ಬೀದರ್‌ನ ಸರ್ಕಾರಿ ಆಸ್ಪತ್ರೆಯೊಂದರ ಬಗ್ಗೆ ದೂರು ನೀಡಿದ KRS ಪಕ್ಷದ ಸದಸ್ಯನಿಗೆ ಜೀವ ಬೆದರಿಕೆ ಬಂದಿದ್ದು, ಪ್ರಕರಣ ದಾಖಲಾಗಿದೆ. ಧನ್ನೂರ (ಕೆ) ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ಅಶ್ವಿನಿ ವಿರುದ್ಧ ದೂರು ನೀಡಿದ್ದಕ್ಕೆ ಅವರ ತಾಯಿಯಿಂದ ಬೆದರಿಕೆ ಬಂದಿರುವುದಾಗಿ ಸಂಗಮೇಶ್ ಬಿರದಾರ ದೂರಿನಲ್ಲಿ ತಿಳಿಸಿದ್ದಾರೆ.
ಬಸವಕಲ್ಯಾಣ ತಾಲೂಕಿನ ಧನ್ನೂರ (ಕೆ) ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಶ್ವಿನಿ ವಿರುದ್ಧ ಸಂಗಮೇಶ್ ಬಿರದಾರ ಡಿಎಚ್ಒ ಅವರಿಗೆ ದೂರು ನೀಡಿದ್ದಕ್ಕೆ ವೈದ್ಯಾಧಿಕಾರಿಯ ತಾಯಿ ಕೊಲೆ ಬೆದರಿಕೆ ಒಡ್ಡಿರುವುದಾಗಿ ಸಂಗಮೇಶ ಬಿರಾದಾರ ಆರೋಪಿಸಿದ್ದಾರೆ.
ಅ.16 ರಂದು ಚಿಕಿತ್ಸೆಗೆಂದುಕೆಆರ್‌ಎಸ್ ಪಕ್ಷದ ಸದಸ್ಯ ಸಂಗಮೇಶ ಬಿರಾದರ್ ಈ ಆಸ್ಪತ್ರೆಗೆ ಹೋಗಿದ್ದಾಗ ಹತ್ತುವರೆ ಗಂಟೆಯಾಗಿದ್ದರೂ ಯಾವುದೇ ವೈದ್ಯರು ಬಂದಿರಲಿಲ್ಲ, ಹೀಗಾಗಿ ಸಂಗಮೇಶ ಅವರು ಡಿಎಚ್‌ಒಗೆ ಕರೆ ಮಾಡಿ ದೂರು ನೀಡಿದ್ದರು. ಈ ಕರಾಣಕ್ಕೆ ವೈದ್ಯಾಧಿಕಾರಿ ಅಶ್ವಿನಿಯ ತಾಯಿ ದೂರುದಾರ ಸಂಗಮೇಶಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ.
ವಿಜಯ್ ಸಿಂಗ್ ಗೆ ಹೇಳಿ ಕುತ್ತಿಗೆ ಸೀಳಿಸ್ತೀನಿ, ಇನ್ನೊಂದು ಸಾರಿ ಆಸ್ಪತ್ರೆ ಕಡೆ ಹೋಗಬೇಡ ಎಂದು ಬೆದರಿಸಿದ್ದಾರೆಂದು ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಗೆ ಸಂಗಮೇಶ ಬಿರಾದರ್ ದೂರು ನೀಡಿದ್ದಾರೆ. ಬಿಎನ್ಎಸ್ 351(2) ಕ್ರಿಮಿನಲ್ ಬೆದರಿಕೆಯಡಿ ಡಾ. ಅಶ್ವಿನಿ ಅವರ ತಾಯಿ ವಿರುದ್ಧ ಪ್ರಕರಣ ದಾಖಲಾಗಿದೆ.


