ಕ್ರೀಡೆ
ವಿಜಯ್ ಹಜಾರೆ ಟ್ರೋಫಿಗೆ ಕರ್ನಾಟಕ ತಂಡ ಪ್ರಕಟ: ಕೆಎಲ್ ರಾಹುಲ್, ಪ್ರಸಿದ್ಧ ಕೃಷ್ಣಗೆ ಸ್ಥಾನ
ಬೆಂಗಳೂರು: ಡಿಸೆಂಬರ್ 24 ರಿಂದ ಆರಂಭವಾಗಲಿರುವ ವಿಜಯ್ ಹಜಾರೆ ಏಕದಿನ ಟ್ರೋಫಿಗೆ ಪ್ರಕಟಿಸಲಾದ ಕರ್ನಾಟಕ ತಂಡದಲ್ಲಿ ಸ್ಟಾರ್ ಆಟಗಾರರಾದ ಕೆ.ಎಲ್.ರಾಹುಲ್, ಪ್ರಸಿದ್ಧ ಕೃಷ್ಣ ಸೇರಿ ಪ್ರಮುಖ ಆಟಗಾರರಿಗೆ ಸ್ಥಾನ ನೀಡಲಾಗಿದೆ. ಡಿಸೆಂಬರ್ 24 ರಿಂದ ಪ್ರಾರಂಭವಾಗಲಿರುವ ಟೂರ್ನಿ ಮುಂದಿನ ವರ್ಷ ಜನವರಿ 18 ರವರೆಗೆ ದೇಶದ ವಿವಿಧ ನಗರಗಳಲ್ಲಿ ಜನವರಿ 8ರ ವರೆಗೆ ನಡೆಯಲಿದೆ. ಕ್ವಾರ್ಟರ್ ಫೈನಲ್ಸ್ ಪಂದ್ಯ ಜನವರಿ 12 ರಂದು ಮತ್ತು ಸೆಮಿಫೈನಲ್ ಜನವರಿ 15 ರಂದು
28.40 ಕೋಟಿಗೆ ಪ್ರಶಾಂತ್ ವೀರ್, ಕಾರ್ತಿಕ್ ಶರ್ಮ ಖರೀದಿ: ಇತಿಹಾಸ ಬರೆದ ಸಿಎಸ್ ಕೆ!
ಅನ್ ಕ್ಯಾಪ್ಡ್ (ಭಾರತ ತಂಡದಲ್ಲಿ ಸ್ಥಾನ ಪಡೆಯದ) ಯುವ ಆಟಗಾರರಾದ ಪ್ರಶಾಂತ್ ವೀರ್ ಮತ್ತು ಕಾರ್ತಿಕ್ ಶರ್ಮ ಅವರಿಗೆ ತಲಾ 14.20 ಕೋಟಿ ರೂ. ವಿನಿಯೋಗಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಇತಿಹಾಸ ಬರೆದಿದೆ. ದುಬೈನಲ್ಲಿ ಮಂಗಳವಾರ ನಡೆದ ಐಪಿಎಲ್ ಮಿನಿ
ಅಂಡರ್ 19 ಏಷ್ಯಾಕಪ್: ಅಭಿಗ್ಯಾನ್ ದ್ವಿಶತಕ, ಭಾರತಕ್ಕೆ 315 ಗೆಲುವು
ಮಧ್ಯಮ ಕ್ರಮಾಂಕದಲ್ಲಿ ಅಭಿಗ್ಯಾನ್ ಕುಂದ್ ಸಿಡಿಸಿದ ದ್ವಿಶತಕದ ನೆರವಿನಿಂದ ಭಾರತ ತಂಡ 19 ವರ್ಷದೊಳಗಿನವರ ಏಷ್ಯಾಕಪ್ ಕ್ರಿಕೆಟ್ ಪಂದ್ಯದಲ್ಲಿ ಮಲೇಷ್ಯಾ ತಂಡವನ್ನು 315 ರನ್ ಗಳ ಭಾರೀ ಅಂತರದಿಂದ ಬಗ್ಗುಬಡಿದಿದೆ. ದುಬೈನಲ್ಲಿ ಮಂಗಳವಾರ ನಡೆದ ಎ ಗುಂಪಿನ ಪಂದ್ಯದಲ್ಲಿ ಟಾಸ್ ಸೋತು
7 ಕೋಟಿಗೆ ಆರ್ ಸಿಬಿ ಪಾಲಾದ ವೆಂಕಟೇಶ್ ಅಯ್ಯರ್
ಸ್ಫೋಟಕ ಬ್ಯಾಟ್ಸ್ ಮನ್ ವೆಂಕಟೇಶ್ ಅಯ್ಯರ್ 7 ಕೋಟಿ ರೂ.ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿದ್ದಾರೆ. ಅಬುಧಾಬಿಯಲ್ಲಿ ಮಂಗಳವಾರ ನಡೆದ ಮಿನಿ ಹರಾಜಿನಲ್ಲಿ 2 ಕೋಟಿ ರೂ. ಮೂಲಧನ ಹೊಂದಿದ್ದ ವೆಂಕಟೇಶ್ ಅಯ್ಯರ್ ಅವರನ್ನು 7 ಕೋಟಿ ರೂ. ನೀಡಿ
ಐಪಿಎಲ್ ನ ಅತ್ಯಂತ ದುಬಾರಿ ವಿದೇಶೀ ಆಟಗಾರ ಕೆಮರೂನ್ ಗ್ರೀನ್: 25.20 ಕೋಟಿಗೆ ಕೆಕೆಆರ್ ಪಾಲು!
ಆಸ್ಟ್ರೇಲಿಯಾದ ಆಲ್ ರೌಂಡರ್ ಕೆಮರೂನ್ ಗ್ರೀನ್ ಐಪಿಎಲ್ ಟಿ-20ಯ ಮಿನಿ ಹರಾಜಿನಲ್ಲಿ ಅತ್ಯಂತ ದುಬಾರಿ ವಿದೇಶೀ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಅಬುಧಾಬಿಯಲ್ಲಿ ಮಂಗಳವಾರ ನಡೆದ ಮಿನಿ ಹರಾಜಿನಲ್ಲಿ ಕೆಮರೂನ್ ಗ್ರೀನ್ ಅವರನ್ನು ಕೋಲ್ಕತಾ ನೈಟ್ ರೈಡರ್ಸ್ ತಂಡ 25.20 ಕೋಟಿ ರೂ.ಗೆ ಖರೀದಿಸಿದೆ.
ರಣರಂಗವಾದ ಕೋಲ್ಕತಾ ಮೈದಾನ: ಮೆಸ್ಸಿ ಅಭಿಮಾನಿಗಳಿಂದ ದಾಂಧಲೆ!
ಅರ್ಜೆಂಟೀನಾದ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿ ನೋಡುವ ಅವಕಾಶ ಸಿಗದೇ ರೊಚ್ಚಿಗೆದ್ದ ಅಭಿಮಾನಿಗಳು ಕೋಲ್ಕತಾದಲ್ಲಿ ದಾಂಧಲೆ ನಡೆಸಿದ್ದಾರೆ. ಶನಿವಾರ ಮುಂಜಾನೆ ಕೋಲ್ಕತ್ತಾಗೆ ಆಗಮಿಸಿದ ಮೆಸ್ಸಿ ‘ಗೋಟ್ ಟೂರ್ ಆಫ್ ಇಂಡಿಯಾ’ ಆರಂಭಿಸಿದರು. ಮೆಸ್ಸಿ ಜೊತೆಗೆ ಅವರ ಇಂಟರ್ ಮಿಯಾಮಿ ತಂಡದ
ಕೋಲ್ಕತಾದಲ್ಲಿ ತನ್ನದೇ 70 ಅಡಿ ಎತ್ತರದ ಪ್ರತಿಮೆ ಅನಾವರಣಗೊಳಿಸಿದ ಲಿಯೊನೆಲ್ ಮೆಸ್ಸಿ!
14 ವರ್ಷಗಳ ನಂತರ ಭಾರತಕ್ಕೆ ಭೇಟಿ ನೀಡಿದ ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ 70 ಅಡಿ ಎತ್ತರದ ತನ್ನದೇ ಪ್ರತಿಮೆಯನ್ನು ವರ್ಚುಯಲ್ ಆಗಿ ಅನಾವರಣಗೊಳಿಸಿದ್ದಾರೆ. ಶನಿವಾರ ಮುಂಜಾನೆ ಕೋಲ್ಕತ್ತಾಗೆ ಆಗಮಿಸುವ ಮೂಲಕ ಮೆಸ್ಸಿ ‘ಗೋಟ್ ಟೂರ್ ಆಫ್ ಇಂಡಿಯಾ’ ಆರಂಭಿಸಿದರು.
ದೇಶೀಯ ಕ್ರಿಕೆಟ್ ನಲ್ಲಿ ಮ್ಯಾಚ್ ಫಿಕ್ಸಿಂಗ್: ನಾಲ್ವರು ಕ್ರಿಕೆಟಿಗರ ಅಮಾನತು
ಭಾರತದ ದೇಶೀಯ ಕ್ರಿಕೆಟ್ನ ಅತಿದೊಡ್ಡ ಟಿ20 ಟೂರ್ನಮೆಂಟ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2025 ಪಂದ್ಯಾವಳಿಯಲ್ಲಿ ಭ್ರಷ್ಟಾಚಾರ ಆರೋಪದ ಮೇಲೆ ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ ನಾಲ್ವರು ಆಟಗಾರರನ್ನು ಅಮಾನತುಗೊಳಿಸಿದೆ. ಲಕ್ನೋದಲ್ಲಿ ನಡೆದ ಪಂದ್ಯಗಳ ಸಮಯದಲ್ಲಿ ನಾಲ್ವರು ಆಟಗಾರರು ಇತರ ತಂಡದ ಸದಸ್ಯರ
ಸೂರ್ಯವಂಶಿಯ 171 ರನ್ `ವೈಭವ’: ಭಾರತ ಯುವಪಡೆ 234 ರನ್ ಜಯಭೇರಿ
14 ವರ್ಷದ ಯುವ ಬ್ಯಾಟ್ಸ್ ಮನ್ ವೈಭವ್ ಸೂರ್ಯವಂಶಿ ಸಿಡಿಸಿದ ಸಿಡಿಲಬ್ಬರದ ಶತಕದ ನೆರವಿನಿಂದ ಭಾರತ ತಂಡ 19 ವರ್ಷದೊಳಗಿನವರ ಏಕದಿನ ಏಷ್ಯಾಕಪ್ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೆಟ್ಸ್ ವಿರುದ್ಧ 234 ರನ್ ಗಳ ಬೃಹತ್ ಗೆಲುವು ದಾಖಲಿಸಿದೆ. ದುಬೈನಲ್ಲಿ ಶುಕ್ರವಾರ
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶೀಘ್ರವೇ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿ: ವೆಂಕಟೇಶಪ್ರಸಾದ್
ಬೆಳಗಾವಿ: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶೀಘ್ರವೇ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿ ನಡೆಯಲಿವೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ನ ನೂತನ ಅಧ್ಯಕ್ಷ ವೆಂಕಟೇಶಪ್ರಸಾದ್ ಹೇಳಿದರು. ಬುಧವಾರ ಬೆಳಗಾವಿಯ ಕ್ರಿಕೆಟ್ ಸ್ಟೇಡಿಯಂ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಸಿಬಿ ವಿಜಯೋತ್ಸವದ ವೇಳೆ




