ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ ಲೋಪಗಳ ಹಿನ್ನೆಲೆ ಆರ್ಟಿಒ ಅಧಿಕಾರಿಗಳು ದೇವನಹಳ್ಳಿಯ ಏರ್ಪೋರ್ಟ್ ಟೋಲ್ ಬಳಿ ಕಾರ್ಯಾಚರಣೆ ನಡೆಸಿ ಸುರಕ್ಷತಾ ಕ್ರಮಗಳನ್ನು ಪಾಲಿಸದ ಹಾಗೂ ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ತುಂಬಿಕೊಂಡು ಬಂದಿದ್ದ 40ಕ್ಕೂ ಹೆಚ್ಚು ಬಸ್‌ಗಳನ್ನು ಸೀಜ್ ಮಾಡಿದ್ದಾರೆ.
ನೇಪಾಳದಿಂದ ಜನರನ್ನು ಕರೆದುಕೊಂಡು ಬೆಂಗಳೂರಿಗೆ ಬರುತ್ತಿದ್ದ ಉತ್ತರ ಭಾರತದ ಸ್ಲೀಪರ್ ಕೋಚ್ ಬಸ್ ಒಂದನ್ನು ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. 40-50 ಜನರ ಸಾಮರ್ಥ್ಯವಿರುವ ಈ ಬಸ್‌ನಲ್ಲಿ 100ಕ್ಕೂ ಅಧಿಕ ಪ್ರಯಾಣಿಕರನ್ನು ತುಂಬಿಕೊಂಡು ಬಂದಿರುವುದು ಪತ್ತೆಯಾಗಿದೆ. ಮಹಿಳೆಯರು ಮತ್ತು ಮಕ್ಕಳೂ ಸೇರಿದಂತೆ ಲೆಕ್ಕವಿಲ್ಲದೆ ಪ್ರಯಾಣಿಕರನ್ನು ತುಂಬಿಕೊಂಡು ಬರಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಸ್ ಸೀಜ್ ಮಾಡಿದ ಅಧಿಕಾರಿಗಳು, ಇಂತಹ ಐದು ಬಸ್‌ಗಳನ್ನು ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕರ್ನೂಲ್ ಬಸ್ ದುರಂತದ ಬೆನ್ನಲ್ಲೇ ಕರ್ನಾಟಕ ಸಾರಿಗೆ ಇಲಾಖೆ ಬಸ್‌ಗಳಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲಿಸುವಂತೆ ಸಾರಿಗೆ ನಿಗಮಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು.
ಕಳವಾಗಿದ್ದ ಮೊಬೈಲ್‌ಗಳು ವಶ
ಐಫೋನ್ 17, ಪ್ರೋಮ್ಯಾಕ್ಸ್, ಸ್ಯಾಮ್ಸಂಗ್ ಎಸ್ 24, ಓಪ್ಪೊ, ರೆಡ್ ಮಿ, ರಿಯಲ್ ಮೀ, ಒನ್‌ಪ್ಲಸ್ ಸರಿದಂತೆ ಕಳವಾಗಿದ್ದ 3 ಕೋಟಿ ರೂ. ಮೌಲ್ಯದ ವಿವಿಧ ಬ್ರ್ಯಾಂಡ್ಗಳ 1949 ಮೊಬೈಲ್‌ಗಳನ್ನು ಬೆಂಗಳೂರು ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರಿನಾದ್ಯಂತ ಒಟ್ಟು 3.36 ಕೋಟಿ ರೂ. ಮೌಲ್ಯದ 1949 ಕಳುವಾದ ಹಾಗೂ ಮಾಲೀಕರು ಕಳೆದುಕೊಂಡಿರುವ ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆದಿದ್ದಾರೆ. ನಗರ ಪೊಲೀಸ್ ಆಯುಕ್ತ ಕಚೇರಿಯಲ್ಲಿ ಮೊಬೈಲ್ ಕಳೆದುಕೊಂಡ ಮಾಲೀಕರಿಗೆ ಹಿಂದಿರುಗಿಸಿದ್ದಾರೆ.
ಮದನ್, ಶಾಂತಕುಮಾರ್ ಹಾಗೂ ಮೊಹಮ್ಮದ್ ಯಾಸಿನ್ ಬಿಎಂಟಿಸಿ ಬಸ್ ಹತ್ತಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಮೊಬೈಲ್ ಕಳ್ಳತನ ಮಾಡುತ್ತಿದ್ದರು. ತಕ್ಷಣ ತಮ್ಮ ಜೊತೆಗೆ ಬಂದವರಿಗೆ ಮೊಬೈಲ್ ಪಾಸ್ ಮಾಡುತ್ತಿದ್ದರು. ಕೆಲವೊಮ್ಮೆ ಅಲ್ಯೂಮಿನಿಯಂ ಫಾಯಿಲ್ನಲ್ಲಿ ಮೊಬೈಲ್ ಸುತ್ತಿ ಜೇಬಲ್ಲಿ ಇಟ್ಟುಕೊಳ್ಳುತ್ತಿದ್ದರು. ಹೀಗೆ ಇಟ್ಟಾಗ ಮೊಬೈಲ್ ನೆಟ್ ವರ್ಕ್ ಸಿಗದೆ ಜಾಮ್ ಆಗುತ್ತದೆ. ಆಗ ಮೊಬೈಲ್ ಮಾಲೀಕ ಕರೆ ಮಾಡಿದರೂ ಸ್ವಿಚ್ ಆಫ್ ಬರುತ್ತದೆ.
ಕಮಾಂಡ್ ಸೆಂಟರ್ ಅಧಿಕಾರಿ ಮತ್ತು ಸಿಬ್ಬಂದಿ ಕಳವಾದ ಮತ್ತು ಕಳೆದು ಹೋದ ಮೊಬೈ್ಗಳನ್ನು ಪತ್ತೆ ಮಾಡಿದ್ದಾರೆ. ಸಿಇಐಆರ್ ಪೋರ್ಟಲ್ ಮುಖಾಂತರ 894 ಮೊಬೈಲ್‌ಗಳನ್ನು ಪತ್ತೆ ಮಾಡಿದ್ದರೆ. ಕಳೆದು ಹೋಗಿರುವ ಮೊಬೈಲ್ನ ಐಎಂಇಐ ನಂಬರ್ ಸಿಇಐಆರ್ ಪೋರ್ಟಲ್ಗೆ ಅಪ್ಲೋಡ್ ಮಾಡಲಾಗುತ್ತದೆ. ಯಾವುದೇ ಸಿಮ್ ಬಳಸಿ ಮೊಬೈಲ್ ಆನ್ ಮಾಡಿದಾಗ ದೂರುದಾರ ಹಾಗೂ ಪೊಲೀಸರಿಗೆ ಮೆಸೇಜ್ ಬರುತ್ತದೆ. ಆ್ಯಕ್ಟಿವೇಟ್ ಆಗಿರುವ ಸಿಮ್ ನಂಬರ್ ಕಾಣಿಸುತ್ತದೆ. ಮೊಬೈಲ್ ಬಳಕೆಯ ಲೊಕೇಶನ್ ಗೊತ್ತಾಗುತ್ತದೆ. ಆ ನಂಬರ್ ಟ್ರೇಸ್ ಮಾಡಿ ಪೊಲೀಸರು ಮೊಬೈಲ್ ವಶಕ್ಕೆ ಪಡೆಯುತ್ತಾರೆ.


