Monday, September 22, 2025
Menu

KSRTC ದಸರಾ ವಿಶೇಷ ಟೂರ್‌ ಪ್ಯಾಕೇಜ್‌: ಯಾವಾಗಿಂದ ಆರಂಭ? ದರ ಎಷ್ಟು?

ನಾಡಹಬ್ಬ ದಸರಾ ವೀಕ್ಷಣೆಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ವಿಶೇಷ ಟೂರ್​ ಪ್ಯಾಕೇಜ್ (Tour Package)​ ಪ್ರಾರಂಭಿಸಿದೆ. ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 7 ರವರೆಗೆ ಈ ಪ್ಯಾಕೇಜ್​ನ ಸೇವೆಯ ಬಸ್‌ಗಳು ಕಾರ್ಯಾ ನಿರ್ವಹಿಸಲಿವೆ.

ದಸರಾ ಪ್ರಯುಕ್ತ ಪ್ರವಾಸಿಗರ ಸಂಖ್ಯೆ ಹೆಚ್ಚಾಗುರುವುದರಿಂದ ಕೆಎಸ್‌ಆರ್‌ಟಿಸಿ 610 ವಿಶೇಷ ಬಸ್‌ಗಳನ್ನು ರಸ್ತೆಗಿಳಿಸಲು ನಿರ್ಧರಿಸಿದೆ. 260 ಹೆಚ್ಚುವರಿ ಬಸ್‌ಗಳು ಬೆಂಗಳೂರು – ಮೈಸೂರು ನಡುವೆ ಸಂಚಾರ ನಡೆಸಿದರೆ, ಉಳಿದ ಬಸ್‌ಗಳು ಮೈಸೂರಿನ ಸುತ್ತಮುತ್ತಲಿನ ಪ್ರೇಕ್ಷಣೀಯ, ಧಾರ್ಮಿಕ ಮತ್ತು ಪ್ರವಾಸಿ ತಾಣಗಳಿಗೆ ಸಂಚಾರ ನಡೆಸಲಿವೆ.

ಕೆಎಸ್‌ಆರ್‌ಟಿಸಿ ಒಂದು ದಿನಂದ ಪ್ಯಾಕೇಜ್‌ನಲ್ಲಿ ಬಸ್‌ಗಳು ಬೆಳಿಗ್ಗೆ ಮೈಸೂರಿನಿಂದ ಆರಂಭವಾಗಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ನಂತರ ಸಾಯಂಕಾಲ ಮೈಸೂರಿಗೆ ವಾಪಸ್‌ ಆಗಲಿದೆ.

ಪ್ಯಾಕೇಜ್ ವಿವರ

ಗಿರಿದರ್ಶಿನಿ: ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗ ಬೆಟ್ಟ, ನಂಜನಗೂಡು ಮತ್ತು ಚಾಮುಂಡಿ ಬೆಟ್ಟ (ಪ್ರಯಾಣ ದರ ವಯಸ್ಕರಿಗೆ:- 450 ರೂ. ಮತ್ತು ಮಕ್ಕಳಿಗೆ 300 ರೂ.)

ಜಲದರ್ಶಿನಿ: ಗೋಲ್ಡನ್ ಟೆಂಪಲ್, ದುಬಾರೆ ನಿಸರ್ಗಧಾಮ, ರಾಜಾಸೀಟ್, ಹಾರಂಗಿ ಜಲಾಶಯ ಮತ್ತು ಕೆ‌.ಆರ್.ಎಸ್ (ಪ್ರಯಾಣ ದರ ವಯಸ್ಕರಿಗೆ:- 500 ರೂ. ಮತ್ತು ಮಕ್ಕಳಿಗೆ 350 ರೂ.)

ದೇವದರ್ಶಿನಿ: ನಂಜನಗೂಡು, ಬ್ಲಪ್, ಮುಡುಕುತೊರೆ ತಲಕಾಡು, ಸೋಮನಾಥಪುರ, ಶ್ರೀರಂಗಪಟ್ಟಣ (ಪ್ರಯಾಣ ದರ ವಯಸ್ಕರಿಗೆ:- 330 ರೂ. ಮತ್ತು ಮಕ್ಕಳಿಗೆ 225 ರೂ.)

ಟಿಕೆಟ್ ಬುಕ್ಕಿಂಗ್‌ ಹೇಗೆ?
ಕೆಎಸ್‌ಆರ್‌ಟಿಸಿ ಅಧಿಕೃತ ವೆಬ್‌ಸೈಟ್‌ ಅಥವಾ ಸ್ಥಳೀಯ ಕೆಎಸ್‌ಆರ್‌ಟಿಸಿ ಬುಕ್ಕಿಂಗ್ ಕೌಂಟರ್‌ನಲ್ಲಿ ಟಿಕೆಟ್‌ ಬುಕ್‌ ಮಾಡಬಹುದು. ಆಸಕ್ತಿಯುಳ್ಳ ಪ್ರಯಾಣಿಕರು ಖಡ್ಡಾಯವಾಗಿ ಟಿಕೆಟ್ ಖರೀದಿ ಮಾಡಬೇಕು. ಈ ವಿಶೇಷ ಪ್ಯಾಕೇಜ್‌ಗಳಿಗೆ ಶಕ್ತಿ ಯೋಜನೆ ಅನ್ವಯವಾಗುವುದಿಲ್ಲ.

 

 

Related Posts

Leave a Reply

Your email address will not be published. Required fields are marked *