Menu

ಯಶಸ್ವಿಯಾಗಿ ನಡೆದ ಕೆಪಿಟಿಸಿಎಲ್ ಪರೀಕ್ಷೆ: 1800 ಅಭ್ಯರ್ಥಿಗಳು ಭಾಗಿ

ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು ಕಿರಿಯ ಸ್ಷೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ ಹುದ್ದೆಗಳಿಗೆ ದೈಹಿಕ ಕ್ಷಮತೆ/ ಸಹನ ಶಕ್ತಿ ಪರೀಕ್ಷೆಯನ್ನು ರಾಜ್ಯದ ನಾಲ್ಕು ವಲಯಗಳಲ್ಲಿ ಯಶಸ್ವಿಯಾಗಿ ನಡೆಸಿದೆ.

ಕವಿಪ್ರನಿನಿಯಲ್ಲಿ ಕಿರಿಯ ಸ್ಷೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ 533 ಹುದ್ದೆಗಳಿಗೆ 1:5 ಅನುಪಾತದಲ್ಲಿ ಸಹನ ಶಕ್ತಿ ಪರೀಕ್ಷೆಯನ್ನು ಮೇ 5 ರಿಂದ 8 ರವರೆಗೆ ಬೆಂಗಳೂರು, ಬೆಳಗಾವಿ, ಬಾಗಲಕೋಟೆ ಹಾಗೂ ಕಲಬುರಗಿಯಲ್ಲಿ ಆಯೋಜಿಸಿತ್ತು.

ಈ ಪರೀಕ್ಷೆಗೆ ಕರೆಯಲಾದ 2615 ಅಭ್ಯರ್ಥಿಗಳ ಪೈಕಿ, 1800 ಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು  ಎಂದು ಕೆಪಿಟಿಸಿಎಲ್‌ನ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು ಬೆಂಗಳೂರು, ಬೆಳಗಾವಿ, ಬಾಗಲಕೋಟೆ ಹಾಗೂ ಕಲಬುರಗಿಯಲ್ಲಿ ವಲಯವಾರು ಪ್ರಥಮ ಹಂತದಲ್ಲಿ, 1:5 ಅನುಪಾತದಲ್ಲಿ ಕರೆಯಲಾದ ಅಭ್ಯರ್ಥಿಗಳಿಗೆ ಕಂಬ ಹತ್ತುವುದು, ಓಟ ಓಡುವುದು ಒಳಗೊಂಡಂತೆ ಐದು ವಿಧದ ಪರೀಕ್ಷೆಯನ್ನು ನಡೆಸಿದೆ.

ವಿಶೇಷವಾಗಿ ಬೆಳಗಾವಿಯಲ್ಲೇ ಅತೀ ಹೆಚ್ಚು ಅಭ್ಯರ್ಥಿಗಳು ಸಹನ ಶಕ್ತಿ ಪರೀಕ್ಷೆಗೆ ಅರ್ಹತೆಗಳಿಸಿದ್ದರಿಂದ ಜಿಲ್ಲೆಯ ಅಭ್ಯರ್ಥಿಗಳಿಗಾಗಿಯೇ ಪರೀಕ್ಷಾ ಕೇಂದ್ರವನ್ನು ನಿಗದಿಗೊಳಿಸಲಾಗಿತ್ತು.

ನಾಲ್ಕೂ ವಲಯಗಳಲ್ಲಿ ಪರೀಕ್ಷೆಯಲ್ಲಿ ಪಾಲ್ಗೊಂಡಿರುವ ಅಭ್ಯರ್ಥಿಗಳು, ಐದರ ಪೈಕಿ ಮೂರರಲ್ಲಿ ಅರ್ಹತೆ ಗಳಿಸಿಬೇಕಾಗಿದ್ದು, ಎಸ್.ಎಸ್.ಎಲ್.ಸಿ ಪರೀಕ್ಷೆಯ ಅಂಕಗಳ ಮೆರಿಟ್ ಆಧಾರದಲ್ಲಿ 1:1 ಅನುಪಾತದ ಪಟ್ಟಿಯನ್ನು ಅಂತಿಮಗೊಳಿಸಿ ಪ್ರಕಟಿಸಲಾಗುವುದು ಎಂದು ನಿಗಮದ ಪ್ರಕಟಣೆ ತಿಳಿಸಿದೆ.

ಅಭ್ಯರ್ಥಿಗಳು ಅಂತಿಮ ಆಯ್ಕೆ ಪಟ್ಟಿ ಹಾಗೂ ಮಾಹಿತಿ ಪಡೆಯಲು ನಿಗಮದ ಅಧಿಕೃತ ವೆಬ್‌ಸೈಟ್ ಪರಿಶೀಲಿಸಲು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ತಿಳಿಸಿದೆ.

Related Posts

Leave a Reply

Your email address will not be published. Required fields are marked *