗ್ಗೆಯೇ ಲೋಕಾಯುಕ್ತ ದಾಳಿ ನಡೆಸಿದೆ.
ಬೆಂಗಳೂರಿನ RTO ಸೂಪರಿಂಟೆಂಡೆಂಟ್ ಕುಮಾರಸ್ವಾಮಿ, ಮಂಡ್ಯ ನಗರ ಪಾಲಿಕೆಯ ಅಧಿಕಾರಿ ಪುಟ್ಟಸ್ವಾಮಿ, ಬೀದರ್ ಕೃಷ್ಣಾ ಮೇಲ್ದಂಡೆ ಯೋಜನೆ ಮುಖ್ಯಇಂಜಿನಿಯರ್ ಪ್ರೇಮ್ ಸಿಂಗ್.
ಮೈಸೂರು ಹೂಟಗಳ್ಳಿ ನಗರ ಪಾಲಿಕೆ ರೆವಿನ್ಯೂ ಇನ್ಸ್ಪೆಕ್ಟರ್ ರಾಮಸ್ವಾಮಿ ಸಿ., ಧಾರವಾಡ ಕರ್ನಾಟಕ ವಿವಿಯ ಸಹಪ್ರಾಧ್ಯಾಪಕ ಸುಭಾಶ್ ಚಂದ್ರ. ಧಾರವಾಡ- ಪ್ರಾ.ಪಶು ಕ್ಲಿನಿಕ್ ಹುಲಿಗೋಲ್ನ ಹಿರಿಯ ಪರೀಕ್ಷಕ ಸತೀಶ್, ಶಿವಮೊಗ್ಗ SIMS ಮೆಡಿಕಲ್ ಕಾಲೇಜು ಕ್ಲರ್ಕ್ ಲಕ್ಷ್ಮೀಪತಿ ಸಿ.ಎನ್, ದಾವಣಗೆರೆ APMC ಸಹನಿರ್ದೇಶಕ ಪ್ರಭು ಜೆ, ಮೈಸೂರು (ಮಡಿಕೇರಿ) PWD ಇಂಜಿನಿಯರ್ ಗಿರೀಶ್ ಡಿಎಂ ಮನೆ ಹಾಗೂ ಕಚೇರಿಗಳಿಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.


