ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ರಾ.ಹೆದ್ದಾರಿ ೬೩ ಹಿಟ್ಟಿನಬೈಲ್ ಕ್ರಾಸ್ ಸಮೀಪ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಹಾಗೂ ಲಾರಿಯ ನಡುವೆ ಸಂಭವಿಸಿದ ಅಪಘಾತದಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಮೃತಪಟ್ಟು, 7 ಪ್ರಯಾಣಿಕರಿಗೆ ಗಂಭೀರವಾಗಿ ಗಾಯವಾಗಿದೆ.
ಶುಕ್ರವಾರ ತಡರಾತ್ರಿ ನಡೆದಿದ್ದು, ಬಾಗಲಕೋಟೆ ಜಿಲ್ಲೆಯ ಅಮೀನಗಢದಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಬಸ್ಸಿನ ಚಾಲಕ ಯಮನಪ್ಪ ತ ಮುತ್ತಪ್ಪ ಮಾಗಿ ಎಂಬಾತ ಬಸ್ಸನ್ನು ಅತೀ ವೇಗದಿಂದ ಚಲಾಯಿಸಿಕೊಂಡು ಬಂದು ಯಲ್ಲಾಪುರ ತಾಲೂಕಿನ ಹಿಟ್ಟಿನಬೈಲ್ ಕ್ರಾಸ್ ಹತ್ತಿರ ಹೆದ್ದಾರಿಯಲ್ಲಿ ಯಾವುದೇ ರಸ್ತೆ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ನಿಂತಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿಹೊಡೆದ ಕಾರಣ ಅಪಘಾತ ಸಂಭವಿಸಿದೆ.
ಈ ಅಪಘಾತದಲ್ಲಿ ಗುಳೇದಗುಡ್ಡದ ನೀಲವ್ವ ಯಲದುರ್ಗಪ್ಪ ಹರದೊಳ್ಳಿ(40), ಜಾಲಿಹಾಳದ ಗಿರಿಜವ್ವ ತಂದೆ ಅಯ್ಯಪ್ಪ ಬೂದನ್ನವರ್(30) ಹಾಗೂ ಇನ್ನೊಬ್ಬ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಮೀನಘಡದ ಚಿದಾನಂದನ ಕಿತ್ತಳಿ,ವಿದ್ಯಾರ್ಥಿ (೭ ವರ್ಷ) ಮಲ್ಲಪ್ಪ ಕತ್ತಿ, (೫೫) ಅಮಿನಘಡ,ಮಂಜುಳಾ ಹಳಬರ್(೪೫),ಸುಳಬಾವಿ, ಮಲ್ಲಿಕಾರ್ಜುನ ಅಂದಲಿ,(೧೨) ವಿದ್ಯಾರ್ಥಿ ಅಮೀನಗಡ, ದೇವಕಿ ಹನಿಮಂತ ಬೆಳ್ಳಿ, (೩೫) ಅಮೀನಗಡ,ಕು.ಸಮೀರಾ ಬೇಗಂ,(೧೨) ಹುನುಗುಂದ, ಷರೀಫಾ ಬೇಗಂ (೬೦) ರಕ್ಕಸಂಗಿ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಲಾರಿ ಚಾಲಕ ಹಾಗೂ ಬಸ್ ಚಾಲಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ.