ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕರಾಗಿ ಅಜಿಂಕ್ಯ ರಹಾನೆ ನಾಯಕ ಮತ್ತು ವೆಂಕಟೇಶ್ ಅಯ್ಯರ್ ಉಪನಾಯಕರಾಗಿ ನೇಮಕಗೊಂಡಿದ್ದಾರೆ.
ಐಪಿಎಲ್ ಟಿ-೨೦ ಟೂರ್ನಿಯ 2025ರ ಆವೃತ್ತಿಯಲ್ಲಿ ಕೆಕೆಆರ್ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ. ಕಳೆದ ಕೆಲವು ಆವೃತ್ತಿಗಳಿಂದ ಫ್ರಾಂಚೈಸಿಗಳು ಕಡೆಗಣಿಸಿದ್ದ ರಹಾನೆಗೆ ಮಣೆ ಹಾಕಿ ಅಚ್ಚರಿ ಮೂಡಿಸಿದೆ.
ರಹಾನೆ ಅವರ ಅನುಭವ ಹಾಗೂ ಪ್ರಬುದ್ಧತೆ ಆಧರಿಸಿ ಅವರನ್ನು ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಕೆಕೆಆರ್ ಫ್ರಾಂಚೈಸಿ ಹೇಳಿದೆ.
ಕೆಕೆಆರ್ ತಂಡ ಶ್ರೇಯಸ್ ಅಯ್ಯರ್ ಸಾರಥ್ಯದಲ್ಲಿ ಪ್ರಶಸ್ತಿ ಎತ್ತಿ ಹಿಡಿದಿತ್ತು. ಆದರೆ ಅಯ್ಯರ್ ಬೇಡಿಕೆ ಒಪ್ಪದೇ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ವೆಂಕಟೇಶ್ ಅಯ್ಯರ್ ಅವರನ್ನು ಹರಾಜಿನಲ್ಲಿ 23.75 ಕೋಟಿ ರೂ. ಹಾಗೂ ಅಜಿಂಕ್ಯ ರಹಾನೆ ಅವರನ್ನು 1.5 ಕೋಟಿ ರೂ.ಗೆ ಖರೀದಿಸಲಾಗಿತ್ತು.
ಐಪಿಎಲ್ ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಬ್ಬರಾಗಿರುವ ಕೆಕೆಆರ್ ತಂಡದ ನಾಯಕ ಸ್ಥಾನ ವಹಿಸಿಕೊಳ್ಳುವಂತೆ ಆಹ್ವಾನ ನೀಡಿರುವುದು ಹೆಮ್ಮೆಯ ವಿಷಯ ಎಂದು ರಹಾನೆ ಪ್ರತಿಕ್ರಿಯಿಸಿದ್ದಾರೆ.