Saturday, February 22, 2025
Menu

ಕಳೆದ ವರ್ಷ ಬಿಜೆಪಿ ಆದಾಯ 4,340 ಕೋಟಿ ರೂ.: ಎಡಿಆರ್‌ ವರದಿ

ಅಸೋಸಿಯೇಷನ್‌ ಆಫ್‌ ಡೆಮಾಕ್ರಾಟಿಕ್‌ ರೀಫಾರ್ಮ್‌ಸ್‌  ವರದಿ ಪ್ರಕಾರ, 2023-24ರಲ್ಲಿ ಬಿಜೆಪಿ ₹4340.47 ಕೋಟಿ ರೂ. ಆದಾಯ ಗಳಿಸಿದೆ. ಇದು ಆರು ರಾಷ್ಟ್ರೀಯ ಪಕ್ಷಗಳ ಒಟ್ಟು ಆದಾಯದ ೭೪.೫೭% ರಷ್ಟಿದೆ. ಬಿಜೆಪಿ ತನ್ನ ಆದಾಯದ 50.96% ಮಾತ್ರ ₹2,211.69 ಕೋಟಿ ರೂ. ಖರ್ಚು ಮಾಡಿದೆ.

2023-24ರಲ್ಲಿ ಭಾರತದ ರಾಷ್ಟ್ರೀಯ ಪಕ್ಷಗಳ ಪೈಕಿ ಬಿಜೆಪಿ ಅತಿ ಹೆಚ್ಚು ಆದಾಯ ಗಳಿಸಿದ ಪಕ್ಷವಾಗಿದೆ. ಒಟ್ಟು ₹4,340.47 ಕೋಟಿ ಗಳಿಸಿದ್ದು, ಆರು ರಾಷ್ಟ್ರೀಯ ಪಕ್ಷಗಳ ಒಟ್ಟು ಆದಾಯದ 74.57% ರಷ್ಟಿದೆ.ಕಾಂಗ್ರೆಸ್ ₹1,225.12 ಕೋಟಿ ಆದಾಯ ಗಳಿಸಿ ₹1,025.25 ಕೋಟಿ ಖರ್ಚು ಮಾಡಿದೆ. ಇದು ಅದರ ಒಟ್ಟು ಆದಾಯದ 83.69% ರಷ್ಟಿದೆ ಎಂದು ವರದಿ ತಿಳಿಸಿದೆ.

ರಾಷ್ಟ್ರೀಯ ಪಕ್ಷಗಳ ಆದಾಯದ ಹೆಚ್ಚಿನ ಭಾಗ ಚುನಾವಣಾ ಬಾಂಡ್‌ಗಳಿಂದ ಬಂದಿದೆ. ಮೂರು ಪಕ್ಷಗಳು ಚುನಾವಣಾ ಬಾಂಡ್‌ಗಳ ಮೂಲಕ ₹2,524.13 ಕೋಟಿ ಸಂಗ್ರಹಿಸಿವೆ. ಇದು ಒಟ್ಟು ಆದಾಯದ 43.36% ರಷ್ಟಿದೆ. 2023-24ರಲ್ಲಿ ರಾಜಕೀಯ ಪಕ್ಷಗಳು ₹4,507.56 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಪಡೆದುಕೊಂಡಿವೆ. ಕಾಂಗ್ರೆಸ್  ನಿಧಿಯ ಗಮನಾರ್ಹ ಭಾಗವನ್ನು – ₹619.67 ಕೋಟಿ – ಚುನಾವಣಾ ಸಂಬಂಧಿತ ಖರ್ಚುಗಳಿಗೆ ಮತ್ತು ₹340.70  ಕೋಟಿ ಆಡಳಿತ ಮತ್ತು ಸಾರ್ವಜನಿಕ ಖರ್ಚುಗಳಿಗೆ ಖರ್ಚು ಮಾಡಿದೆ. ಆರು ರಾಷ್ಟ್ರೀಯ ಪಕ್ಷಗಳಲ್ಲಿ, ದೇಣಿಗೆ ಮತ್ತು ಕೊಡುಗೆಗಳಿಂದ ಒಟ್ಟು ₹2,669.87 ಕೋಟಿ ಆದಾಯ ಘೋಷಣೆಯಾಗಿದೆ.

Related Posts

Leave a Reply

Your email address will not be published. Required fields are marked *