ನಾಸಿಕ್ ಸವ್ತಾ ಮಲಿ ಗ್ರಾಮದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಚಿರತೆ ದಾಳಿ ಮಾಡಿದ ವೇಳೆ ತಪ್ಪಿಸಿಕೊಳ್ಳಲೆತ್ನಿಸಿದ ರೈತ ಮತ್ತು ಚಿರತೆ ಬಾವಿಗೆ ಬಿದ್ದು ಪ್ರಾಣ ಹೋಗಿದೆ. ಸವ್ತಾ ಮಲಿ ಗ್ರಾಮದ ನಿವಾಸಿ ಗೋರಖ್ ಜಾಧವ್ ಮೃತಪಟ್ಟವರು.
ಮಧ್ಯಾಹ್ನ ಬೆಳೆಗೆ ನೀರು ಹಾಯಿಸಿ ಹೊಲದಲ್ಲಿ ಕುಳಿತು ಊಟ ಮಾಡುತ್ತಿದ್ದಾಗ ಚಿರತೆ ಅವರ ಮೇಲೆ ದಾಳಿ ಮಾಡಿದೆ. ಜಾಧವ್ ಚಿರತೆಯೊಂದಿಗೆ ಹೊಡೆದಾಡಿದ್ದು, ಚಿರತೆಯೊಂದಿಗೆ ಗೋರಖ್ ಜಾಧವ್ ಬಾವಿಗೆ ಬಿದ್ದು ಪ್ರಾಣ ಹೋಗಿದೆ.
ವಿಚಾರ ತಿಳಿದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಬಂದು ಜಾಧವ್ ಹಾಗೂ ಚಿರತೆಯ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದಾರೆ.ಜಾಧವ್ ಅವರ ಸಾವಿನ ಕಾರಣ ಜನರು ಉದ್ರಿಕ್ತರಾಗಿ ಚಿರತೆಯ ರಕ್ಷಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಅಲ್ಲಿದ್ದ ಜನರ ಮನವೊಲಿಸುವುದಕ್ಕೆ ಮೂರು ಗಂಟೆಗೂ ಹೆಚ್ಚು ಕಾಲ ವ್ಯಯಿಸಿದ್ದು, ಅಷ್ಟರಲ್ಲಿ ಚಿರತೆಯೂ ಬಾವಿಗೆ ಬೀಳುವಾಗ ಆಗಿದ್ದ ಗಾಯಗಳಿಂದ ಮೃತಪಟ್ಟಿದೆ. ಗ್ರಾಮಸ್ಥರು ಅರಣ್ಯ ಇಲಾಖೆಯ ಸಿಬ್ಬಂದಿಗೆ ಬಾವಿಯೊಳಗೆ ಪಂಜರವನ್ನು ಇಳಿಸಿ ಚಿರತೆಯನ್ನು ರಕ್ಷಿಸುವುದಕ್ಕೆ ಬಿಡಲಿಲ್ಲ. ಚಿರತೆ ಕೂಡ ಮೃತಪಟ್ಟಿದೆ.
ಚಿರತೆ ಮೃತಪಟ್ಟ ನಂತರವೇ ಶವವನ್ನು ಮೇಲೆತ್ತಿ ಅರಣ್ಯ ಇಲಾಖೆ ಸಿಬ್ಬಂದಿ ತೆಗೆದುಕೊಂಡು ಹೋಗಿದ್ದಾರೆ. ಜಾಧವ್ ರ ಸಾವಿನಿಂದ ಅರಣ್ಯ ಇಲಾಖೆ ಮೇಲೆ ಸಿಟ್ಟುಗೊಂಡಿದ್ದ ಜನರಿಂದಾಗಿ ಚಿರತೆಯೊಂದು ಪ್ರಾಣ ಕಳೆದುಕೊಂಡಂತಾಗಿದೆ.


