ಮಿಲಿಟರಿ ಶಕ್ತಿ, ಅದರ ಆಯುಧಗಳು, ಗಡಿಯಲ್ಲಿನ ಭದ್ರತೆಯ ವ್ಯವಸ್ಥೆ ಇವುಗಳಿಂದ ಮಾತ್ರ ದೇಶದ ಭದ್ರತೆ ಸಾಧ್ಯವಾಗುವುದಿಲ್ಲ, ಇವುಗಳ ಜೊತೆ ನಾಯಕತ್ವ, ಯೋಜನೆ ರೂಪಿಸುವ ವ್ಯವಸ್ಥೆ, ಯೋಜನೆ ಜಾರಿಗೊಳಿಸುವ ವ್ಯವಸ್ಥೆ, ಅಧಿಕಾರಿಗಳಲ್ಲಿ ಸಮರ್ಪಣಾ ಮನೋಭಾವ ಜೊತೆಗೆ ಇಲ್ಲಿಗೆ ಬರುವ ಜನರು, ಕಷ್ಟ-ನಷ್ಟಗಳು, ವ್ಯಯ ಹಾಗೂ ಪ್ರಯಾಸಗಳನ್ನು ಎದುರಿಸಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದೂರದ ಪ್ರಾಂತ್ಯಗಳಿಂದ ಇಲ್ಲಿಗೆ ಸಂತೋಷದಿಂದ ಬಂದು ಹೋಗು ವುದು ಮುಂತಾದವುಗಳನ್ನು ಒಳಗೊಂಡಿರುತ್ತವೆ. ಆಫ್ರಿಕಾ ಮತ್ತು ಯುರೋಪ್ ದೇಶಗಳ ಜನಸಂಖ್ಯೆ ಸೇರಿಸಿದರೆ ಎಷ್ಟು ಜನಸಂಖ್ಯೆ ಇದೆಯೋ ಅಷ್ಟು ಜನ ಪ್ರಯಾಗ್ ರಾಜ್‌ನಲ್ಲಿ ಸೇರಿದ್ದರು.
ಕಳೆದ ಒಂದು ತಿಂಗಳ ಹಿಂದೆ ಪ್ರಯಾಗ್‌ರಾಜ್‌ನ ಕುಂಭಮೇಳವು ಕೊನೆಗೊಂಡಿತು. ಇದು ಅತಿದೊಡ್ಡ ಮಾನವ ಸಮಾಗಮವಾಗಿದೆ. ಇದರ ಬಗ್ಗೆ ಜಗತ್ತಿನ ಸುಪ್ರಸಿದ್ಧ ರೀಸರ್ಚ್ ಸಂಸ್ಥೆಗಳು, ಸೋಶಿಯಾಲಜಿ, ಕ್ಲೌಡ್ ಮ್ಯಾನೇಜ್ಮೆಂಟ್ ಕುರಿತು ಅಧ್ಯಯನ ನಡೆಸುವ ಸಂಸ್ಥೆಗಳೆಲ್ಲವೂ ಸಹ ಸ್ಟಡಿ ಮಾಡಲು ಆರಂಭಿಸಿವೆ. ಹಾರ್ವರ್ಡ್, ಸ್ಟ್ಯಾನ್ ಫೋರ್ಡ್, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ , ಕಿಯೊಟೋ ವಿಶ್ವವಿದ್ಯಾಲಯ, ಐಐಎಂ ಅಹಮದಾಬಾದ್, ಏಮ್ಸ್ ಈ ತರಹದ ಅನೇಕ ಸಂಸ್ಥೆಗಳು ಕುಂಭಮೇಳದಲ್ಲಿನ ಹಲವಾರು ವಿಷಯಗಳ ಮೇಲೆ ಅಧ್ಯಯನ ನಡೆಸುತ್ತಿವೆ. ನಮಗೆಲ್ಲರಿಗೂ ತಿಳಿಯದ ಮತ್ತೊಂದು ವಿಚಾರವೆಂದರೆ ಜಗತ್ತಿನ ಶಕ್ತಿಶಾಲಿ ಮಿಲಿಟರಿ ಸಂಸ್ಥೆಗಳು ಕೂಡ ಕುಂಭಮೇಳವನ್ನು ಅಧ್ಯಯನ ನಡೆಸುತ್ತಿವೆ.
ಈ ಮಿಲಿಟರಿ ಸಂಸ್ಥೆಗಳು ಕುಂಭಮೇಳವನ್ನು ಅಧ್ಯಯನ ಮಾಡಲು ಒಂದು ಕಾರಣವಿದೆ. ಅದೇನೆಂದರೆ ಈ ದೇಶದಲ್ಲಿ ಒಂದು ಪಾಯಿಂಟ್ ಆದ ಪ್ರಯಾಗ್‌ರಾಜ್ ಗೆ ದೇಶದ ನಾನಾ ಮೂಲೆಗಳಿಂದ ಒಂದೂವರೆ ತಿಂಗಳ ಅವಧಿಯಲ್ಲಿ ಕೋಟ್ಯಾಂತರ ಜನ ಬರುವುದು, ಅವರು ವ್ಯವಸ್ಥಿತವಾಗಿ ಹೋಗುವುದು ಈ ತರಹದ ನ್ಯಾಷನಲ್ ಮೊಬಿಲೈಸೇಶನ್ (ರಾಷ್ಟ್ರೀಯ ಸಜ್ಜುಗೊಳಿಸುವಿಕೆ ) ಅಂದರೆ ದೊಡ್ಡಮಟ್ಟದ ಪ್ರಮಾದಗಳು ನಡೆಯದೆ, ದೊಡ್ಡಮಟ್ಟದ ರಸ್ತೆ ಅಪಘಾತಗಳು ನಡೆಯದೆ, ದೊಡ್ಡ ಪ್ರಮಾಣದ ಅಡ್ಡಿ ಆತಂಕಗಳು ಇಲ್ಲದೆ ಜನರು ಸ್ವಇಚ್ಛೆಯಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು, ಸರ್ಕಾರ ಅದಕ್ಕೆ ವ್ಯವಸ್ಥೆ ಮಾಡುವುದು,, ಖಾಸಗಿ ವಲಯವು ಸಹ ಇದಕ್ಕೆ ಸಹಕರಿಸುವುದು ಈ ಎಲ್ಲಾ ಪ್ರಯತ್ನಗಳೂ ಭಾರತದ ಸಮಗ್ರ ರಾಷ್ಟ್ರೀಯತೆಗೆ ಪ್ರತೀಕವಾಗಿದೆ.
ಇಂಗ್ಲಿಷ್‌ನಲ್ಲಿ ಇದನ್ನು ಕಾಂಪ್ರಹೆನ್ಸಿವ್ ನ್ಯಾಷನಲ್ ಪವರ್ ಎನ್ನುವರು. ಮಿಲಿಟರಿ ಶಕ್ತಿ, ಅದರ ಆಯುಧಗಳು, ಗಡಿಯಲ್ಲಿನ ಭದ್ರತೆಯ ವ್ಯವಸ್ಥೆ ಇವುಗಳಿಂದ ಮಾತ್ರ ದೇಶದ ಭದ್ರತೆ ಸಾಧ್ಯವಾಗುವುದಿಲ್ಲ, ಇವುಗಳ ಜೊತೆ ನಾಯಕತ್ವ, ಯೋಜನೆ ರೂಪಿಸುವ ವ್ಯವಸ್ಥೆ, ಯೋಜನೆ ಜಾರಿಗೊಳಿಸುವ ವ್ಯವಸ್ಥೆ, ಅಧಿಕಾರಿ ಗಳಲ್ಲಿ ಸಮರ್ಪಣಾ ಮನೋಭಾವ ಜೊತೆಗೆ ಇಲ್ಲಿಗೆ ಬರುವ ಜನರು ಕಷ್ಟ-ನಷ್ಟಗಳು, ವ್ಯಯ ಹಾಗೂ ಪ್ರಯಾಸಗಳನ್ನು ಎದುರಿಸಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದೂರದ ಪ್ರಾಂತ್ಯಗಳಿಂದ ಇಲ್ಲಿಗೆ ಸಂತೋಷದಿಂದ ಬಂದು ಹೋಗುವುದು ಮುಂತಾದವು ಒಳಗೊಂಡಿರುತ್ತವೆ. ಆಫ್ರಿಕಾ ಮತ್ತು ಯುರೋಪ್ ದೇಶಗಳ ಜನಸಂಖ್ಯೆ ಸೇರಿಸಿದರೆ ಎಷ್ಟು ಜನಸಂಖ್ಯೆ ಇದೆಯೋ ಅಷ್ಟು ಜನಸಂಖ್ಯೆ ಪ್ರಯಾಗ್ ಎಂಬ ನಗರದಲ್ಲಿ ಸೇರಿದ್ದರು. ಶೇಕಡ ೯೯ರಷ್ಟು ಜನರು ಸಂತೃಪ್ತಿ ಯಿಂದ ಪ್ರಯಾಗ್ ರಾಜ್ ನಿಂದ ತಮ್ಮ ಸ್ಥಳಗಳಿಗೆ ಹಿಂದಿರುಗಿದರು. ದೇಶದ ಶ್ರೀಸಾಮಾನ್ಯನಿಂದ ಹಿಡಿದು ವಿವಿಐಪಿಗಳವರೆಗೆ ಎಲ್ಲರೂ ಒಂದೆಡೆ ಸೇರಿ ಮೊಬಿಲೈಸ್ ಆಗಿದ್ದರು ಎಂಬುದು ಭಾರತದ ಅಂತಃಶಕ್ತಿಯನ್ನು ಸೂಚಿಸುತ್ತದೆ. ಅಷ್ಟು ದೊಡ್ಡ ಮೊತ್ತದ ಜನಸಂದಣಿಯನ್ನು ನಿಯಂತ್ರಿಸಿದ್ದು ಭಾರತ ಸರ್ಕಾರ ಮತ್ತು ಉತ್ತರ ಪ್ರದೇಶ ಸರ್ಕಾರಗಳ ಸಾಮರ್ಥ್ಯವನ್ನು ತೋರಿಸುತ್ತದೆ. ಅವಶ್ಯಕತೆ ಬಿದ್ದರೆ ಕೊಂಚ ಕಷ್ಟಗಳನ್ನು ಸಹ ಎದುರಿಸಲು ಭಾರತೀಯ ಜನತೆ ಸಿದ್ಧವಾಗಿ ರುವುದು ಈ ದೇಶದ ಜನರ ಶಕ್ತಿ-ಸಾಮರ್ಥ್ಯದ ಪ್ರತೀಕ.
ದೇಶದಾದ್ಯಂತ ಈ ವಿಚಾರಕ್ಕೆ ಸಂಬಂಧಿಸಿದ ನಾಯಕತ್ವ ಈ ಎಲ್ಲಾ ಪ್ರಯತ್ನಗಳನ್ನು ಸಾಫಲ್ಯಪೂರಿತವಾಗಿ ಜನರ ವಿಶ್ವಾಸವನ್ನು ಹೊಂದಿ ನಿರ್ವಹಿಸುವುದು ಅತ್ಯಂತ ಸವಾಲಿನ ಕೆಲಸವಾಗಿದೆ. ಈ ಎಲ್ಲಾ ಅಂಶಗಳನ್ನು ಪ್ರಾಚೀನ ಕಾಲದಲ್ಲಿ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಪ್ರಭಾವ ಶಕ್ತಿ, ಮಂತ್ರಶಕ್ತಿ, ಉತ್ಸಾಹ ಶಕ್ತಿ ಹೀಗೆ ವರ್ಣಿಸಲಾಗಿದೆ. ಈ ಎಲ್ಲಾ ಸಾಮರ್ಥ್ಯಗಳು ಕೇವಲ ೪೫ ದಿನಗಳ ಅವಧಿಯಲ್ಲಿ ೬೬ ಕೋಟಿ ಜನರನ್ನು ಒಂದೆಡೆ ಮೊಬಿಲೈಸ್ ಮಾಡಿ ನಂತರ ಡಿ-ಮೊಬಿಲೈಸ್ ಮಾಡಿವೆ. ಇದಕ್ಕೆ ಬೇಕಾದ ಇನ್ಫ್ರಾಸ್ಟ್ರಕ್ಚರ್ ನಿರ್ಮಿಸಿ, ಅದನ್ನು ನಿರ್ವಹಿಸುವುದು ಪ್ರಪಂಚದಾದ್ಯಂತ ಇರುವ ಮಿಲಿಟರಿ ತಜ್ಞರು ಹಾಗೂ ಅಂಕಿ-ಅಂಶ ನಿಪುಣರು ಇದು ಭಾರತ ದೇಶದ ಕಾಂಪ್ರಹೆನ್ಸಿವ್ ನ್ಯಾಷನಲ್ ಪವರ್‌ಗೆ ಪ್ರತೀಕವಾಗಿ ನೋಡುತ್ತಿದ್ದಾರೆ. ಒಬ್ಬ ಮಿಲಿಟರಿ ತಜ್ಞ ಕುಂಭಮೇಳದ ಮೊಬಿಲೈಸೇಶನ್ ಕುರಿತು ಬರೆಯುತ್ತಾ ಚೀನಾದಂತಹ ದೇಶದಲ್ಲಾದರೆ ಸಣ್ಣ ಪ್ರಮಾಣದ ಕಾಲ್ತುಳಿತ ಉಂಟಾಗಿದ್ದರೂ ಸಹ ಸರ್ಕಾರ ರಸ್ತೆಗಳನ್ನು ಬಂದ್ ಮಾಡಿ, ಬರಲು-ಹೋಗಲು ಇರುವಂತಹ ಮಾರ್ಗಗಳನ್ನೆಲ್ಲಾ ನಿಲ್ಲಿಸಿ ಬಿಡುತ್ತಿದ್ದರು ಎಂದಿದ್ದಾರೆ. ಕೋವಿಡ್ ಸಮಯದಲ್ಲಿ ಚೀನಾದಲ್ಲಿ ರಸ್ತೆಗಳನ್ನು ಬಂದ್ ಮಾಡಿದ್ದರೆ ಜನರು ಪೊಲೀಸ ರೊಂದಿಗೆ ಘರ್ಷಣೆಗಿಳಿದು ರಸ್ತೆಯಲ್ಲಿ ಓಡಾಡುತ್ತಿದ್ದ ವೀಡಿಯೋಗಳು ವೈರಲ್ ಆಗಿದ್ದವು. ಆದರೆ ಭಾರತದಲ್ಲಿ ರಾತ್ರಿ ಸಮಯದಲ್ಲಿ ೫ ನಿಮಿಷ ವಿದ್ಯುತ್ ಬಲ್ಬ್ ಗಳನ್ನು ಬಂದ್ ಮಾಡಿ ದೀಪಗಳನ್ನು ಬೆಳಗಿಸಿ ಎಂದು ದೇಶದ ಪ್ರಧಾನಿಯ ಕರೆಗೆ ಇಡೀ ದೇಶವೇ ಸ್ಪಂದಿಸಿತು. ಇದು ಕಾಂಪ್ರಹೆನ್ಸಿವ್ ನ್ಯಾಷನಲ್ ಪವರ್‌ನ ಡೆಮೋನ್‌ಸ್ಟ್ರೆಷನ್‌ಗೆ ಪ್ರತೀಕವಾಗಿದೆ. ದೀಪಗಳನ್ನು ಬೆಳಗಿಸಿದ ಮಾತ್ರಕ್ಕೆ ಕರೋನ ಹೋಗುವುದಿಲ್ಲ, ಆದರೆ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ದೇಶ ದಲ್ಲಿ ಮೂಡಿಸಲು ಮೋದಿ ಸರ್ಕಾರ ಈ ರೀತಿಯ ಕೆಲಸ ಮಾಡಿತು. ಈ ಬಾರಿಯ ಕುಂಭಮೇಳದ ವಿಷಯದಲ್ಲೂ ಭಾರತದ ಎಲ್ಲಾ ಭಾಗಗಳಿಂದಲೂ ಜನರು ತಂಡೋಪ ತಂಡವಾಗಿ ಮೊಬಿಲೈಸ್ ಆಗುವುದು, ಕಷ್ಟಗಳನ್ನು ಎದುರಿಸುವುದು ಈ ದೇಶದ ಕಾಂಪ್ರಹೆನ್ಸಿವ್ ನ್ಯಾಷನಲ್ ಪವರ್ ಎಂದು ರಕ್ಷಣಾ ತಜ್ಞರು ಹೇಳುತ್ತಿದ್ದಾರೆ. ಈ ಎಲ್ಲಾ ಪ್ರಯತ್ನಗಳು ಏನೇನು ಇವೆಯೋ ಅವೆಲ್ಲ ಭಾರತದ ಅಸ್ಮಿತೆಗೆ ಪ್ರತ್ಯೇಕವಾಗಿವೆ ಎಂದು ವಿದೇಶಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಉತ್ತರ ಅಮೇರಿಕಾ ಮತ್ತು ದಕ್ಷಿಣ ಅಮೇರಿಕಾ ಖಂಡಗಳ ಜನಸಂಖ್ಯೆಗಿಂತಲೂ ಹೆಚ್ಚಿನ ಜನರು ಕುಂಭಮೇಳಕ್ಕೆ ಬಂದು ಹೋಗಿದ್ದಾರೆ. ಈ ಎಲ್ಲಾ ಪ್ರಕ್ರಿಯೆಗಳ ಹಿಂದೆ ತಾವು ಆಯ್ಕೆ ಮಾಡಿಕೊಂಡಂತಹ ಲಕ್ಷ್ಯ ಅಂದರೆ ಪ್ರಯಾಗ್ ರಾಜ್‌ನಲ್ಲಿ ಸ್ನಾನ ಮಾಡಬೇಕೆಂಬ ಗುರಿ, ಇದರ ಕುರಿತು ನಂಬಿಕೆ ಮತ್ತು ಈ ಕಾರ್ಯಕ್ಕೆ ಬೇಕಾದ ನಾಯಕತ್ವ ಈ ಎರಡೂ ಸೇರಿದರೆ ಮಾತ್ರ ಅದ್ಭುತಗಳನ್ನು ಸಾಧಿಸಲು ಸಾಧ್ಯ.
ಈ ಸಂದರ್ಭದಲ್ಲಿ ಒಂದು ಉದಾಹರಣೆ ನೀಡಲೇಬೇಕು. ೨೦೦೧ರಲ್ಲಿ ಪಾರ್ಲಿಮೆಂಟ್ ಮೇಲೆ ದಾಳಿ ನಡೆದಂತಹ ಸಂದರ್ಭದಲ್ಲಿ ವಾಜಪೇಯಿ ಸರ್ಕಾರ ಆಪರೇಷನ್ ಪರಾಕ್ರಮ್ ಹೆಸರಿನಲ್ಲಿ ತನ್ನ ಸೈನ್ಯವನ್ನು ಪಾಕಿಸ್ತಾನ ಗಡಿಗೆ ನಿಯೋಜಿಸಿ ಅಲ್ಲಿಂದ ಪಾಕಿಸ್ತಾನದ ಮೇಲೆ ದಾಳಿ ಮಾಡಬೇಕೆಂದು ಯೋಜನೆ ರೂಪಿಸಿತ್ತು. ಆದರೆ ಗಡಿಯಲ್ಲಿ ಸೈನ್ಯವನ್ನು ನಿಯೋಜಿಸಲು ಭಾರತಕ್ಕೆ ೩೦ ರಿಂದ ೪೫ ದಿನಗಳು ಬೇಕಾದವು. ಅಷ್ಟರಲ್ಲಿ ಪಾಕಿಸ್ತಾನ ತಾನು ಜಾಗರೂಕ ವಾಯಿತು. ಇದರಿಂದ ಈ ಕಾರ್ಯಾಚರಣೆ ವಿಫಲವಾಯಿತು. ಇಂದು ನಾವು ಕುಂಭಮೇಳದಲ್ಲಿ ತೋರಿಸಿದ ಮೊಬಿಲೈಸೇಶನ್ ಕೇಪಬಲಿಟಿಯನ್ನು ಜಗತ್ತಿನ ಮಿಲಿಟರಿ ಕಾಲೇಜುಗಳು ಮತ್ತು ಇನ್ಸ್ಟಿಟ್ಯೂಷನ್ಸ್ ಗಳು ಅಧ್ಯಯನ ಮಾಡಲು ಕಾರಣವೆಂದರೆ ಇಷ್ಟು ದೊಡ್ಡ ಮಾಸ್ ಮೊಬಿಲೈಸೇಶನ್‌ನಿಂದ ಭಾರತ ಏನು ಸಾಧಿಸುತ್ತದೆ? ಪ್ರಪಂಚದ ಯಾವುದಾದರೂ ದೇಶ ಈ ರೀತಿ ಸಾಧನೆ ಮಾಡುತ್ತದೆಯೇ? ತನ್ನ ದೇಶದ ಸಾಮರ್ಥ್ಯವನ್ನು ಭಾರತ ಯಾವ ರೀತಿ ಬಳಸಿಕೊಳ್ಳು ತ್ತದೆ? ಇದರ ಕುರಿತು ಅಧ್ಯಯನ ನಡೆಯುತ್ತಿದೆ. ಒಟ್ಟಾರೆ ಜಗತ್ತಿನ ವಿವಿಧ ಕ್ಷೇತ್ರಗಳ ಅಧ್ಯಯನಕಾರರಿಗೆ ಕುಂಭಮೇಳ ಎಂಬುದು ಆಸಕ್ತಿಕರ ವಿಷಯವಾಗಿದ್ದು ಈ ಕುರಿತು ಅಧ್ಯಯನಗಳು ನಡೆಯುತ್ತಿವೆ.
– ಶಶಿಕುಮಾರ್
ಲೇಖಕರು