ಎರಡು ಬೈಕ್ಗಳಿಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದು ಐವರು ಸಾವಿಗೀಡಾಗಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆ ಆದೋನಿ ತಾಲೂಕಿನ ಪಾಂಡವಗಲ್ ಗ್ರಾಮದ ಬಳಿ ನಡೆದಿದೆ.
ಗಂಗಾವತಿಯಿಂದ ಮಂತ್ರಾಲಯಕ್ಕೆ ಹೊರಟಿದ್ದ ಬಸ್, ಬೈಕ್ಗಳಿಗೆ ಡಿಕ್ಕಿ ಹೊಡೆದಿದೆ. ಒಂದು ಬೈಕ್ನಲ್ಲಿದ್ದ ಹೇಮಾದ್ರಿ, ಪತ್ನಿ ನಾಗರತ್ನಮ್ಮ, ಮಗ ದೇವರಾಜು ಹಾಗೂ ಮತ್ತೊಂದು ಬೈಕ್ನಲ್ಲಿದ್ದ ಪತಿ-ಪತ್ನಿ ಈರಣ್ಣ, ಆದಿಲಕ್ಷ್ಮಿ ಮೃತಪಟ್ಟಿದ್ದಾರೆ.