Tuesday, February 17, 2026
Menu

ಕೊಳ್ಳೇಗಾಲದಲ್ಲಿ ಹುಲಿ ಶವ ಪತ್ತೆ: ಉರುಳಿಗೆ ಸಿಲುಕಿ ಸಾವು, ಆರೋಪಿಗಳ ಪತ್ತೆಗೆ ಕ್ರಮ

ಚಾಮರಾಜನಗರದ ಕೊಳ್ಳೇಗಾಲ ಗುಂಡಾಲ್ ಡ್ಯಾಂನಲ್ಲಿ ಗಂಡು ಹುಲಿಯ ಶವ ಪತ್ತೆಗೆ ಸಂಬಂಧಿಸಿದಂತೆ ಅರಣ್ಯಾಧಿಕಾರಿಗಳು ತನಿಖೆ ಕೈಗೊಂಡಿದ್ದು, ಹುಲಿಯು ಉರುಳಿಗೆ ಸಿಲುಕಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

ಸ್ಕೂಟರ್ ಕ್ಲಚ್ ವೈರ್ ಕತ್ತಿಗೆ ಸಿಕ್ಕಿ ಹಾಕಿಕೊಂಡು ಹುಲಿ ಅಸು ನೀಗಿದ್ದು, ಅರಣ್ಯ ಇಲಾಖೆ ಉರುಳು ಹಾಕಿದವರ ವಿಚಾರಣೆಯಲ್ಲಿ ತೊಡಗಿದೆ. ಬೇರೆ ಪ್ರಾಣಿಗೆ ಹಾಕಿದ್ದ ಉರುಳಿಗೆ ಹುಲಿ ಸಿಲುಕಿರಬಹುದು ಎಂದು ಹೇಳಲಾಗಿದೆ. ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿದಾಗ ಕೊರಳಿಗೆ ಸ್ಕೂಟರ್ ಕ್ಲಚ್ ವೈರ್ ಸುತ್ತಿಕೊಂಡು ಉಸಿರುಗಟ್ಟಿ ಮೃತಪಟ್ಟಿರುವುದು ಗೊತ್ತಾಗಿದೆ. ಹುಲಿ ನೀರು ಕುಡಿಯಲು ಹೋಗಿದ್ದಾಗ ನೀರಿಗೆ ಬಿದ್ದು ಮೃತಪಟ್ಟಿದೆ. ಮೂರರಿಂದ ನಾಲ್ಕು ದಿನಗಳ ಹಿಂದೆಯೇ ಉರುಳು ಹುಲಿಯ ಕತ್ತಿಗೆ ಸುತ್ತಿಕೊಂಡಿದ್ದು, ಬಿಗಿದುಕೊಂಡು ಹುಲಿ ಸತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಅರಣ್ಯಾಧಿಕಾರಿಗಳು ಉರುಳು ಹಾಕಿದವರ ಪತ್ತೆಗೆ ಮುಂದಾಗಿದ್ದಾರೆ. ಸ್ಥಳೀಯ ರೈತರು, ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಉರುಳುಗಳು ಕಂಡುಬಂದರೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ಕೊಡಿ ಅಥವಾ ನೀವೇ ಉರುಳನ್ನು ತೆಗೆದು ಬಿಸಾಡಿ ಎಂದು ಮನವಿ ಮಾಡಿದ್ದಾರೆ.

ಹುಲಿಯ ಬೇಟೆಗೆ ಉರುಳು ಹಾಕಲಾಗಿತ್ತಾ ಅಥವಾ ಬೇರೆ ಪ್ರಾಣಿಗಳ ಬೇಟೆಗೆ ಉರುಳು ಹಾಕಲಾಗಿತ್ತಾ ಎಂಬ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ವ್ಯಕ್ತಪಡಿಸಿದರು. ಈ ಕೃತ್ಯ ಎಸಗಿದವರ ವಿರುದ್ಧ ಕ್ರಮಕ್ಕೆ ಪರಿಸರವಾದಿಗಳು ಆಗ್ರಹಿಸಿದ್ದಾರೆ.

Related Posts

Leave a Reply

Your email address will not be published. Required fields are marked *