ವಿಜಯನಗರ, ಧಾರವಾಡ, ಶಿವಮೊಗ್ಗ ಸೇರಿದಂತೆ ಕೆಲವೆಡೆ ಭ್ರಷ್ಟ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಅಕ್ರಮ ಹಣ ಗಳಿಕೆ ಹಾಗೂ ಹಲವಾರು ದೂರು ಹಿನ್ನೆಲೆ ವಿಜಯನಗರ ಆರೋಗ್ಯಾಧಿಕಾರಿ ಶಂಕರ್ ನಾಯ್ಕ ಮನೆ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ.
ಶಂಕರ್ ನಾಯ್ಕ ಒಡೆತನದ ಆಸ್ಪತ್ರೆ ಅಕ್ರಮವಾಗಿ ಪರವಾನಗಿ ಪಡೆದುಕೊಂಡಿದೆ. ಅಂಗವಿಕಲ ಸರ್ಟಿಫಿಕೇಟ್ ನೀಡುವಲ್ಲಿ ಅಕ್ರಮ ನಡೆಸುತ್ತಿದ್ದಾರೆ ಎಂಬ ಆರೋಪ ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಶಿವಮೊಗ್ಗದಲ್ಲಿ ಎಕ್ಸಿಕ್ಯುಟಿವ್ ಇಂಜಿನಿಯರ್ ರೂಪ್ಲಾ ನಾಯ್ಕ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಇ ಆಗಿರುವ ರೂಪ್ಲಾ ನಾಯ್ಕ್ ವಾಸವಿರುವ ಶಿವಮೊಗ್ಗದ ಬಸವನಗುಡಿಯ ಬಾಡಿಗೆ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಕಚೇರಿ ಮೇಲೂ ದಾಳಿ ನಡೆಸಿದ್ದಾರೆ.
ಕಡೂರು ಮೂಲದ ರೂಪ್ಲಾ ನಾಯ್ಕ್ ಕುಟುಂಬಸ್ಥರಿರುವ ಬೆಂಗಳೂರಿನ ನಿವಾಸದ ಮೇಲೂ ಲೋಕಾಯುಕ್ತ ದಾಳಿ ಆಗಿದೆ. ರೂಪ್ಲಾ ನಾಯ್ಕ್ ಸಹಾಯಕ ತಾಂಬೆಯ ವಿದ್ಯಾನಗರದಲ್ಲಿರುವ ಮನೆ ಮೇಲೆ ದಾಳಿ ನಡೆದಿದೆ. ಒಟ್ಟು 6 ತಂಡಗಳಾಗಿ ಶಿವಮೊಗ್ಗ ಲೋಕಾಯುಕ್ತ ಟೀಮ್ ದಾಳಿ ಮಾಡಿ ದಾಖಲೆ ಪರಿಶೀಲಿಸುತ್ತಿವೆ.
ಬೆಳಗಾವಿ ಕೃಷಿ ವಿಜೆಲೆನ್ಸ್ ಉಪ ನಿರ್ದೇಶಕ ರಾಜಶೇಖರ ಅವರ ಬೆಳಗಾವಿ, ಧಾರವಾಡ, ಹಾವೇರಿ ಮತ್ತು ಚಿತ್ರದುರ್ಗದ ಮನೆಗಳ ಮೇಲೆ ದಾಳಿ ಲೋಕಾಯುಕ್ತ ಅಧಿಖಾರಿಗಳು ದಾಳಿ ನಡೆಸಿ ದಾಖಲೆಗಳ ತನಿಖೆ ಕೈಗೊಂಡಿದ್ದಾರೆ. ಬೆಳಗಾವಿ ಕೃಷಿ ಮೂಲ ವಿಜೆಲೆನ್ಸಿಗೆ ರಾಜಶೇಖರ್ ಬಿಜಾಪೂರ ಉಪ ನಿರ್ದೇಶಕ ಆಗಿದ್ದು, ಈ ಹಿಂದೆ ಧಾರವಾಡ ಕೃಷಿ ಇಲಾಖೆ ಉಪನಿರ್ದೇಶಕ ಆಗಿದ್ದರು. ಎಸ್ ಪಿ ಸಿದ್ಲಿಂಗಪ್ಪ ಡಿಎಸ್ ಪಿ ಕುರಬಗಟ್ಟಿ, ಹಾಗೂ ವೆಂಕನಗೌಡ ಪಾಟೀಲ ನೇತೃತ್ವದಲ್ಲಿ ದಾಳಿ ನಡೆದಿದ್ದು, ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.


