ಬಾಗಲಕೋಟೆ: ಸಂಕ್ರಾಂತಿವರೆಗೆ ರಾಜ್ಯದಲ್ಲಿ ಸಿಎಂ ಬದಲಾವಣೆ ದೋಷ ಕಾಡುತ್ತಿಲ್ಲ. ಇಲ್ಲಿವರೆಗೂ ರಾಜನ ಬದಲಾವಣೆ ಆಗುವ ಯಾವುದೇ ಸಾಧ್ಯತೆ ಇಲ್ಲ ಎಂದು ಹಾಸನ ಜಿಲ್ಲೆಯ ಅರಸಿಕೇರೆಯ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಬಾಗಲಕೋಟೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಗಮೇಶ ನಲಿವನೆ ಆದರೆ ಒಳ ಹಡ್ಡ ಬಂದಿದೆ ಬದಲಾವಣೆ ವಿಚಾರದಲ್ಲಿ.ಹೊಳೆಯನ್ನು ಈಜಿದರೆ ಬದಲಾವಣೆ ಆಗಬಹುದು. ಆ ಶಕ್ತಿ ಇದ್ರೆ.ಹಾಲುಮತದವರಿಗೆ ಅಧಿಕಾರ ಬಂದರೆ ಬಿಡಿಸಿಕೊಳ್ಳೋದು ಕಷ್ಟ ಎಂದರು.
ಅವರಾಗಿಯೇ ಅಧಿಕಾರ ತ್ಯಜಿಸಬೇಕು. ಯಾಕೆಂದರೆ ವಿಜಯನಗರ ಸಾಮ್ರಾಜ್ಯ ಹಕ್ಕಬುಕ್ಕರು ಕಟ್ಟಿದ್ದು. ಇವತ್ತು ಅದೇ ಚಿಹ್ನೆ ಇರೋದು ಮೈಸೂರು ದಸರಾ ಅದೇ ಚಿಹ್ನೆಯಲ್ಲಿ ನಡಿತಿರೋದು. ಹಾಲು ಕೆಟ್ಟರು ಹಾಲುಮತ ಕೆಡೋದಿಲ್ಲ. ಆಂತವರ ಕೈಲಿ ಅಧಿಕಾರ ಸಿಕ್ಕಿರೋದರಿಂದ ಬಿಡಿಸೋದು ಕಷ್ಟ. ಅವರಾಗಿಯೇ ಬಿಟ್ಟರೆ ನಿಮಗೆ ಸಿಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ಭವಿಷ್ಯದಲ್ಲಿ ಎರಡು ಒಂದು ಯುಗಾದಿ ಭವಿಷ್ಯ, ಇನ್ನೊಂದು ಸಂಕ್ರಾಂತಿ ಭವಿಷ್ಯ. ಯುಗಾದಿ ಭವಿಷ್ಯ ಪ್ರಕೃತಿಗೆ ಸಂಬಂಧಿಸಿದ್ದು. ಸಂಕ್ರಾಂತಿ ಭವಿಷ್ಯ ರಾಜರಿಗೆ,ದೊಡ್ಡ ದೊಡ್ಡ ವ್ಯಾಪಾರಿಗಳಿಗೆ ಹಡಗಿನಲ್ಲಿ ಬರುವಂತವರಿಗೆ ಬರುತ್ತದೆ ಎಂದರು.
ಒಟ್ಟಿನಲ್ಲಿ ಸ್ವಾಮೀಜಿ ಪಹಲ್ಗಾಮ್ ಉಗ್ರರ ದಾಳಿ ಬಗ್ಗೆ ಉಲ್ಲೇಖಿಸಿ ಯುದ್ದ ಆಗುವ ಲಕ್ಷಣ ಇದೆ ಅಂದಿದ್ದಾರೆ. ಜೊತೆಗೆ ಪ್ರಕೃತಿ ವಿಕೋಪ, ರಾಜಕೀಯದ ಬಗ್ಗೆಯೂ ಭವಿಷ್ಯ ನುಡಿದು ಎಲ್ಲರ ಗಮನ ಸೆಳೆದಿದ್ದಾರೆ.
ಯುಗಾದಿ ಭವಿಷ್ಯದಲ್ಲಿ ನಾವು ಹೇಳಿದ್ದೆವು.ಉತ್ತರದ ನಾಡಿನಲ್ಲಿ ಹಗೆಯ ಹೆಬ್ಬೇಗೆ ಹಬ್ಬೀತು, ಹುಟ್ಟೀತು ಸುತ್ತುವರೆದು ಬರುವಾಗ ಜಗವೆಲ್ಲ ಕೋಳಾದೀತು. ಸಾಮೂಹಿಕ ಹತ್ಯೆಯಾಗುತ್ತದೆ ಅಂತ. ಅದು ಹೇಳಿದ ಕೆಲ ದಿನಗಳಲ್ಲಿ ಕಾಶ್ಮೀರದಲ್ಲಿ ಹತ್ಯೆ ಆಯ್ತು. ಅದು ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ಭೀತಿ ಇದೆ. ಆದರೆ ಯುದ್ಧ ಮಾಡುವವರು ತಯಾರಿ ನಡೆಸಿದ್ದರೆ, ಯುದ್ಧದ ಭೀತಿಯಿಂದ ಪಾಕಿಸ್ತಾನ ತತ್ತರಿಸುತ್ತಿದ್ದಾರೆ. ಎದುರಾಳಿ ಕೂಡ ಹಾಗೆ ಇರಬೇಕು ತಾನೆ ಎದುರಾಳಿ ಬೆಚ್ಚಿದಾಗ ಯಾರ ಮೇಲೆ ಯುದ್ದ ಮಾಡೋದು ಎಂದು ಸ್ವಾಮೀಜಿ ಹೇಳಿದರು.