Menu

ಬೆಂಗಳೂರಿನ ಹಲವೆಡೆ ಇಂದು ಮದ್ಯ ಮಾರಾಟ ಬಂದ್‌

ಸಾಮೂಹಿಕ ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವು ಕಡೆ ಭಾನುವಾರ ಮದ್ಯ ಮಾರಾಟ ನಿಷೇಧಿಸಲಾಗಿದೆ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಿಎಲ್ -4 ಸಿಎಲ್-6 ಪರವಾನಗಿ ಹೊರತು ಪಡಿಸಿ ಮದ್ಯ ಮಾರಾಟ ಬಂದ್ ಮಾಡಲಾಗಿದೆ.

ಎಲ್ಲ ಬಾರ್-ರೆಸ್ಟೋರೆಂಟ್, ವೈನ್ ಶಾಪ್, ಪಬ್ ಎಂಎಸ್ ಐಎಲ್ ಮಳಿಗೆ ಮುಚ್ಚುವಂತೆ ಇಲಾಖೆ ಆದೇಶಿಸಿದೆ. ಆರ್ ಟಿ ನಗರ, ಜೆಸಿ ನಗರ, ಸಂಜಯ್ ನಗರ, ಹೆಬ್ಬಾಳ, ಕೆಜಿ ಹಳ್ಳಿ, ಡಿಜೆಹಳ್ಳಿ, ಗೋವಿಂದಪುರ, ಭಾರತೀನಗರ, ಪುಲಕೇಶಿ‌ನಗರ, ಹಲಸೂರು, ಯಲಹಂಕ, ಕಮರ್ಷಿಯಲ್ ಸ್ಟ್ರೀಟ್, ಕೊಡಿಗೆಹಳ್ಳಿ, ವಿದ್ಯಾರಣ್ಯಪುರ, ಹೆಬ್ಬಗೋಡಿ, ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ, ಗೋವಿಂದಪುರ, ಬಾಣಸವಾಡಿ, ರಾಮಮೂರ್ತಿನಗರ, ಹೆಣ್ಣೂರು, ಕಮರ್ಷಿಯಲ್‌ ಸ್ಟ್ರೀಟ್‌, ಶಿವಾಜಿನಗರ, ಭಾರತೀನಗರ, ಪುಲಕೇಶಿನಗರ, ಹಲಸೂರು, ಕೊತ್ತನೂರು, ಅಮೃತಹಳ್ಳಿ, ಸಂಪಿಗೆಹಳ್ಳಿ, ಜೆ.ಸಿ.ನಗರ, ಆರ್‌.ಟಿ.ನಗರ, ಹೆಬ್ಬಾಳ, ಯಶವಂತಪುರ, ಸಂಜಯನಗರ, ಜಾಲಹಳ್ಳಿ, ಆರ್‌ಎಂಸಿ ಯಾರ್ಡ್‌, ಸದಾಶಿವನಗರ ಸೇರಿದಂತೆ ಹಲವೆಡೆ ಮದ್ಯ ಮಾರಾಟವನ್ನು ಆ.31 ರಿಂದ ಸೆ.1ರ ಬೆಳಗ್ಗೆ 6ರವರೆಗೆ ಬಂದ್‌ ಮಾಡಲಾಗಿದೆ.

ಆ.31ರ ಬೆಳಿಗ್ಗೆ 6ರಿಂದ ಮಧ್ಯರಾತ್ರಿ 12ರವರೆಗೆ ತಲಘಟ್ಟಪುರ, ಸುಬ್ರಮಣ್ಯಪುರ, ಕೆಂಗೇರಿ, ಜ್ಞಾನಭಾರತಿ, ಕುಂಬಳಗೋಡು, ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಎಲ್ಲಾ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.

Related Posts

Leave a Reply

Your email address will not be published. Required fields are marked *