ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ಬಾರ್ ಒಂದರಲ್ಲಿ ಮುದ್ದಾದ ಮೊಮ್ಮಗನಿಗೆ ಅಜ್ಜ ಸಾರಾಯಿ ಕುಡಿಸಿರುವುದು ಎಲ್ಲೆಡೆ ಸುದ್ದಿಯಾಗಿದೆ.
ತಿದ್ದಿ ತೀಡಿ ಬುದ್ಧಿ ಹೇಳಬೇಕಾದ ಅಜ್ಜನಿಂದಲೇ ಈ ಕೃತ್ಯ ನಡೆದಿದೆ. ತಾನು ಕುಡಿಯುವುದಲ್ಲದೆ ಮೂರು ವಷರದ ಮಗುವಿಗೆ ಕುಡಿಸಿ ಹಾಳು ದಾರಿಗೆ ಅಜ್ಜ ತಳ್ಳುತ್ತಿರುವುದಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊಮ್ಮಗನನ್ನು ಬಾರೊಂದಕ್ಕೆ ಕರೆದುಕೊಂಡು ಹೋಗಿದ್ದ ಅಜ್ಜ ತನ್ನ ಜೊತೆ ಪುಟ್ಟ ಮೊಮ್ಮಗನಿಗೂ ಸಾರಾಯಿ ಸುರಿದು ನೀಡಿದ್ದಾನೆ. ಸಾರ್ವಜನಿಕರು ಮಗುವಿಗೆ ಆರಾಯಿ ಕೊಡಬೇಡಿ ಎಂದರೂ ಅಜ್ಜ ತಲೆ ಕೆಡಿಸಿಕೊಳ್ಳಲೇ ಇಲ್ಲ. ಸ್ಥಳೀಯರು ಮೊಬೈಲ್‌ನಲ್ಲಿ ಈ ದೃಶ್ಯ ಸೆರೆ ಹಿಡಿದದಿದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಾರ್ ಮತ್ತು ಅಜ್ಜನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿರುವ ಸಾರ್ವಜನಿಕರು, ಅಬಕಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.


