2026ರ ಜ.1ರಿಂದ ಮುಂದಿನ 6 ತಿಂಗಳವರೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಮುಷ್ಕರ ಮಾಡುವಂತಿಲ್ಲ ಎಂದು ಸರ್ಕಾರ ಸಾರಿಗೆ ನೌಕರರಿಗೆ ಅಧಿಸೂಚನೆ ಹೊರಡಿಸಿದೆ.
ಯಾವುದೇ ಸಂದರ್ಭದಲ್ಲಿಯೂ ಮುಷ್ಕರ ಮಾಡಬಾರದು ಎಂದು ಮುಷ್ಕರ ನಿರ್ಬಂಧಿಸಿ ಆದೇಶ ಹೊರಡಿಸಿದೆ. ಸರ್ಕಾರದ ಆದೇಶ ಉಲ್ಲಂಘಿಸಿದಲ್ಲಿ ಎಸ್ಮಾ ಜಾರಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದೆ. ಸರ್ಕಾರದ ಆದೇಶದ ಪ್ರತಿಯನ್ನು ಸಂಸ್ಥೆಯ ಎಲ್ಲಾ ಘಟಕಗಳು ಹಾಗೂ ನೌಕರರ ಗಮನಕ್ಕೆ ತರುವಂತೆ ಸೂಚನೆ ನೀಡಲಾಗಿದೆ.
ವೇತನ ಪರಿಷ್ಕರಣೆ ಮತ್ತು ಸೇವಾ ಸೌಲಭ್ಯಗಳಿಗೆ ಆಗ್ರಹಿಸಿ ಹೊಸ ವರ್ಷದ ಆರಂಭದಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸುವ ಸಾಧ್ಯತೆ ತಪ್ಪಿಸಲು ಸರ್ಕಾರ ಈ ಅಧಿಸೂಚನೆ ಹೊಡಿಸಿದೆ. ಕೆಎಸ್ಸಾರ್ಟಿಸಿ ಹೊಸ ಮತ್ತು ಹಳೆಯ ನೌಕರರಿಗೆ ತರಬೇತಿ ನೀಡುವ ಮೂಲಕ ಕೌಶಲ್ಯ ಹೆಚ್ಚಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಆಗಸ್ಟ್‌ನಲ್ಲಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಪ್ರತಿಭಟನೆ ನಡೆಸಿದ್ದರು. ಆದರೆ ಆಗ ಸರ್ಕಾರ ಮಾತುಕತೆಗೆ ಕರೆದರೂ ಎಲ್ಲ ಬೇಡಿಕೆಗಳನ್ನು ಈಡೇರಿಸದ ಕಾರಣ ಪ್ರತಿಭಟನೆ ಮುಂದುವರಿಸುವುದಾಗಿ ಸಾರಿಗೆ ನೌಕರರ ಸಂಘ ಹೇಳಿತ್ತು.
“ಸಾರಿಗೆ ಮಿತ್ರ” ಆ್ಯಪ್ ಬಿಡುಗಡೆ
ಸಾರಿಗೆ ನೌಕರರ ಅನುಕೂಲಕ್ಕಾಗಿ “ಸಾರಿಗೆ ಮಿತ್ರ” ಆ್ಯಪ್ ಅನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಿಡುಗಡೆಗೊಳಿಸಿದ್ದಾರೆ. ಈ ಮೊಬೈಲ್ ಅಪ್ಲಿಕೇಶನ್ ಮೂಲಕ ನೌಕರರು ತಮ್ಮ ಹಾಜರಾತಿ ಮತ್ತು ರಜೆಗಳನ್ನು ನಿರ್ವಹಿಸಬಹುದು. ಸಂಬಳದ ವಿವರಗಳನ್ನು ಪರಿಶೀಲಿಸಬಹುದು, ಆನ್‌ಲೈನ್ ಮೂಲಕ ರಜೆ ಅರ್ಜಿ ಸಲ್ಲಿಸುವುದು ಮತ್ತು ಅದರ ಸ್ಥಿತಿಯನ್ನು ತಿಳಿಯಬಹುದು. ಸಂಬಳದ ಸ್ಲಿಪ್‌ಗಳು ಮತ್ತು ಇತರ ಹಣಕಾಸಿನ ವಿವರಗಳನ್ನು ವೀಕ್ಷಿಸಬಹದುದು. ನಿಗಮದ ಇತ್ತೀಚಿನ ಸುದ್ದಿ, ನೀತಿಗಳು ಮತ್ತು ಅಧಿಸೂಚನೆಗಳನ್ನು ಪಡೆಯಬಹುದು. ಈ ಅಪ್ಲಿಕೇಶನ್ ಅನ್ನು Google Play Store ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.


