ಕೆಆರ್‌ಎಸ್ ಡ್ಯಾಂನಲ್ಲಿ ಈ ಬಾರಿ ಜೂನ್‌ನಲ್ಲೇ 118.60 ಅಡಿ ನೀರು ಭರ್ತಿಯಾಗಿ ದಾಖಲೆ ಬರೆದಿದೆ. ಜೂನ್ ತಿಂಗಳಲ್ಲೇ ಅಣೆಕಟ್ಟು ಸಂಪೂರ್ಣ ಭರ್ತಿಯಾಗುವಂತೆ ಕಾಣಿಸುತ್ತಿದೆ, ಇತಿಹಾಸದಲ್ಲೇ ಮೊದಲ ಬಾರಿಗೆ ಜೂನ್‌ನಲ್ಲಿ ಇಷ್ಟು ಪ್ರಮಾಣದ ನೀರು ಸಂಗ್ರಹವಾಗಿದೆ.
ಜಲಾಶಯದ ನಿರ್ಮಾಣವಾದಾಗಿನಿಂದ ಮೊದಲ ಬಾರಿಗೆ ಜೂನ್‌ನಲ್ಲಿ ಈ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಸಾಮಾನ್ಯವಾಗಿ ಜುಲೈ ಅಂತ್ಯ ಅಥವಾ ಆಗಸ್ಟ್‌ನಲ್ಲಿ ಡ್ಯಾಂ ಭರ್ತಿಯಾಗುತ್ತಿತ್ತು. ಈ ಬಾರಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾದ ಹಿನ್ನೆಲೆ ಕೆಆರ್‌ಎಸ್ ಡ್ಯಾಂ 118.60 ಅಡಿ ಭರ್ತಿಯಾಗಿದೆ.
124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಅಣೆಕಟ್ಟೆ ಸಂಪೂರ್ಣ ಭರ್ತಿಗೆ 6 ಅಡಿ ಮಾತ್ರ ಬಾಕಿಯಿದೆ. ಡ್ಯಾಂನಲ್ಲಿ 18,387 ಕ್ಯುಸೆಕ್ ಒಳಹರಿವಿದೆ. ಇದೇ ಪ್ರಮಾಣದ ಒಳಹರಿವು ಮುಂದುವರಿದರೆ ಒಂದು ವಾರದಲ್ಲೇ ಡ್ಯಾಂ ಭರ್ತಿಯಾಗಲಿದೆ. ಡ್ಯಾಂಗೆ 8 ಟಿಎಂಸಿ ನೀರು ಹರಿದು ಬಂದರೆ ಸಂಪೂರ್ಣ ಭರ್ತಿಯಾಗ ಲಿದೆ. ಅಣೆಕಟ್ಟೆ 49.452 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದೆ.