Menu

ಜಾಲಿವುಡ್ ಸ್ಟುಡಿಯೊಗೆ ಬೀಗ: ಮುಚ್ಚಿದ ಬಿಗ್ ಬಾಸ್ ಮನೆ!

jollywood

ಬೆಂಗಳೂರು ಹೊರವಲಯದ ಬಿಡದಿಯಲ್ಲಿರುವ ಜಾಲಿವುಡ್ ಸ್ಟುಡಿಯೊಗೆ ಬೀಗ ಜಡಿಯಲಾಗಿದ್ದು,  ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಶೋ ಎರಡನೇ ವಾರಕ್ಕೆ ಬಾಗಿಲು ಮುಚ್ಚಿದೆ.

ಪರವಾನಗಿ ಪಡೆದಿಲ್ಲ. ಅನುಮತಿಗಾಗಿ ಸರ್ಕಾರಕ್ಕೆ ಪತ್ರವೂ ಬರೆದಿಲ್ಲ ಹಾಗೂ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಮಾಡಿಲ್ಲ ಎಂಬುದೂ ಸೇರಿದಂತೆ ಸಂಪೂರ್ಣ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ವಾಯು ನಿಯಂತ್ರಣ ಮಂಡಳಿ ಅಧಿಕಾರಿಗಳು ಬಿಡದಿಯಲ್ಲಿರುವ ಜಾಲಿವುಡ್ ಸ್ಟುಡಿಯೋಗೆ ಮಂಗಳವಾರ ಬಿಗ ಜಡಿದರು.

ಜಾಲವುಡ್ ಸ್ಟುಡಿಯೋದಲ್ಲಿ ಕಳೆದ ಎರಡು ವಾರಗಳಿಂದ ನಡೆಯುತ್ತಿದ್ದ ಬಿಗ್ ಬಾಸ್ ರಿಯಾಲಿಟಿ ಶೋನ 12ನೇ ಆವೃತ್ತಿಯೂ ಮುಚ್ಚಿದಂತೆ ಆಗಿದೆ. ಬಿಗ್ ಬಾಸ್ ಶೋನಲ್ಲಿ ಪಾಲ್ಗೊಂಡಿದ್ದ ಸ್ಪರ್ಧಿಗಳನ್ನು ಹೊರಗೆ ಕಳುಹಿಸಲು ರಾತ್ರಿ 7.30ರವರೆಗೆ ಕಾಲವಾಶ ನೀಡಲಾಗಿದೆ.

ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ಜಾರಿ ಮಾಡಿದರೂ ಉತ್ತರಿಸದ ಬಿಗ್ ಬಾಸ್ ಕಾರ್ಯಕ್ರಮ ನಿರೂಪಕ ಸಂಸ್ಥೆ ಹಾಗೂ ಜಾಲಿವುಡ್ ಸ್ಟುಡಿಯೋ ಮಾಲೀಕರು ಪ್ರತಿಕ್ರಿಯಿಸದ ಕಾರಣ ಬೀಗ ಹಾಕುತ್ತಿದ್ದೇವೆ. ಜನರನ್ನು ಹೊರಗೆ ಕಳುಹಿಸಿದ ನಂತರ ಸ್ಟುಡಿಯೊಗೆ ಬೀಗ ಹಾಕಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Related Posts

Leave a Reply

Your email address will not be published. Required fields are marked *