ಬೆಂಗಳೂರಿನ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಜುಡಿಷಿಯಲ್ ಲೇಔಟ್‌ನ ಪಿಜಿಗೆ ನುಗ್ಗಿದ ದುಷ್ಕರ್ಮಿಯೊಬ್ಬ ಅಲ್ಲಿ ವಾಸವಿರುವ ಬೆಸ್ಕಾಂ ಅಸಿಸ್ಟೆಂಟ್ ಎಂಜಿನಿಯರ್ ಕುತ್ತಿಗೆಗೆ ಚಾಕು ಇಟ್ಟು ಚಿನ್ನಾಭರಣ ದೋಚಿಕೊಂಡು ಹೋಗಿದ್ದಾನೆ.
ಮೂರು ದಿನಗಳ ಹಿಂದೆ ಮಧ್ಯಾಹ್ನ ಲೇಡಿಸ್ ಪಿಜಿಯಲ್ಲಿ ಈ ಘಟನೆ ನಡೆದಿದೆ. ಹದಿನೈದು ದಿನಗಳ ಹಿಂದೆಯಷ್ಟೇ ಪಿಜಿಗೆ ಸೇರಿದ್ದ ಮಹಿಳೆ ಮಧ್ಯಾಹ್ನ ಊಟಕ್ಕೆಂದು ರೂಮಿಗೆ ಬಂದಿದ್ದಾರೆ. ಪಿಜಿಯಲ್ಲಿನ ಮೂರನೇ ಮಹಡಿಯಲ್ಲಿರುವ ತನ್ನ ರೂಂನಲ್ಲಿದ್ದರು. ಆಗ ಬಾಗಿಲು ಬಡಿದ ಸದ್ದು ಕೇಳಿ ಬಾಗಿಲು ತೆರೆದಿದ್ದಾರೆ.
ಕೂಡಲೇ ಆರೋಪಿ ಚಾಕು ಹಿಡಿದು ಬೆದರಿಸಿ ಆಕೆ ಮೈಮೇಲಿದ್ದ ಚಿನ್ನಾಭರಣಗಳನ್ನ ಬಿಚ್ಚಿಸಿಕೊಂಡು ಬೆಡ್ ಮೇಲಿದ್ದ ಎರಡು ಮೊಬೈಲ್‌ಗಳನ್ನು ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ. ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.