Wednesday, October 15, 2025
Menu

ಲೇಔಟ್ ಪರ್ಮಿಷನ್ ವಿಳಂಬ: ಸಿಂಧನೂರು ಸುಡಾ ಕಚೇರಿಯಲ್ಲಿ ವ್ಯಕ್ತಿ ಆತ್ಮಹತ್ಯೆ ಯತ್ನ

ರಾಯಚೂರಿನ ಸಿಂಧನೂರು ನಗರದ ಸುಡಾ ಕಚೇರಿಯಲ್ಲಿ ಲೇಔಟ್ ಪರ್ಮಿಷನ್ ವಿಳಂಬ ಹಿನ್ನೆಲೆಯಿಂದ ಬೇಸತ್ತ ವ್ಯಕ್ತಿ ಡಿಸೇಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಶಂಕರ್‌ ಎಂಬವರು 2017ರಲ್ಲಿ ಸರ್ವೆ ನಂ 965 ಹಿಸ್ಸಾ 17 ಮತ್ತು 18 ರ 20 ಗುಂಟೆ ಜಮೀನಿನ ತಾತ್ಕಾಲಿಕ ನಕ್ಷೆ ಗೆ ಅರ್ಜಿ ಸಲ್ಲಿಸಿ, 2019 ರಲ್ಲಿ 43 ಸಾವಿರ ಶುಲ್ಕ ತುಂಬಿದ್ದರು. ಆದರೆ ನೆಪಗಳನ್ನು ಹೇಳುತ್ತ ಅಧಿಕಾರಿಗಳು ತಾತ್ಕಾಲಿಕ ನಕ್ಷೆ ನೀಡದೆ ಎಂಟು ವರ್ಷಗಳಿಂದ ಕಚೇರಿಗೆ ಅಲೆದಾಡಿಸುತ್ತಿರುವುದರಿಂದ ಬೇಸತ್ತಿದ್ದರು. ಹೀಗಾಗಿ ಶಂಕರ್ ಸುಡಾ ಕಚೇರಿಯಲ್ಲಿ ಡಿಸೇಲ್ ಸುರಿದು ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಳೀಯರು ರಕ್ಷಿಸಿದ್ದಾರೆ.

ಕೊಪ್ಪಳದಲ್ಲಿ ಪಿಎಸ್‌ಐ ಅಮಾನತು

ಕೆಪಿಸಿಸಿ ಕಾರ್ಮಿಕ ವಿಭಾಗದ ಕಾರ್ಯದರ್ಶಿ ಮೇಲೆ ಹಲ್ಲೆ ಮಾಡಿದ್ದ ಕುಕನೂರ ಪೊಲೀಸ್ ಠಾಣೆಯ ಪಿಎಸ್‌ಐ ರುರುರಾಜ್‌ ಎಂಬವರನ್ನು ಅಮಾನತು ಮಾಡಿ ಕೊಪ್ಪಳ ಎಸ್ಪಿ ರಾಮ್ ಅರಸಿದ್ದಿ ಆದೇಶ ಹೊರಡಿಸಿದ್ದಾರೆ.

ಕೆಪಿಸಿಸಿ ಕಾರ್ಮಿಕ ವಿಭಾಗದ ಕಾರ್ಯದರ್ಶಿ ಗಾಳೆಪ್ಪ ಎಂಬವರ ಮೇಲೆ ಪಿಎಸ್‌ಐ ಗುರುರಾಜ್ ಹಲ್ಲೆ ನಡೆಸಿದ್ದರು. ಈ ಹಿನ್ನೆಲೆ ಪಿಎಸ್‌ಐ ವಿರುದ್ಧ ದಲಿತ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿದ್ದರು. ಹಲ್ಲೆ ಮಾಡಿದ್ದ ವೀಡಿಯೊ ಸಿಸಿಟಿವಿಯಲ್ಲಿ ದಾಖಳಾಗಿತ್ತು. ಪ್ರತಿಭಟನೆಗೆ ಮಣಿದ ಎಸ್ಪಿ ರಾಮ್ ಅರಸಿದ್ದಿ ಅವರು ಪಿಎಸ್‌ಐ ಗುರುರಾಜ್‌ನ್ನು ಅಮಾನತು ಮಾಡಿ ಆದೇಶಿಸಿದ್ದಾರೆ.

Related Posts

Leave a Reply

Your email address will not be published. Required fields are marked *