ಧಾರವಾಡ :* ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ವಿಕಲಚೇತನರಿಗೆ ನೀಡಲಾಗುವ ವಿವಿಧ ಸಾಧನ ಸಲಕರಣೆಗಳನ್ನು ಆರ್.ಎನ್.ಶೆಟ್ಟಿ ಜಿಲ್ಲಾ ಕ್ರೀಡಾಂಗಣದ ಮುಂಭಾಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್.ಲಾಡ್ ಅವರು 77ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿ ವಿತರಿಸಿದರು.
ಧಾರವಾಡ ಕಲಕೇರಿಯ ಅಕ್ಕಮಹಾದೇವಿ ಅಂಗಡಿ ಅವರಿಗೆ ಬ್ಯಾಟರಿ ಚಾಲಿತ ವ್ಹಿಲ್ಚೇರ್, ಕರಡಿಗುಡ್ಡ ಗ್ರಾಮದವರಾದ ಉಜೇಫ ಶೌಕತಲಿ ನಾಯ್ಕರ ಅವರಿಗೆ ಎಮ್.ಆರ್. ಕಿಟ್, ಮಲ್ಲವ್ವ ಚನಮಲ್ಲಪ್ಪ ಕುರಗುಂದ ಅವರಿಗೆ ಕ್ರಚ್ಚಸ್, ಮಡಿಕಿಕೇರಿಯ ಅಭಿಷೇಕ ಪುಂಡಲೀಕ ಭೋವಿ ಅವರಿಗೆ ಶ್ರವಣಸಾಧನ ಹಾಗೂ ಕ್ಯಾರಕೊಪ್ಪದ ಮಣಿಕಂಠ ಹೊಂಗಲ ಅವರಿಗೆ ವ್ಹಿಲ್ಚೇರ್ನ್ನು ಸಚಿವ ಸಂತೋಷ ಲಾಡ್ ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ, ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಸವಿತಾ ಕಾಳೆ ಅವರು ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.


