Menu

ಕಾರ್ಮಿಕ‌ ಇಲಾಖೆ ಕಾರ್ಮಿಕ ಸ್ನೇಹಿ‌ ಇಲಾಖೆ: ಸಚಿವ ಸಂತೋಷ್ ಲಾಡ್

santosh laad

ಗದಗ:ಬಾಲಕಾರ್ಮಿಕ ಪದ್ಧತಿಯನ್ನು‌ ಬುಡದಿಂದಲೇ ಕಿತ್ತೊಗೆಯಬೇಕು.ಕಾರ್ಮಿಕರ ಸ್ನೇಹಿ ಇಲಾಖೆ ಆಗಿದ್ದು, ಯಾವುದೇ ಕಾರಣಕ್ಕೂ ಶಾಲಾಪುಸ್ತಕ ಕೈಹಿಡಿಯುವುದನ್ನು ಬಿಟ್ಟು ಮಕ್ಕಳ‌ಕೈ ದುಡಿಮೆಗೆ ಇಳಿಯದಂತೆ ನೋಡಿಕೊಳ್ಳುವುದು ಕಾರ್ಮಿಕ ಇಲಾಖೆಯ ಕರ್ತವ್ಯ ಎಂದು ಕಾರ್ಮಿಕ‌‌ ಸಚಿವ ಸಂತೋಷ್‌ಲಾಡ್ ಸೂಚಿಸಿದರು.

ಗದಗ ಜಿಲ್ಲಾ‌ಸಭಾಂಗಣದಲ್ಲಿ ಇಲಾಖೆಯ ಪ್ರಗತಿಪರಿಶೀಲನಾ‌ ಸಭೆ ನಡೆಸಿದ‌ ಅವರು, ಅಧಿಕಾರಿಗಳು ಬಾಲಕಾರ್ಮಿಕರ ಮೇಲೆ ತಮ್ಮತಮ್ಮ ವ್ಯಾಪ್ತಿಯಲ್ಲಿ ನಿಗಾವಹಿಸುತ್ತಿರಬೇಕು.ಇನ್ನು ಕಾರ್ಮಿಕರ ಕಲ್ಯಾಣಾಭಿವೃದ್ಧಿ ಕಡೆಗೂ ಗಮನ ನೀಡುತ್ತಿರಬೇಕು.ಕಾರ್ಮಿಕರಿಗೆ ಸರಿಯಾಗಿ ಅವರು ಕೆಲಸ ಮಾಡುವ ಸಂಸ್ಥೆ,ಕಚೇರಿಗಳು ಸರಿಯಾದ ಸಮಯಕ್ಕೆ ಪಿಎಫ್ ಹಣ ನೀಡುತ್ತಿವೆಯೋ ಇಲ್ಲವೋ ಎಂಬುದನ್ನು ಗಮನಿಸಬೇಕು.ಪಿಎಫ್ ನೀಡದ ಕಂಪೆನಿ ಸಂಸ್ಥೆಗಳ ಮೇಲೆ ಕ್ರಮಜರುಗಿಸುವಂತೆ ಸಂತೋಷ್ ಖಡಕ್ ಸೂಚನೆ ನೀಡಿದರು.

ಬಾಲಕಾರ್ಮಿಕರನ್ನಿಟ್ಟುಕೊಂಡು ಲಾಭ ಮಾಡಿಕೊಳ್ಳುತ್ತಿರುವವರ ಮೇಲೆ ಗಮನವಿರಬೇಕು.ಇಲಾಖಾಧಿಕಾರಿಗಳ ಗಮನಕ್ಕೆ ಕಾರ್ಮಿಕರ ಸಮಸ್ಯೆಗಳು ಕಂಡುಬಂದಲ್ಲಿ ಆದಷ್ಟುಬೇಗ ಸ್ಥಳದಲ್ಲಿಯೇ ಪರಿಹರಿಸುವಂತೆ ನೋಡಿಕೊಳ್ಳಬೇಕು.ಕಾರ್ಮಿಕರ ಹಿತಾರಕ್ಷಣೆಗೆ ಕಾರ್ಮಿಕರ ಇಲಾಖೆ ಇದೆ ಎಂಬುದನ್ನು ಮನದಟ್ಟು ಮಾಡಿಕೊಡಬೇಕು.ಗಂಭೀರ ತುರ್ತು ಸಮಸ್ಯೆಗಳಿದ್ದರೆ ತಮ್ಮ ಗಮನಕ್ಕೆ ಕಡ್ಡಾಯವಾಗಿ ತರಲೇಬೇಕು.ಕಾರ್ಮಿಕರ ಸ್ನೇಹಿಯಾಗಿ ಇಲಾಖೆ ಇರಬೇಕೆಂದರು.

ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸಂತೋಷ್ ಲಾಡ್ ಗದಗ ಸರ್ಕ್ಯೂಟ್ ಹೌಸ್ ನಲ್ಲಿ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಜಿಲ್ಲಾಧಿಕಾರಿ ಸಿ.ಎಂ.ಶ್ರೀಧರ್, ಪೋಲೀಸ್ ವರಿಷ್ಠಾಧಿಕಾರಿ ನೇಮಗೌಡ, ವಿಧಾನ ಪರಿಷತ್ ಸದಸ್ಯ ಸಂಕನೂರು , ಶಿರಹಟ್ಟಿ ಕ್ಷೇತ್ರದ ಶಾಸಕ ಜಿ.ಎಸ್.ಪಾಟೀಲ್ ಸೇರಿದಂತೆ ಸ್ಥಳೀಯ ಮುಖಂಡರೊಂದಿಗೆ ಕಾರ್ಮಿಕರ ಕುರಿತು ಚರ್ಚೆ ಮಾಡಿದರು.

Related Posts

Leave a Reply

Your email address will not be published. Required fields are marked *