ಲಿವ್ ಇನ್ ಟುಗೆದರ್‌ನಲ್ಲಿದ್ದ ವ್ಯಕ್ತಿ ನಂತರ ಮದುವೆಗೆ ನಿರಾಕರಿಸಿದರೆ ಅದು ಗಂಭೀರ ಅಪರಾಧವಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ನಾಲ್ಕು ವರ್ಷ ಒಪ್ಪಿತ ದೈಹಿಕ ಸಂಬಂಧ ಹೊಂದಿದ್ದರೂ ಮದುವೆಯ ಭರವಸೆಯನ್ನು ಮುರಿದರೆ ಅದು ಕಾನೂನಿನ ದೃಷ್ಟಿಯಲ್ಲಿ ಅಪರಾಧವಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಮಹೋಬಾ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ 2024ರ ಆಗಸ್ಟ್ 17ರಂದು ಸಹಜೀವನದ ಸಂಗಾತಿ ವಿರುದ್ಧ ಮಹಿಳೆ ಸಲ್ಲಿಸಿದ್ದ ದೂರನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಮಹಿಳೆಯು ಅಲಹಾಬಾದ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ನ್ಯಾಯಮೂರ್ತಿ ಅರುಣಕುಮಾರ್ ಸಿಂಗ್ ದೇಶವಾಲ್ ಅವರ ನೇತೃತ್ವದ ನ್ಯಾಯಪೀಠವು ಅರ್ಜಿಯ ವಿಚಾರಣೆ ನಡೆಸಿದೆ. “ಸಾಮರ್ಥ್ಯ ಇರುವ ವಯಸ್ಕರು ಸ್ವಇಚ್ಛೆಯಿಂದ ಸಹಜೀವನವನ್ನು ಆಯ್ಕೆ ಮಾಡಿಕೊಂಡರೆ ಆ ಸಂಬಂಧದಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಅವರಿಗೆ ಅರಿವಿರುತ್ತದೆ ಎಂದು ಊಹಿಸಬೇಕು. ಮದುವೆಯ ಭರವಸೆಯಿಂದ ಒಪ್ಪಿತ ಸಂಬಂಧಕ್ಕೆ ಸಮ್ಮತಿಯನ್ನು ನೀಡಿದ್ದೇನೆ ಎಂಬ ವಾದವನ್ನು ಕಾನೂನಿನ ದೃಷ್ಟಿಯಲ್ಲಿ ಒಪ್ಪಿಕೊಳ್ಳಲಾಗದು” ಎಂದು ಸೆಪ್ಟೆಂಬರ್ 8, 2025ರಂದು ಪೀಠವು ಆದೇಶ ಪ್ರಕಟಿಸಿದೆ. ಸಂಗಾತಿಯ ವಿರುದ್ಧ ಅತ್ಯಾಚಾರದ ಆರೋಪದ ಮೇಲ್ಮನವಿಯನ್ನು ತಿರಸ್ಕರಿಸಿದೆ.
ಈ ತೀರ್ಪು ಸಹಜೀವನಕ್ಕೆ ಸಂಬಂಧಿಸಿದ ಕಾನೂನು ಕುರಿತಂತೆ ಮಹತ್ವದ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಮದುವೆಯ ಭರವಸೆಯನ್ನು ಕಾನೂನಿನ ದೃಷ್ಟಿಯಲ್ಲಿ ಒಪ್ಪಿತ ಸಂಬಂಧಕ್ಕೆ ಆಧಾರವಾಗಿ ಒಪ್ಪಿಕೊಳ್ಳಲಾಗದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ವಕ್ಫ್ ತಿದ್ದುಪಡಿ ಕಾಯ್ದೆ 2025 ರ ನಿಬಂಧನೆಗೆ ಸುಪ್ರೀಂ ತಡೆ
ವಕ್ಫ್ ತಿದ್ದುಪಡಿ ಕಾಯ್ದೆ ಕುರಿತು ಸುಪ್ರೀಂಕೋರ್ಟ್ ಕಾನೂನಿಗೆ ತಡೆ ನೀಡುವ ಬೇಡಿಕೆಯನ್ನು ಪರಿಗಣಿಸಲು ನಿರಾಕರಿಸಿದೆ. ರಾಜ್ಯ ವಕ್ಫ್ ಮಂಡಳಿಗಳು ಮತ್ತು ಕೇಂದ್ರ ವಕ್ಫ್ ಮಂಡಳಿಗಳಲ್ಲಿ ಮುಸ್ಲಿಮೇತರರ ಸಂಖ್ಯೆ ಮೂರು ಮೀರಬಾರದು ಎಂದು ಹೇಳಿದೆ.
ವಕ್ಫ್ ಮಂಡಳಿಯ ಸದಸ್ಯರಾಗಲು ಕನಿಷ್ಠ 5 ವರ್ಷ ಇಸ್ಲಾಂ ಧರ್ಮವನ್ನು ಅನುಸರಿಸುವ ಷರತ್ತನ್ನು ವಿಧಿಸಿದ ನಿಬಂಧನೆಯನ್ನು ನ್ಯಾಯಾಲಯವು ಕೋರ್ಟ್ ತಡೆಹಿಡಿದಿದೆ. ಈ ನಿಟ್ಟಿನಲ್ಲಿ ಸರಿಯಾದ ನಿಯಮಗಳನ್ನು ರೂಪಿಸುವವರೆಗೆ ಈ ನಿಬಂಧನೆ ಜಾರಿಗೆ ತರಲಾಗುವುದಿಲ್ಲ ಎಂದು ಹೇಳಿದೆ.
ವಕ್ಫ್ ಕಾನೂನಿಗೆ ಸಂಬಂಧಿಸಿದ ಸೆಕ್ಷನ್ 3 ಮತ್ತು ಸೆಕ್ಷನ್ 4 ಅನ್ನು ನ್ಯಾಯಾಲಯ ನಿಷೇಧಿಸಿದೆ. ಸಂಪೂರ್ಣ ಕಾನೂನನ್ನು ನಿಷೇಧಿಸುವ ಹಕ್ಕು ನಮಗಿಲ್ಲ ಎಂದು ನ್ಯಾಯಾಲಯ ಹೇಳಿದೆ. ವಕ್ಫ್ ಮಂಡಳಿಯ ಸಿಇಒ ಮುಸ್ಲಿಂ ಸಮುದಾಯದಿಂದ ಬಂದಿರಬೇಕು. ವಕ್ಫ್ ಮಂಡಳಿಯ 11 ಸದಸ್ಯರಲ್ಲಿ ಮೂರಕ್ಕಿಂತ ಹೆಚ್ಚು ಮುಸ್ಲಿಮೇತರರು ಇರಬಾರದು ಎಂದು ನ್ಯಾಯಾಲಯ ಹೇಳಿದೆ.