ದರ ಏರಿಕೆ ಮತ್ತು ಪರವಾನಗಿ ದರ ಹೆಚ್ಚಳ ವಿರೋಧಿಸಿ ಮೇ 29 ರಿಂದ ಕರ್ನಾಟಕದಾದ್ಯಂತ ಮದ್ಯದಂಗಂಡಿ ಬಂದ್ ಮಾಡಲು ರಾಜ್ಯದ ಮದ್ಯ ಮಾರಾಟಗಾರರು ತೀರ್ಮಾನ ಮಾಡಿರುವುದಾಗಿ ರಾಜ್ಯ ಮದ್ಯ ಮಾರಾಟಗಾರರ ಸಂಘದ ಉಪಾಧ್ಯಕ್ಷ ಕರುಣಾಕರ್ ಹೆಗ್ಡೆ ತಿಳಿಸಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಮೂರು ಬಾರಿ ಮದ್ಯದ ದರ ಏರಿಕೆ ಮಾಡಿದೆ. ಮದ್ಯ ಮಾರಾಟಗಾರರ ಲೈಸೆನ್ಸ್ ಶುಲ್ಕ ದುಪ್ಪಟ್ಟು ಏರಿಕೆ ಮಾಡಲಾಗಿದೆ. ಮದ್ಯ ಮಾರಾಟಗಾರರ ಸಂಘ ಸಮಾಲೋಚನೆ ನಡೆಸಿ ಮೇ 29 ರಿಂದ ಬಾರ್ ಆ್ಯಂಡ್ ರೆಸ್ಟೋರೆಂಟ್, ವೈನ್ ಸ್ಟೋರ್ ಕ್ಲೋಸ್ ಮಾಡಲು ತೀರ್ಮಾನ ಮಾಡಿರುವುದಾಗಿ ಹೇಳಿದ್ದಾರೆ.
26 ರಂದು ಮದ್ಯ ಮಾರಾಟಗಾರರ ಸಂಘದ ಜೊತೆಗೆ ಮಾತುಕತೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಮದ್ಯ ಮಾರಾಟಗಾರರ ಬೇಡಿಕೆಗಳನ್ನು ಈಡೇರಿಸದಿದ್ದರೆ 29 ರಿಂದ ನಿರಂತರವಾಗಿ ಮದ್ಯದ ಅಂಗಡಿಗಳನ್ನು ಬಂದ್ ಮಾಡಲು ರಾಜ್ಯ ಮದ್ಯ ಮಾರಾಟಗಾರರು ತೀರ್ಮಾನ ಮಾಡಿದ್ದಾರೆ.
ಬಾರ್ ಆ್ಯಂಡ್ ರೆಸ್ಟೋರೆಂಟ್ಗೆ ಈ ಮೊದಲು ಲೈಸೆನ್ಸ್ ಶುಲ್ಕ 8,62,000 ರೂ. ಇತ್ತು. ಈಗ 15,00,000 ರೂ.ಗೆ ಏರಿಕೆ ಆಗಿದೆ, ಸೆಸ್ 2,25,000 ರೂ. ಸೇರಿ ಒಟ್ಟು ಒಟ್ಟು 17,25,000 ರೂ. ಆಗಲಿದೆ. ಸ್ಟಾರ್ ಹೋಟೆಲ್ ಲೈಸೆನ್ಸ್ ಶುಲ್ಕ 9,75,000 ರೂ. ಇದ್ದಿದ್ದು ಈಗ 20 ಲಕ್ಷ ರೂ. ಆಗಿದೆ, ಇದಕ್ಕೆ ಸೆಸ್ 3 ಲಕ್ಷ ರೂ. ಸೇರಿ ಒಟ್ಟು 23 ಲಕ್ಷ ರೂ. ಆಗಲಿದೆ. ಬೋರ್ಡಿಂಗ್ ಆ್ಯಂಡ್ ಲಾಡ್ಜಿಂಗ್ ಲೈಸೆನ್ಸ್ ಶುಲ್ಕ 9,75,000 ರೂ. ಇದ್ದದ್ದು ಈಗ 17,00,000 ರೂ.ಗೆ ಏರಿಕೆಯಾಗಿದೆ. ಸೆಸ್ 2,55,000 ರೂ. ಸೇರಿ ಒಟ್ಟು 19,550,00 ರೂ. ಆಗಲಿದೆ.