ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿ ಬಳಿ ಚಿರತೆ ಮೇಕೆಯನ್ನು ಹೊತ್ತೊಯ್ದ ಸ್ಥಳದಲ್ಲಿ ಕೂಂಬಿಂಗ್ ನಡೆಸುವಾಗ ಅರಣ್ಯ ಇಲಾಖೆಯ ಆನೆ ಕಾವಲುಪಡೆ ಸಿಬ್ಬಂದಿ ಬಂಗಾರ್ ಎಂಬವವರ ಮೇಲೆ ಚಿರತೆ ದಾಳಿ ನಡೆಸಿದ್ದು ಕತ್ತು, ತಲೆ, ಕೈ ಗಳನ್ನು ಗಾಯಗೊಳಿಸಿದೆ.
ಮೇಕೆಯನ್ನು ಹೊತ್ತೊಯ್ದ ಸಂದರ್ಭದಲ್ಲಿ ರೈತರು ಅರಣ್ಯಾದಿಕಾರಿಗಳಿಗೆ ಕರೆ ಮಾಡಿ ತಿಳಿಸಿದ್ದಾರೆ ಈ ಸಂದರ್ಭದಲ್ಲಿ ಅನೆ ಕಾವಲು ಪಡೆಯ ಸಿಬ್ಬಂದಿ ತೆರಳಿ ಮೇಕೆಯನ್ನು ಹೊತ್ತೊಯ್ದ ಸ್ಥಳದಲ್ಲಿ ಕೂಗಾಡಿ ಪಟಾಕಿ ಹೊಡೆದು ಕೂಗಿಕೊಂಡಾಗ ಚಿರತೆ ಓಡಿ ಹೋಗಿದೆ, ಘಟನೆಯ ನಂತರ ಸುತ್ತಮುತ್ತಲಿನ ಗ್ರಾಮಸ್ಥರು ಗಾಬರಿಯಾಗಿದ್ದು ಹೊರಗೆ ಓಡಾಡಲು ಭಯಭೀತರಾಗಿದ್ದಾರೆ.
ಚಿರತೆ ದಾಳಿಗೆ ಒಳಗಾದ ಅನೆ ಕಾವಲುಪಡೆ ಸಿಬ್ಬಂದಿ ಬಂಗಾರ್ ಗೆ ಗಂಭೀರ ಗಾಯವಾಗಿದ್ದು ಬೇಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯಲಾಗಿದೆ.
ಕುರುಬರಹುಂಡಿ ಬಳಿ ಗ್ರಾಮದ ಮಹೇಶ್ ಎಂಬವವರು ತೋಟದ ಮನೆಯಿಂದ ಹಾಲು ಕರೆದುಕೊಂಡು ಗ್ರಾಮದ ಕಡೆ ಬರುವಾಗ ಹುಲಿ ರಸ್ತೆಯಲ್ಲಿ ನಿಂತಿತ್ತು. ಇದನ್ನು ನೋಡಿದ ಮಹೇಶ್ ಮತ್ತೆ ತೊಟದ ಮನೆ ಕಡೆ ಓಡಿ ಹೊಗಿದ್ದಾರೆ. ಈ ಭಾಗದಲ್ಲಿ ಹುಲಿ,ಚಿರತೆ ಸಂಖ್ಯೆ ಹೆಚ್ಚಿದ್ದು ಗ್ರಾಮಸ್ಥರು ಅರಣ್ಯ ಇಲಾಖೆಯವರನ್ನು ಒತ್ತಾಯಿಸಿದ್ದಾರೆ.


