ಅಮೆರಿಕದ ಟೆಕ್ಸಾಸ್‍ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕೋಲಾರದ ಗಾಂಧಿನಗರ ಬಡಾವಣೆಯ ಬಾಡಿ ಬಿಲ್ಡರ್ ಮೃತಪಟ್ಟಿದ್ದಾರೆ. ಸುರೇಶ್ ಕುಮಾರ್ (42) ಮೃತಪಟ್ಟವರು.
ಗಾಂಧಿನಗರದ ಚಲಪತಿ ಹಾಗೂ ಮುನಿಯಮ್ಮ ದಂಪತಿಯ ಪುತ್ರ ಸುರೇಶ್ ಮೂರು ದಿನಗಳ ಹಿಂದೆ ಫ್ಲೋರಿಡಾ – ಟೆಕ್ಸಾಸ್‍ನಲ್ಲಿ ನಡೆದಿದ್ದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಅಸು ನೀಗಿದ್ದಾರೆ.
ಮಾಡೆಲಿಂಗ್ ಜೊತೆ ಕನ್ನಡದ ಹಲವು ನಟ ನಟಿಯರಿಗೆ ದೈಹಿಕ ತರಬೇತಿಯನ್ನೂ ಕೂಡ ಸುರೇಶ್ ನೀಡಿದ್ದರು, ಅವರು ದೆಹಲಿ ಮೂಲದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದರು.