ಇಳಕಲ್ ಬಸ್ ನಿಲ್ದಾಣದಲ್ಲಿ ಬಸ್ ಇಳಿಯುವ ಭರದಲ್ಲಿ ಮಹಿಳೆಯೊಬ್ಬರು ಚಿನ್ನ ಮತ್ತು ಹಣವಿದ್ದ ವ್ಯಾನಿಟಿ ಬ್ಯಾಗ್ ಮರೆತು ಹೋಗಿದ್ದು, ಚಾಲಕ ಮತ್ತು ನಿರ್ವಾಹಕರು ಅದನ್ನು ಆಕೆಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಇಳಕಲ್ ನಗರದಿಂದ ಹಿರೇ ಕೋಡಗಲಿ ಗ್ರಾಮಕ್ಕೆ ತೆರಳುತ್ತಿದ್ದ ಬಸ್ನಲ್ಲಿ ಮಹಿಳೆ ಬಿಟ್ಟು ಹೋಗಿದ್ದ ವ್ಯಾನಿಟ್ ಬ್ಯಾಗ್ನಲ್ಲಿ 6 ಸಾವಿರ ನಗದು, ಐದು ಗ್ರಾಂ ಚಿನ್ನವಿತ್ತು. ಸಿದ್ದವ್ವ ಮೇಲಿನಕೊಪ್ಪ ಬಸ್ನಲ್ಲಿ ಬ್ಯಾಗ್ ಮರೆತು ಹೋಗಿದ್ದ ಮಹಿಳೆ. ಚಾಲಕ ಮತ್ತು ನಿರ್ವಾಹಕರಾದ ವಿ.ವಿ.ಪಾಟೀಲ್, ಮಲ್ಲಪ್ಪ ಗೋತಗಿ ಸಾರಿಗೆ ವ್ಯವಸ್ಥಾಪಕ ಬಿರಾದಾರ ಮೂಲಕ ವಾರಸುದಾರಿಗೆ ಬ್ಯಾಗ್ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ.