Menu

ಕೊಚ್ಚಿ ಬಳಿ ಅರಬಿ ಸಮುದ್ರದಲ್ಲಿ ಮುಳುಗಿದ ಲೈಬೀರಿಯಾ ಹಡಗು, ಸಿಬ್ಬಂದಿಯ ರಕ್ಷಣೆ

ಭಾರತೀಯ ನೌಕಾಪಡೆ, ಕರಾವಳಿ ಕಾವಲು ಪಡೆ ಮತ್ತು ಹಡಗು ಸಂಸ್ಥೆಗಳ ರಕ್ಷಣಾ ಕಾರ್ಯಾಚರಣೆ ಫಲ ನೀಡದೆ ಕೊಚ್ಚಿ ಕರಾವಳಿಯಿಂದ 38  ಮೈಲಿಕಲ್‌ ಗಳಷ್ಟು ದೂರದಲ್ಲಿ ಲೈಬೀರಿಯಾದ ಕಂಟೇನರ್ ಹಡಗು ಅರೇಬಿಯನ್ ಸಮುದ್ರದಲ್ಲಿ ಭಾನುವಾರ ಬೆಳಗ್ಗೆ ಮುಳುಗಿದೆ.

ಸರಕುಗಳನ್ನು ಹೊಂದಿರುವ ಕಂಟೇನರ್‌ಗಳನ್ನು ಸಾಗಿಸುತ್ತಿದ್ದ ಹಡಗು ಶನಿವಾರ ಮಧ್ಯಾಹ್ನ ಸ್ಟಾರ್‌ಬೋರ್ಡ್ ಬದಿಗೆ 26 ಡಿಗ್ರಿಗಳಷ್ಟು ಕೆಳಮಟ್ಟಕ್ಕೆ ಇಳಿದಿತ್ತು. ಭಾರತೀಯ ಕರಾವಳಿ ಕಾವಲು ಪಡೆಯ ಮೂರು ಹಡಗುಗಳು – ಭಾರತೀಯ ನೌಕಾಪಡೆಯ INS ಸುಜಾತ, ICGS ಅರ್ನ್ವೇಶ್ ಮತ್ತು ICGS ಸಕ್ಷಮ್ ರಕ್ಷಣಾ ಕಾರ್ಯಾಚರಣೆಗಳಲ್ಲಿ ತೊಡಗಿತ್ತು.

ಹಡಗಿನಲ್ಲಿದ್ದ 24 ಸಿಬ್ಬಂದಿಯಲ್ಲಿ 21 ಜನರನ್ನು ಶನಿವಾರ ಸಂಜೆ ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆ ರಕ್ಷಿಸಿದೆ. ಹಡಗು ಮುಳುಗಲು ಪ್ರಾರಂಭಿಸುತ್ತಿದ್ದಂತೆ ನೌಕಾಪಡೆಯು ಉಳಿದ ಮೂವರನ್ನು – ಕ್ಯಾಪ್ಟನ್, ಮುಖ್ಯ ಎಂಜಿನಿಯರ್ ಮತ್ತು ಎರಡನೇ ಎಂಜಿನಿಯರ್ ಅವರನ್ನು ಭಾನುವಾರ ಬೆಳಗ್ಗೆ ರಕ್ಷಿಸಲಾಗಿದೆ. ರಕ್ಷಿಸಲಾದ 21 ಸಿಬ್ಬಂದಿಯನ್ನು ಕೊಚ್ಚಿಯಲ್ಲಿರುವ ಕೋಸ್ಟ್ ಗಾರ್ಡ್ ಪ್ರಧಾನ ಕಚೇರಿಗೆ ಸ್ಥಳಾಂತರಿಸಲಾಗಿದ್ದು, ಕ್ಯಾಪ್ಟನ್ ಮತ್ತು ಇಬ್ಬರು ಎಂಜಿನಿಯರ್‌ಗಳನ್ನು ಕೊಚ್ಚಿ ನೌಕಾ ನೆಲೆಗೆ ಕರೆದೊಯ್ಯಲಾಗಿದೆ.

1997 ರಲ್ಲಿ ನಿರ್ಮಿಸಲಾದ ಲೈಬೀರಿಯಾ ಧ್ವಜ ಹೊಂದಿರುವ ಈ ಕಂಟೇನರ್ ಹಡಗು MSC ಎಲ್ಸಾ 3, 184 ಮೀಟರ್ ಉದ್ದ ಮತ್ತು 25.3 ಮೀಟರ್ ಅಗಲವಿದೆ. ರಕ್ಷಣಾ ವಕ್ತಾರ ಅತುಲ್ ಪಿಳ್ಳೈ ಮತ್ತಷ್ಟು ರಕ್ಷಣಾ ಕಾರ್ಯಾಚರಣೆಗಾಗಿ ಅದೇ ಕಂಪನಿಯ ಮತ್ತೊಂದು ಹಡಗು ಸ್ಥಳಕ್ಕೆ ತಲುಪಿದೆ ಎಂದು ಮಾಹಿತಿ ನೀಡಿದ್ದಾರೆ.

Related Posts

Leave a Reply

Your email address will not be published. Required fields are marked *