ಕನಕಪುರ ತಾಲೂಕಿನ ಗೆಂಡೆಕೆರೆ ಗ್ರಾಮದಲ್ಲಿ ಜಮೀನು ವಿಚಾರಕ್ಕೆ ನಡೆದ ಎರಡು ಕುಟುಂಬಗಳ ಗಲಾಟೆಯು ಕೊಲೆಯಲ್ಲಿ ಅಂತ್ಯಗೊಂಡಿದೆ. ಸುನಿಲ್ (27) ಕೊಲೆಯಾದ ಯುವಕ.
ತುಂಗಣಿ ಗ್ರಾಮದ ನಿವಾಸಿ ಸುನಿಲ್‌ನ ತಂದೆಯಿಂದ ಪಾರ್ಥಸಾರಥಿ ಎಂಬಾತ ಎರಡು ಎಕರೆ ಜಮೀನನ್ನು ಕುಟುಂಬಸ್ಥರಿಗೆ ಮಾಹಿತಿ ನೀಡದೆ ಬರೆಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ವಿಚಾರಕ್ಕೆ ಪಾರ್ಥಸಾರಥಿ ಮನೆ ಬಳಿ ಹೋಗಿ ಸುನಿಲ್ ಹಾಗೂ ಸಹೋದರ ಕಿರಣ್ ಗಲಾಟೆ ಮಾಡಿದ್ದರು. ಪಾರ್ಥಸಾರಥಿ ಮತ್ತು ಅವನ ಸ್ನೇಹಿತರು ಸುನಿಲ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಂದಿದ್ದಾರೆಂದು ತಿಳಿದು ಬಂದಿದೆ.
ಗಲಾಟೆ ವಿಕೋಪಕ್ಕೆ ತಿರುಗಿ ಸುನಿಲ್ ಮೇಲೆ ಪಾರ್ಥಸಾರಥಿ ಹಾಗೂ ಸ್ನೇಹಿತರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಗಂಭೀರ ಗಾಯಗೊಂಡಿದ್ದ ಸುನಿಲ್ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಸುನಿಲ್ ಸಹೋದರ ಕಿರಣ್ ಮೇಲೆ ಹಲ್ಲೆ ನಡೆಸಿದ್ದರಿಂದ ಸಹೋದರನೂ ಗಾಯಗೊಂಡು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸ್ಥಳಕ್ಕೆ ಕನಕಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಆರೋಪಿಗಳಾದ ಪಾರ್ಥಸಾರಥಿ ಮತ್ತು ಸ್ನೇಹಿತರು ಪರಾರಿಯಾಗಿದ್ದು, ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಆನೇಕಲ್‌ನಲ್ಲಿ ಸಮೀಕ್ಷೆ ವೇಳೆ ಶಿಕ್ಷಕಿಗೆ ಹೃದಯಾಘಾತ
ಆನೇಕಲ್ ತಾಲೂಕಿನ ಬೊಮ್ಮಸಂದ್ರದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವೇಳೆ ಶಿಕ್ಷಕಿಗೆ ಹೃದಯಾಘಾತವಾಗಿದ್ದು, ಸ್ಥಳೀಯರು ಶಿಕ್ಷಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೊಮ್ಮಸಂದ್ರದ ಸರ್ಕಾರಿ ಶಾಲೆಯಲ್ಲಿ ದೈಹಿಕ ಶಿಕ್ಷಕಿಯಾಗಿರುವ ಯಶೋಧ(42) ಹೃದಯಾಘಾತಕ್ಕೊಳಗಾದ ಶಿಕ್ಷಕಿ.
ಸಮೀಕ್ಷೆ ನಡೆಸುತ್ತಿರುವಾಗಲೇ ಆಕೆ ಕುಸಿದು ಬಿದ್ದಿದ್ದಾರೆ. ಕೂಡಲೇ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ದಾಖಲಿಸಿದ್ದು, ಆಪರೇಷನ್ ಮಾಡಿ ವೈದ್ಯರು ಸ್ಟಂಟ್ ಅಳವಡಿಸಿದ್ದಾರೆ.